ಹೋರಾಟ ಎನ್ನುವುದು ಕೇವಲ ಮನುಷ್ಯರ ಜೀವನದಲ್ಲಿ ಮಾತ್ರವಲ್ಲ. ಪ್ರಾಣಿ ಸಾಮ್ರಾಜ್ಯದಲ್ಲಿಯೂ ಕೂಡ ಇದು ನಿತ್ಯದ ಕಥೆ. ಪ್ರಾಣಿ ಜಗತ್ತಿನಲ್ಲಿ ಹೋರಾಟ, ಬೇಟೆ, ಕೊಲ್ಲುವುದು ಇವೆಲ್ಲವೂ ಅಂತ್ಯವಿಲ್ಲದ ಚಕ್ರದಂತೆ ಸುತ್ತುತ್ತಲೇ ಇರುತ್ತೆ. ಅದನ್ನ ನೋಡಿದ್ರೆ ಪ್ರಕೃತಿ ಕ್ರೂರವಾಗಿದೆ ಎನಿಸುತ್ತದೆ. ಆದರೆ ಇನ್ನೊಂದು ಕಡೆ ಅದೇ ಪ್ರಕೃತಿ ಎಷ್ಟು ಸುಂದರವಾಗಿ ಆಹಾರ ಸರಪಣಿಯನ್ನು ಹೆಣೆದಿದೆ ಎಂಬುದು ಅರಿವಾಗುತ್ತೆ.
ಮನುಷ್ಯರು ಅಷ್ಟೇ ಪ್ರಬಲ ಆಗಿದ್ರೆ ಬದುಕಿರುತ್ತಾರೆ, ದುರ್ಬಲರು ಸೋಲುತ್ತಾರೆ. ಪ್ರಾಣಿಗಳಲ್ಲಿಯೂ ಪ್ರಬಲ ಪ್ರಾಣಿ ಭೇಟಿಯಾಡಿ ತನ್ನ ಆಹಾರವನ್ನು ಹುಡುಕಿಕೊಳ್ಳುತ್ತೆ ಅದೇ ದುರ್ಬಲ ಪ್ರಾಣಿ ಸೋಲುತ್ತೆ. ವೈಲ್ಡ್ ಲೈಫ್ ನಲ್ಲಿ ನಡೆಯುವಂತಹ ಕೆಲವು ಘಟನೆಗಳು ನಿಜಕ್ಕೂ ನಮ್ಮನ್ನು ರೋಮಾಂಚನವಾಗಿಸುತ್ತದೆ. ಇದೀಗ ವೈಲ್ಡ್ ಲೈಫ್ ನ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಎರಡು ಎಳೆಯ ಸಿಂಹಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡ ವಯಸ್ಕ ಕಾಡಾನೆ. ಅದೇ ರೀತಿ ಚೆನ್ನಾಗಿ ದಷ್ಟ-ಪುಷ್ಟವಾಗಿ ಬೆಳೆದಿರುವ ಕಾಡುಕೋಣ ಹಾಗೂ ಯುವ ಸಿಂಹದ ನಡುವೆ ನಡೆದೆ ಹೋಯಿತು ದೊಡ್ಡ ಕಾಳಗ.
ಸಿಂಹ ಅವಿತುಕೊಂಡು ನೀರು ಕುಡಿಯಲು ಬಂದ ಕಾಡುಕೋಣದ ಮೇಲೆ ಎರಗಿ ಬರುತ್ತೆ ಅದರ ಕುತ್ತಿಗೆಗೆ ನೇರವಾಗಿ ಬಾಯಿ ಹಾಕಿ ಉಸಿರಾಡಿಸಲು ಕೂಡ ಆಗದಂತೆ ಮಾಡುತ್ತದೆ. ಆದರೂ ಜೀವ ಉಳಿಸಿಕೊಳ್ಳಲು ಕೊನೆಯ ಹಂತದವರೆಗೂ ಕಾಡುಕೋಣ ಹೋರಾಡುವುದನ್ನ ನೀವು ಈ ವಿಡಿಯೋದಲ್ಲಿ ನೋಡಬಹುದು. ಹೇಗಾದರೂ ಮಾಡಿ ಬದುಕಬೇಕು ಅಂತ ಸಾಕಷ್ಟು ಪ್ರಯತ್ನ ಪಡುತ್ತೆ. 60 ಮೈಲುಗಳ ವೇಗದಲ್ಲಿ ಓಡಬಹುದಾದ ಕಾಡುಕೋಣ ಪರಭಕ್ಷಕ ಸಿಂಹದಿಂದ ತಪ್ಪಿಸಿಕೊಳ್ಳುತ್ತಾ ಅಥವಾ ಸಿಂಹಕ್ಕೆ ಆಹಾರವಾಗುತ್ತಾ ನೀವೇ ಈ ವಿಡಿಯೋ ನೋಡಿ.