ಚಿತ್ರರಂಗ ಅಂದ್ಮೇಲೆ ಸ್ಟಾರ್ ವಾರ್ಗಳೇನು ಹೊಸದಲ್ಲ. ಯಾರಾದರೂ ಒಬ್ಬ ಅಭಿಮಾನಿ ಮತ್ತೊಬ್ಬ ಸ್ಟಾರ್ ನಟನ ಮೇಲೆ ತಿರುಗಿ ಬೀಳೋದು, ಆ ಸ್ಟಾರ್ ನಟ ಅಭಿಮಾನಿಗಳು ರೊಚ್ಚಿಗೇಳುವುದು ಹಿಂದಿನಿಂದಲೂ ನಡೆಯುತ್ತಿದೆ.ಇನ್ನೊಂದು ಕಡೆ ಇಬ್ಬರು ಸೂಪರ್ಸ್ಟಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಸಿನಿಮಾಗಳು ರಿಲೀಸ್ ಆದಾಗ ಟೀಕೆ ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ಕೆಸರು ಎರಚಿಕೊಳ್ಳುತ್ತಾರೆ. ಇದು ಸ್ಟಾರ್ ವಾರ್ಗೆ ಎಡೆ ಮಾಡಿಕೊಟ್ಟಿದ್ದೂ ಇದೆ.
ಆದರೆ, ಇಲ್ಲೊಂದು ಸನ್ನಿವೇಶದಲ್ಲಿ ವ್ಯಕ್ತಿಯೊಂದು ಸುಖಾಸುಮ್ಮನೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅನ್ನು ನಿಂದಿಸಿ ವಿಡಿಯೋ ಒಂದನ್ನು ಹೊರಹಾಕಿದ್ದ. ಅದು ಪುನೀತ್ ರಾಜ್ಕುಮಾರ್ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು. ಅದೇ ವ್ಯಕ್ತಿ ಈಗ ಅಪ್ಪು ಹಾಗೂ ಅವರ ಅಭಿಮಾನಿಗಳಿಗೆ ಕ್ಷಮೆ ಕೋರಿದ್ದಾನೆ.ಅದ್ರೂ ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಒಂದೆರಡು ದಿನಗಳ ಹಿಂದೆ ಸೋಶಿಯಲ್ ಮೀಡಿಯಾ ಹಾಗೂ ವಾಟ್ಸ್ಆಪ್ನಲ್ಲಿ ವಿಡಿಯೋ ಒಂದು ಓಡಾಡುತ್ತಿತ್ತು. ಆತನೇ ವಿಡಿಯೋದಲ್ಲಿ ಹೇಳಿಕೊಂಡಿರುವಂತೆ, ಈ ಯುವಕನ ಹೆಸರು ಪುಟ್ಟ. ಲಿಂಗದೇವರು ಕೊಪ್ಪಲು ನಿವಾಸಿ. ಈತ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನಿಂದಿಸಿ ವಿಡಿಯೋ ಮಾಡಿದ್ದ. ಆ ವಿಡಿಯೋ ಕೊನೆಯಲ್ಲಿ ತಾನು ದರ್ಶನ್ ಅಭಿಮಾನಿ ಅಂತಲೂ ಹೇಳಿಕೊಂಡಿದ್ದಾನೆ. ಇದು ಪುನೀತ್ ಅಭಿಮಾನಿಗಳನ್ನು ಕೆರಳಿಸಿತ್ತು. ಯುವಕನ ವಿರುದ್ಧ ಕಿಡಿಕಾರಿದ್ದರು. ತಕ್ಷಣವೇ ಈ ಯುವಕ ಕ್ಷಮೆಯನ್ನೂ ಕೇಳಿದ್ದಾನೆ.
