ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕ್ರಾಂತಿ ಚಿತ್ರದ ಹಾಡಿಗೆ ರಚಿತರಾಮ್ ಡ್ಯಾನ್ಸ್..ಚಿಂದಿ ವಿಡಿಯೋ

2,788

ಕ್ರಾಂತಿ ಸಿನಿಮಾದ 3ನೇ ಹಾಡು ಕೇಳಿ ಶೇಕ್ ಇಟ್ ಪುಷ್ಪವತಿ ಎಂದು ಅಭಿಮಾನಿಗಳು ಕುಣಿತ್ತಿದ್ದು ಮತ್ತೊಮ್ಮೆ ಹರಿ ಭಟ್ರು ಹಾಗೂ ದರ್ಶನ್ ಕಾಂಬಿನೇಷನ್ ಹಿಟ್ ಆಗಿದೆ. ಹೌದು ಹುಬ್ಬಳ್ಳಿಯಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಸಾಂಗ್ ಲೋಕಾರ್ಪಣೆ ಆಗಿದ್ದು ಜನವರಿ 26ಕ್ಕೆ ಕ್ರಾಂತಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರಲಿದೆ. ಸದ್ಯ ಈಗಾಗಲೇ ಧರಣಿ ಹಾಗೂ ಬೊಂಬೊ ಬೊಂಬೆ ಹಾಡುಗಳು ರಿಲೀಸ್ ಆಗಿ ಸಿನಿರಸಿಕರು ಗಮನ ಸೆಳೆದಿದ್ದು ಸದ್ಯ ಇದೀಗ ಪುಷ್ಪವತಿ ಸಾಂಗ್ ಕೂಡ ಅದೇ ಸಾಲಿಗೆ ಸೇರಿಕೊಂಡಿದೆ.

ಹೌದು ದರ್ಶನ್ ಅಭಿಮಾನಿಗಳಂತೂ ಸಾಂಗ್ ಕೇಳುತ್ತಾ ಕುಂತಲ್ಲೇ ಮೈ ಕುಣಿಸುತ್ತಿದ್ದು ನಿಮಿಕಾ ರತ್ನಾಕರ್ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಂದಾಸ್ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಶೇಕ್ ಇಟ್ ಪುಷ್ಪವತಿ ವರ್ಷದ ಹಿಟ್ ಸಾಂಗ್ಸ್ ಲಿಸ್ಟ್ ಸೇರುವ ಸುಳಿವು ಸಿಕ್ತಿದೆ ಎನ್ನಬಹುದು.

ಹೌದು ಶೇಕ್ ಇಟ್ ಪುಷ್ಪವತಿ ಪಕ್ಕಾ ಪಾರ್ಟಿ ಸಾಂಗ್ ಆಗಿದ್ದು ಬಿಂದಾಸ್ ಆಗಿ ಕುಣಿದು ನಲಿಯುವ ಹಾಡಾಗಿದೆ. ಅದ್ಧೂರಿ ಸೆಟ್‌ನಲ್ಲಿ ಸಿಕ್ಕಾಪಟ್ಟೆ ಕಲರ್‌ಫುಲ್‌ ಆಗಿ ಚಿತ್ರೀಕರಣ ಮಾಡಲಾಗಿದ್ದು ನಿಮಿಕಾ ರತ್ನಾಕರ್ ಜೊತೆ ನಟ ದರ್ಶನ್ ಸಖತ್ ಸ್ಟೆಪ್ಸ್ ಹಾಕಿ ಮಿಂಚಿದ್ದಾರೆ. ಹೌದು ಅದರಲ್ಲೂ ಹುಕ್ ಸ್ಟೆಪ್ ಸಖತ್ ವೈರಲ್ ಆಗುತ್ತಿದ್ದು ಸಣ್ಣ ಡ್ಯಾನ್ಸ್ ಝಲಕ್ ಜೊತೆಗೆ ಮೇಕಿಂಗ್ ಮಿಕ್ಸ್ ಮಾಡಿ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡಲಾಗಿದೆ.

