ವಾರ್ತಾ ಮಂಜರಿ
Trending Stories, Viral News, Gossips & Everything in Kannada

3 ಜನ ಇದ್ದ ಬೈಕಿಗೆ ಅಡ್ಡ ಬಂದ ಹಸು…ಮುಂದೇನಾಯ್ತು ನೋಡಿ ವಿಡಿಯೋ

5,165

Why You Should Always Wear A Helmet Part: ಸಾಮಾನ್ಯವಾಗಿ ಹೆಲ್ಮೆಟ್ ಬಗ್ಗೆ ಪರ-ವಿರೋಧಧ ಮಾತುಗಳು ಏನೇ ಇರಲಿ. ಹೆಲ್ಮೆಟ್ ಯಾಕೆ ಧರಿಸಬೇಕು? ಅದು ಮುಂಬದಿ ಸವಾರ ಇರಲಿ ಅಥವಾ ಹಿಂಬದಿ ಸವಾರ ಇರಲಿ ಹೆಲ್ಮೆಟ್ ಧರಿಸುವುದು ಎಲ್ಲ ರೀತಿಯಿಂದ ಒಳ್ಳೆಯದು. ಹೌದು ಹೆಲ್ಮೆಟ್ ಇಲ್ಲದೇ ತಲೆಗೆ ಪೆಟ್ಟು ಬಿದ್ದು ಅದೆಷ್ಟೋ ಜನರ ಜೀವನವೆ ಹೋಗಿದ್ದು ರಸ್ತೆ ಗುಂಡಿಯಾಗಿದೆ ಹಂಪ್ ಸರಿ ಇಲ್ಲ ಸಿಗ್ನಲ್ ಸರಿ ಇಲ್ಲ ಎಂಬುದು ಒಪ್ಪಿಕೊಳ್ಳಬೇಕಾದ ಸಂಗತಿ ಆಗಿದ್ದರೂ ನಮ್ಮ ಸುರಕ್ಷತೆಗೆ ಹೆಲ್ಮೆಟ್ ಧರಿಸಿದರೆ ಯಾವ ನಷ್ಟವೂ ಇಲ್ಲ.

ಸದ್ಯ ಬೆಂಗಳೂರು ಸಾಗರ್ ಆಸ್ಪತ್ರೆಯ ವೈದ್ಯರು ಹೆಲ್ಮೆಟ್ ಯಾಕೆ ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಸಮಗ್ರ ವಿವರಣೆ ನೀಡಿದ್ದು ನ್ಯೂರೊಸರ್ಜನ್ ಡಾ. ಮಧುಸೂದನ್ ಭವಾನಿ ಅನಂತ್ ಮತ್ತು ಡಾ. ಮೋಹನ್ ವಿವರಣೆ ನೀಡಿದ್ದಾರೆ.ಹೆಲ್ಮೆಟ್ ಯಾಕೆ ಧರಿಸಬೇಕು?ಅಪಘಾತ ಸಂದರ್ಭ ಹೆಲ್ಮೆಟ್ ತಲೆಗೆ ಮತ್ತು ಮೆದುಳಿಗೆ ಗಂಭೀರ ಏಟಾಗುವುದನ್ನು ತಡೆಯುತ್ತದೆ. ಇನ್ನು ತಲೆಬುರುಡೆ ಆಕಾರ ಕಳೆದುಕೊಳ್ಳುವುದನ್ನು ತಪ್ಪಿಸಬಹುದು. ಕಿವಿ ಮತ್ತು ಕಣ್ಣಿಗೂ ಸಂರಕ್ಷಣೆ ಒದಗಿಸುತ್ತದೆ.

ಜೊತೆಗೆ ಮೆದುಳಿಗೆ ಅಥವಾ ತಲೆಗೆ ಸಂಬಂಧಿಸಿದ ಚಿಕಿತ್ಸೆಗೆ ಅತಿ ಹೆಚ್ಚಿನ ವೆಚ್ಚ ತಗಲುತ್ತದೆ. ಇದೊಂದು ಮುಂಜಾಗೃತಾ ಕ್ರಮ ಅನುಸರಿಸಿದರೆ ಯಾರಿಗೂ ಸಮಸ್ಯೆ ಉಂಟಾಗಲ್ಲ. ಇನ್ನು ಮೆದುಳು ಕಸಿ ಮಾಡುವ ವಿಧಾನ ಇನ್ನು ಕಂಡುಹಿಡಿದಿಲ್ಲ ಹೆಲ್ಮೆಟ್ ಹಾಕಿದರೆ ಕೂದಲು ಉದುರುತ್ತದೆ ಎಂಬುದು ಸಮಸ್ಯೆಯೇ ಅಲ್ಲ. ಅದಕ್ಕೆ ಪರ್ಯಾಯ ಪರಿಹಾರ ಮಾರ್ಗವನ್ನ ಅನುಸರಿಸಬಹುದು. ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಸಂಬಂಧಿತ ಅಪಘಾತದಿಂದ ಪ್ರತಿನಿತ್ಯ ಒಬ್ಬ ವ್ಯಕ್ತಿ ಅಗಲುತ್ತಿದ್ದಾನೆ.