ಪುನೀತ್ ರಾಜ್ಕುಮಾರ್ ನಿಂದಿಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದರು. ಅಲ್ಲದೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳೂ ಕೆರಳಿದ್ದರಿಂದ ಯುವಕ ಕ್ಷಮೆಯನ್ನು ಕೇಳಿದ್ದಾನೆ. ‘ ಅದು ಅಚಾನಕ್ ಆಗಿ ಆಗಿದ್ದು, ಪುನೀತ್ ಸರ್ ಬಗ್ಗೆ ಹಾಗೆ ಮಾತಾಡಿದ್ದು ದೇವರಾಣೆ ತಪ್ಪಾಯ್ತು. ನನ್ನನ್ನು ಕ್ಷಮಿಸಿ. ಯಾಕಂದ್ರೆ, ಸಿನಿಮಾದಲ್ಲಿ ನಾನುನೂ ಎಲ್ಲರನ್ನೂ ಇಷ್ಟ ಪಡುತ್ತೇನೆ.
ಈಗ ತಪ್ಪಾಗಿದೆ. ಇನ್ನೊಮ್ಮೆ ಈತರ ತಪ್ಪಾಗಲ್ಲ. ಅಪ್ಪು ಸರ್ಗೆ ಸುಮಾರು ಸಲ ಬೌನ್ಸರ್ ಆಗಿ ಕೆಲಸ ಮಾಡಿದ್ದೀನಿ. ಅವರೊಂದಿಗೂ ಇದ್ದೀನಿ. ತುಂಬಾ ಅಭಿಮಾನವಿದೆ. ಲೈಫ್ನಲ್ಲಿ ಫಸ್ಟ್ ಟೈಮ್ ಆತರ ಮಾಡಿದ್ದು, ಅಪ್ಪು ಸರ್ ಅಂತಾನೇ ಅವರನ್ನು ಮಾತಾಡಿಸುತ್ತಿದ್ದದ್ದು. ಅದು ಬೇರೆ ಕಾರಣಕ್ಕೆ ಆಗಿದ್ದು, ಇನ್ನೊಮ್ಮೆ ಈತರ ತಪ್ಪಾಗಲ್ಲ. ಪುನೀತ್ ಸರ್ ಅಭಿಮಾನಿಗಳು ಮನಸ್ಸಿಗೆ ಹಾಕಿಕೊಳ್ಳದೆ ಇದೊಂದು ಸಾರಿ ಕ್ಷಮಿಸಿ. ಲೈಫ್ನಲ್ಲಿ ಇನ್ನೊಂದು ಸಲ ಈತರ ಆಗದಂತೆ ನೋಡಿಕೊಳ್ಳುತ್ತೀನಿ. ಅವರನ್ನು ದೇವರ ತರನೇ ನೋಡುತ್ತೇನೆ.’ ಎಂದು ಪುಟ್ಟ ಎಂಬ ಯುವಕ ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.
ಇದೇ ಯುವಕ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಷ್ಟೇ ಅಲ್ಲದೆ, ಅಪ್ಪು ಫೋಟೊಗಳನ್ನಿಟ್ಟು ಪೂಜೆಯನ್ನೂ ಸಲ್ಲಿಸಿದ್ದಾನೆ. ‘ ಎಲ್ಲರಿಗೂ ಇನ್ನೂ ಒಂದು ಬಾರಿ ಕ್ಷಮೆ ಕೇಳುತ್ತೇನೆ. ದಯವಿಟ್ಟು ಕ್ಷಮಿಸಿ ಸರ್. ತಪ್ಪಾಯ್ತು.’ ಅಂತ ಅಪ್ಪು ಫೋಟೊಗೆ ಪೂಜೆ ಸಲ್ಲಿಸುವ ಮೂಲಕ ಯುವಕ ಕ್ಷಮೆ ಕೇಳಿದ್ದಾನೆ. ಇದನ್ನೂ ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಪುನೀತ್ ಅಭಿಮಾನಿಗಳು ಸಿಟ್ಟು ಗೊಂಡು ಆತನ ಮನೆ ಮುಂದೆ ದಾಳಿ ಮಾಡಲು ಸಿದ್ದರಾಗಿದ್ದಾರೆ.ಆದರೆ ರಾಜ್ಕುಟುಂಬ ಕ್ಷಮಿಸುವ ಕುಟುಂಬ.ಪುನೀತ್ ಅಭಿಮಾನಿಗಳು ರೊಚ್ಚು ಗೆದ್ರು ಶಿವಣ್ಣ,ಅಶ್ವಿನಿ,ಕ್ಷಮಿಸಿ ಬಿಟ್ಟಿದ್ದಾರೆ.