ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜಗತ್ತಿನ ಅಪಾಯಕಾರಿ ರಸ್ತೆಯ ತಿರುವಿನಲ್ಲಿ ಏನಾಯ್ತು ನೋಡಿ…ವಿಡಿಯೋ

661

World’s Most Dangerous Roads: ಸಾಮಾನ್ಯವಾಗಿ ರಸ್ತೆಯ  ಪ್ರಯಾಣ ಬಹಳ ಸುರಕ್ಷಿತ ಸುಖಕರವಾಗಿರಬೇಕು ಎಂದರೆ ಏನೇನು ಚೆನ್ನಾಗಿರಬೇಕು ಎಂದು ನೋಡುವುದಾದರೆ ರಸ್ತೆ ವಾಹನ ಮತ್ತು ನುರಿತ ಚಾಲಕ ಎನ್ನಬಹುದು. ಹೌದು ಈ ಕಾಂಬಿನೇಷನ್ ಚೆನ್ನಾಗಿದ್ದರೆ ನಮ್ಮ ರಸ್ತೆ ಪ್ರಯಾಣ ಸಹ ಬಹಳ ಸುರಕ್ಷಿತವಾಗಿರುತ್ತದೆ.

ಆದರೆ ವಾಹನಗಳು ಓಡಾಡುವ ರಸ್ತೆಗಳೇ ಅಪಾಯಕಾರಿಯಾದರೆ ಖಂಡಿತ ಅಪಘಾತಗಳು ತಪ್ಪಿದ್ದಲ್ಲ.  ಸುರಕ್ಷಿತ ಪ್ರಯಾಣಕ್ಕೆ ಗುಣಮಟ್ಟದ ರಸ್ತೆಗಳು ಹಾಗೂ ಹೆಚ್ಚು ಅಪಾಯಕಾರಿಯಲ್ಲದ ರಸ್ತೆಗಳೂ ಬಹಳ ಪ್ರಮುಖವಾಗುತ್ತವೆ.  ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ  ನಮ್ಮ ಭಾರತದ ರಸ್ತೆಗಳನ್ನು ನೋಡಿ ಹೆಚ್ಚು ಡೇಂಜರಸ್ ಎಂದು ಭಾವಿಸಿಕೊಳ್ಳುತ್ತಾರೆ.

ಆದರೆ ಮಾತ್ರ ಜಗತ್ತಿನಲ್ಲೇ ಅತಿ ಹೆಚ್ಚು ಡೇಂಜರಸ್ ರಸ್ತೆಗಳು ಇರುವುದು ದಕ್ಷಿಣ ಆಫ್ರಿಕಾದಲ್ಲಿ ಎಂಬುದು ನಿಮಗೆ ಗೊತ್ತಾ ಸದ್ಯ  ಈಗಾಗಲೇ ಈ ಕುರಿತುಅಂತಾರಾಷ್ಟ್ರೀಯ ಚಾಲಕರ ಸಂಘವಾದ ಝುಟೋಬಿ  ಸಂಶೋಧನಾ ಅಧ್ಯಯನವನ್ನು ನಡೆಸಿದ್ದು ಈ ವರದಿಯ ಪ್ರಕಾರ ವಾಹನ ಚಾಲನೆಗೆ ದಕ್ಷಿಣ ಆಫ್ರಿಕಾ ಜಗತ್ತಿನ ನಂಬರ್ ಓನ್ ಡೇಂಜರಸ್ ರಸ್ತೆಗಳನ್ನು ಹೊಂದಿದೆ ದೇಶ ಎಂಬುವ ಸತ್ಯ ತಿಳಿದು ಬಂದಿದೆ.

ಈ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದ್ದು ಕೊಂಚ ನಾವುಗಳು ಖುಷಿ ಪಡಬಹುದಾಗಿದ್ದು ಈ ಸಮೀಕ್ಷೆಯಲ್ಲಿ ಒಟ್ಟು 56 ದೇಶಗಳ ರಸ್ತೆ ಪ್ರಯಾಣವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದ್ದು ಥಾಯ್ಲೆಂಡ್ ಎರಡು ಮತ್ತು ಅಮೆರಿಕ ಮೂರನೇ ಸ್ಥಾನದಲ್ಲಿರುವುದು ಸಾಕಷ್ಟು ಮಂದಿಗೆ ಅಚ್ಚರಿ ಮೂಡಿಸಿದೆ.

ಜಗತ್ತಿನ ನಂಬರ್ ಓನ್ ಸುರಕ್ಷಿತ ರಸ್ತೆಗಳು ನಾರ್ವೇ ರಾಷ್ಟ್ರದಲ್ಲಿದ್ದು ಸುರಕ್ಷಿತ ರಸ್ತೆಗಳ ಪಟ್ಟಿಯಲ್ಲಿ ನಾರ್ವೆಯ ನೆರೆಹೊರೆಯಾಗಿರುವ ಸ್ವಿಡನ್ ಮೂರನೇ ಸ್ಥಾನದಲ್ಲಿದೆ. ಇನ್ನು ಜಪಾನ್ ಎರಡನೇ ಸ್ಥಾನದಲ್ಲಿರುವುದಾಗಿ  ವರದಿಯಲ್ಲಿದೆ. ಇದೀಗ ಅಪಾಯಕಾರಿ ರಸ್ತೆಯಲ್ಲಿ ವಾಹನ ಸಂಚಾರ ಹೇಗಿರುತ್ತೆ ಎನ್ನುವ ಗ್ರಾಫಿಕ್ ವಿಡಿಯೋ ವೈರಲ್ ಆಗಿದೆ ನೋಡಿ .