ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಿಚ್ಚನಿಗೆ ಲವ್ ಪ್ರಪೋಸ್ ಮಾಡಿದ ಉಪೇಂದ್ರ ಚಿಂದಿ…ವಿಡಿಯೋ

255

ಸದ್ಯ ಈ ವರ್ಷ ತೆರೆಕಂಡ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದು ಕೆಜಿಎಫ್ 2ನಿಂದ ಆರಂಭವಾದ ವಿಜಯಯಾತ್ರೆ ಜೇಮ್ಸ್ ವಿಕ್ರಾಂತ್ ರೋಣ 777 ಚಾರ್ಲಿ ಹಾಗೂ ಕಾಂತಾರವರೆಗೂ ಬಿಡುಗಡೆಯಾದ ಸಿನಿಮಾಗಳು ಸಕ್ಸಸ್ ಆಗಿವೆ.

ಹಾಗಂತ ಇಲ್ಲಿಗೇ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಮುಗಿದಿಲ್ಲ. ಹೌದು ಕನ್ನಡ ಚಿತ್ರರಂಗದ ಬತ್ತಳಿಕೆಯಿಂದ ಇನ್ನೂ ಪ್ಯಾನ್ ಇಂಡಿಯಾ ಸಿನಿಮಾಗಳು ಬರೋದಿದೆ. ಅದರಲ್ಲೊಂದು ಆರ್ ಚಂದ್ರು ನಿರ್ದೇಶಿಸುತ್ತಿರುವ ಕಬ್ಜ ಸಿನಿಮಾ. ಸದ್ಯ ಕಬ್ಜ ಹಲವು ತಿಂಗಳುಗಳಿಂದ ಶೂಟಿಂಗ್ ನಡೆಯುತ್ತಿದ್ದು ಅದರಲ್ಲೂ ಕಬ್ಜ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಸಿನಿಮಾ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ಬಾಲಿವುಡ್‌ ಮಂದಿ ಈ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ ಅನ್ನುವ ಮಾತು ಕೂಡ ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿದ್ದೆ.

ಸ್ಯಾಂಡಲ್‌ವುಡ್‌ ಸಿನಿಮಾಗಳು ಈ ಹಿಂದಿನದ್ದಕ್ಕಿಂತ ಅದ್ಭುತ ಸಾಧನೆ ಮಾಡಿದ್ದು ಕನ್ನಡವನ್ನು ಕನ್ನಡ್ ಅಂತಿದ್ದವರು ಕನ್ನಡ ಎನ್ನುವಷ್ಟರ ಮಟ್ಟಿಗೆ ನಮ್ಮ ಭಾಷೆಯ ಸಿನಿಮಾಗಳು ಪಾಠ ಕಳಿಸಿವೆ. ಸದ್ಯ ಈಗ ಇದೇ ಯಶಸ್ಸನ್ನು ಮುಂದುವರೆಸಿಕೊಂಡು ಹೋಗಬೇಕಿದ್ದು ಅಲ್ಲದೆ ಹಿಂದಿ ಬೆಲ್ಟ್‌ನಲ್ಲಿ ಕನ್ನಡ ಸಿನಿಮಾಗಳನ್ನು ಮೆಚ್ಚುಕೊಂಡಿದ್ದರಿಂದ ಮುಂಬರುವ ಸಿನಿಮಾಗಳ ಮೇಲೆ ಬಾಲಿವುಡ್ ಮಂದಿ ಕಣ್ಣಿಟ್ಟಿದ್ದಾರೆ. ಹೀಗಾಗಿ ಈಗಿನಿಂದಲೇ ಕಬ್ಜ ಬಗ್ಗೆ ಬೇಡಿಕೆ ಹೆಚ್ಚಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