ದ್ವಿಚಕ್ರ ವಾಹನದ ಅಪಘಾತದಿಂದ ಅಗಲುವ ನಾಲ್ವರಲ್ಲಿ ಒಬ್ಬರು ಹಿಂಬದಿ ಸವಾರರಾಗಿರುತ್ತಾರೆ.
ಪ್ರತಿವರ್ಷ 1.2 ಮಿಲಿಯನ್ ಜನರು ರಸ್ತೆ ಅಪಘಾತಗಳಲ್ಲಿ ಅಗಲುತ್ತಾರೆ ಮತ್ತು ಲಕ್ಷಾಂತರ ಮಂದಿ ಗಾಯಗೊಳ್ಳುತ್ತಾರೆ ಮತ್ತು ವಿಕಲತೆ ಹೊಂದುತ್ತಾರೆ. ಸದ್ಯ ಬೆಂಗಳೂರಿನಲ್ಲಿ 60 ಲಕ್ಷ ದ್ವಿಚಕ್ರ ವಾಹನ ಸವಾರರಿದ್ದಾರೆ. ಕಳೆದ ವರುಷ 20.7 ಲಕ್ಷ ಬೈಕರ್‍ಗಳಿಗೆ ಹೆಲ್ಮೆಟ್ ಧರಿಸದೇ ಇದ್ದುದಕ್ಕೆ ದಂಡ ವಿಧಿಸಲಾಗಿದೆ.

ಇನ್ನು ಬೆಂಗಳೂರು ನಗರದಲ್ಲಿ ಸಂಚಾರಿ ಪೊಲೀಸರು ಹೆಲ್ಮೆಟ್ ಧರಿಸುವ ಬಗ್ಗೆ ಬೈಕ್ ಸವಾರರಿಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ನಡೆಸುತ್ತಾರೆ. ಆದರೂ ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸುವ ಜನರ ಸಂಖ್ಯೆ ಹೆಚ್ಚಾಗಿಯೇ ಇದೆ. ಮಾರ್ಚ್ ತಿಂಗಳಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸುತ್ತಿದ್ದವರ ವಿರುದ್ಧ 3.5 ಲಕ್ಷ ಕೇಸುಗಳನ್ನು ದಾಖಲು ಮಾಡಿದ್ದು ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸುತ್ತಿದ್ದ ಹಿಂಬಂದಿ ಸವಾರರ ವಿರುದ್ದ 2.1 ಲಕ್ಷ ಕೇಸು ದಾಖಲಾಗಿದೆ.

ಬೆಂಗಳೂರು ನಗರದಲ್ಲಿ ನಾಲ್ಕು ಚಕ್ರದ ವಾಹನಗಳಿಗಿಂತ ಹೆಚ್ಚು ದ್ವಿಚಕ್ರವಾಹನಗಳಿದ್ದು ಬೈಕ್‌ ಸವಾರರು ಮಾತ್ರವಲ್ಲ ಹಿಂಬದಿ ಸವಾರರು ಸಹ ಹೆಲ್ಮೆಟ್ ಧರಿಸಬೇಕು ಎಂಬ ನಿಯಮವಿದೆ. ಆದರೆ ಕಾನೂನು ಪಾಲನೆ ಮಾಡುವವರ ಸಂಖ್ಯೆ ಕಡಿಮೆ ಇದೆ.

ಬೈಕ್ ಸವಾರರು ಹೆಲ್ಮೆಟ್ ಧರಿಸಿದ್ದರೆ ಅಪಘಾತಗಳು ಸಂಭವಿಸಿದಾಗ ತಲೆಗೆ ಆಗುವ ಗಾಯದಿಂದ ಶೇ 69 ಮತ್ತು ಶೇ 42ರಷ್ಟು ಜೀವಹಾನಿಯನ್ನು ಕಡಿಮೆ ಮಾಡಬಹುದಾಗಿದೆ. ಹೆಲ್ಮೆಟ್ ಖರೀದಿ ಮಾಡುವಾಗ ಐಎಸ್‌ಐ ಮಾನ್ಯತೆ ಹೊಂದಿರುವುದನ್ನು ಮಾತ್ರ ಖರೀದಿ ಮಾಡಿ ಎಂದು ಪೊಲೀಸರು ಸಹ ಅರಿವು ಮೂಡಿಸುತ್ತಿದ್ದಾರೆ. ನಿಜಕ್ಕೂ ನಾವು ಹೆಲ್ಮೆಟ್ ಯಾಕೆ ಧರಿಸಬೇಕು ಎಂಬುದನ್ನು ತಿಳಿಬೇಕದರೆ ಲೇಖನಿಯ ಕೆಳಗಿರುವ ವಿಡಿಯೋ ನೋಡಿ ನಿಮಗೆ ತಿಳಿಯುತ್ತದೆ.