ಇನ್ನು ಈ ಹಿಂದೆ ಬಸಣ್ಣಿ ಬಾ ಕಾತಲ ಗಟ್ಟು ಕಾ ರೀತಿಯ ಸ್ಪೆಷಲ್ ಸಾಂಗ್ಸ್ ಮಾಡಿ ಗೆದ್ದಿದ್ದ ವಿ. ಹರಿಕೃಷ್ಣ ಮತ್ತು ಯೋಗರಾಜ್ ಭಟ್ ಜೋಡಿ ಮತ್ತೊಮ್ಮೆ ಈ ಸಲ ಮ್ಯಾಜಿಕ್ ಮಾಡಿದ್ದು ಹಳೇ ಕ್ಯಾಬರೆ ಸಾಂಗ್ಸ್ ನೆನೆಪಿಸುವ ಟ್ಯೂನ್‌ಗೆ ಭಟ್ರು ತಮ್ಮದೇ ಸ್ಟೈಲ್‌ನಲ್ಲಿ ಲಿರಿಕ್ಸ್ ಬರೆದಿದ್ದಾರೆ. ಇನ್ನು ಐಶ್ವರ್ಯ ರಂಗರಾಜನ್ ಜೊತೆ ಸೇರಿ ಹರಿಕೃಷ್ಣ ಅಷ್ಟೇ ಮಜವಾಗಿ ಸಾಂಗ್ ಹಾಡಿದ್ದು ಒಮ್ಮೆ ಕೇಳಿದರೆ ಸಾಕಗಲ್ಲ. ಕೇಳ್ತಾ ಕೇಳ್ತಾ ಪುಷ್ಪವತಿ ಕೇಳುಗರ ಎದೆಗೆ ಲಗ್ಗೆ ಇಡುತ್ತಾಳೆ. ಹೌದು ವೆರೈಟಿ ವರೈಟಿ ಕಾಸ್ಟ್ಯೂಮ್ಸ್‌ನಲ್ಲಿ ದರ್ಶನ್ ನಿಮಿಕಾ ಮಿಂಚಿದ್ದು ಒಂದಷ್ಟು ಡ್ಯಾನ್ಸರ್ಸ್ ಇವ್ರ ಡ್ಯಾನ್ಸ್‌ಗೆ ಸಾಥ್ ಕೊಟ್ಟಿದ್ದಾರೆ.

ಇನ್ನು ನಟ ದರ್ಶನ್ ನನಗೆ ಅಷ್ಟಾಗಿ ಡ್ಯಾನ್ಸ್ ಮಾಡೋಕೆ ಬರಲ್ಲ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಇತ್ತೀಚಿನ ಸಿನಿಮಾಗಳಲ್ಲಿ ಸಖತ್‌ ಆಗಿ ಸ್ಟೆಪ್ಸ್ ಹಾಕಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸದ್ಯ ಇದೀಗ ಮತ್ತೊಮ್ಮೆ ಶೇಕ್ ಇಟ್ ಪುಷ್ಪವತಿ ಎಂದು ದರ್ಶನ್ ಹಾಡಿ ಕುಣಿದು ಕಿಕ್ ಕೊಡ್ತಿದ್ದಾರೆ. ಹೌದು ತೆಲುಗಿನ ಖ್ಯಾತ ಕೊರಿಯೋಗ್ರಫರ್ ಗಣೇಶ್ ಮಾಸ್ಟರ್ ಡ್ಯಾನ್ಸ್ ಕಂಪೋಸ್ ಮಾಡಿದ್ದು ನಟಿ ನಿಮಿಕಾ ಮೊದಲ ಬಾರಿಗೆ ಸ್ಪೆಷಲ್ ನಂಬರ್‌ಗೆ ಹೆಜ್ಜೆ ಹಾಕಿದ್ದಾರೆ.

ಸಾಂಗ್ ಶೂಟಿಂಗ್ ಸೆಟ್‌ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಭೇಟಿ ನೀಡಿರುವುದನ್ನು ನೋಡಬಹುದು.ಸದ್ಯ ಸಾಂಗ್ ರಿಲೀಸ್ ಆದ 12 ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿ ಸದ್ದು ಮಾಡುತ್ತಿದ್ದು ಜೊತೆಗೆ 1 ಲಕ್ಷ 70 ಸಾವಿರ ಲೈಕ್ಸ್ ಗಿಟ್ಟಿಸಿಕೊಂಡಿದೆ. ಇನ್ನು ಸಿನಿರಸಿಕರು ಸಾಂಗ್ ಸೂಪರ್ ಎಂದು ಕಾಮೆಂಟ್ ಮಾಡಿ ತಿಳಿಸುತ್ತಿದ್ದಾರೆ. ಈ ನಡುವೆ ನಟಿ ರಚಿತಾ ರಾಮ್ ಪುಷ್ಪವತಿ ಹಾಡಿಗೆ ಸೊಂಟ ಬಳುಕಿಸಿದ್ದು ಸೀರೆಯಲ್ಲಿ ಹೇಗೆ ಹುಕ್ ಸ್ಟೆಪ್ ಹಾಕಿದ್ದಾರೆ ನೀವೆ ನೋಡಿ..