ಕಬ್ಬ ಸಿನಿಮಾ ಟೀಸರ್‌ಗೆ ಸಿಕ್ಕಾಪಟ್ಟೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು ಈ ಟೀಸರ್ ನೋಡಿದ ಬಳಿಕ ಬಾಲಿವುಡ್ ಮಂದಿ ಬೇಡಿಕೆ ಇಟ್ಟಿದ್ದಾರಂತೆ. ಹೀಗಾಗಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುವುದನ್ನು ಕಾಯುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಇತ್ತೀಚೆಗೆ ವಿಕ್ರಾಂತ್ ರೋಣ ನಿರ್ಮಾಪಕ ಜಾಕ್ ಮಂಜು ಅವರಿಗೂ ಬಾಲಿವುಡ್‌ ನಿರ್ಮಾಪಕರು ದುಂಬಾಲು ಬಿದ್ದಿದ್ದರಂತೆ. ನಾನು ಕೆಲವು ದಿನಗಳ ಹಿಂದಷ್ಟೇ ಮುಂಬೈಗೆ ಹೋಗಿದ್ದೆ. ಅಲ್ಲಿ ಕಬ್ಜ ಸಿನಿಮಾದ ಹಕ್ಕುಗಳನ್ನು ಕೊಡಿಸಿ ಅಂತ ಸಾಕಷ್ಟು ಮಂದಿ ಕೇಳಿದ್ದಾರೆ ಎಂದು ವಿಕ್ರಾಂತ್ ರೋಣ’ ಸಿನಿಮಾದ ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದರು.

ಅಂದ್ಹಾಗೆ ಕೆಜಿಎಫ್ 2 ಜೇಮ್ಸ್ ವಿಕ್ರಾಂತ್ ರೋಣ 777 ಚಾರ್ಲಿ ಹಾಗೂ ಕಾಂತಾರ ಸಿನಿಮಾಗಳು ಐದು ಭಾಷೆಯಲ್ಲಿ ಬಿಡುಗಡೆಯಾಗಿದ್ದು ಆದರೆ ಕಬ್ಬ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ. ಏಳು ಭಾಷೆಯಲ್ಲಿ ಸಿನಿಮಾ ಡಬ್ ಆಗಿ ಏಕಕಾಲಕ್ಕೆ ರಿಲೀಸ್ ಆಗುತ್ತಿದ್ದು ನಿರ್ದೇಶಕ ಆರ್ ಚಂದ್ರು ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುವುದಕ್ಕೆ ಸಜ್ಜಾಗಿ ನಿಂತಿದ್ದಾರೆ. ಇತ್ತೀಚೆಗೆ ಕಬ್ಜ ಸಿನಿಮಾದ ಹಿಂದಿ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಇನ್ನು ಕಬ್ಜ ಸಿನಿಮಾ ಬಹುದೊಡ್ಡ ತಾರಾಗಣವೇ ಇದೆ.

ಉಪೇಂದ್ರ ಸುದೀಪ್ ಜೊತೆ ಶ್ರೀಯಾ ಶರಣ್​ ನವಾಬ್​ ಷಾ ಕಬೀರ್​ ಸಿಂಗ್​ ದುಹಾನ್​ ಪ್ರಮೋದ್​ ಶೆಟ್ಟಿ ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದು ಕೆಜಿಎಫ್​ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇಷ್ಟೆಲ್ಲಾ ಇದ್ದರೂ ಇನ್ನೂ ಕಬ್ಜ ಸಿನಿಮಾ ರಿಲೀಸ್ ಡೇಟ್ ಮಾತ್ರ ಅನೌನ್ಸ್ ಮಾಡಿಲ್ಲ. ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗುವ ಸಾಧ್ಯತೆಯಿದೆ. ಈ ನಡುವೆ ವೇದಿಕೆ ಮೇಲೆ ಉಪ್ಪಿ ಕಿಚ್ಚನಿಗೆ ಐ ಲವ್ ಯೂ ಯೂ ಮಸ್ಟ್ ಲವ್ ಎಂದಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ? ಕೆಳಗಿನ ವಿಡಿಯೋ ನೋಡಿ.