ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಶುಭ ಪೂಂಜಾ ಕೋಟ್ಯಾಧಿಪತಿ ಆಡುವಾಗ ಏನಾಯ್ತು ನೋಡಿ…ಚಿಂದಿ ವಿಡಿಯೋ

89,974

KBS SHUBHA PUNJA FULL EPISODE: ಯಾಕಿಂಗ್ ಆಡ್ತಾರೋ ಈ ಹುಡುಗರು ಯಾಕಿಂಗ್ ಆಡ್ತಾರೋ‌ ಈ ಹುಡುಗರು ಈ ಹಾಡು ಎವರ್ ಗ್ರೀನ್ ಮೊಗ್ಗಿನ ಮನಸ್ಸಿನ ಹಾಡು. ಈ ಹಾಡು ನೆನೆದಾಗ ಗುಂಡು ಮುಖದ ಶುಭಪೂಂಜಾ ಅವರು ನೆನಪಾಗುತ್ತಾರೆ. ಅವರು ಸಿನೆಮಾ ರಂಗದಲ್ಲಿ ಸಕ್ರಿಯರಾದಂತೆ ಸಾಂಸಾರಿಕ ಜೀವನದಲ್ಲಿ ಕಾಲಿಡುವ ಹೊತ್ತಿಗೂ ಸಾಕಷ್ಟು ಗಾಳಿಮಾತಿಗೆ ಕಾರಣರಾಗಿದ್ದರು. ಶುಭಾ ಪೂಂಜಾ ಅವರು ತಮ್ಮ ಬಹುಕಾಲದ ಗೆಳೆಯ ಸುಮಂತ್ ಮಹಾಬಲ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ವಿಚಾರವನ್ನು ನಿನ್ನೆ ಸ್ವತಃ ನಟಿಯೇ ತಮ್ಮ ಇನ್ ಸ್ಟಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು ಎಂದು ಬರೆದುಕೊಂಡಿದ್ದರು. ಇದೀಗ ಅದರ ಬೆನ್ನಲ್ಲೆ ಇತ್ತೀಚೆಗೆ ಅವರು ಈ ಹಿಂದೆ ಪಾಲ್ಗೊಂಡಿದ್ದ ಕಾಮಿಡಿ ಶೋ ಒಂದರ ವೀಡಿಯೋ ಜಲಕ್ ಫುಲ್ ಫೇಮಸ್ ಆಗಿದ್ದಾರೆ.

ಸುಮಾರು ಒಂಬತ್ತು ವರ್ಷದ ಹಿಂದೆ ಶುಭ ಪುಂಜಾ ಅವರು ಸಿನೆಮಾ ಹಾಗೂ ಸಾಮಾಜಿಕ ರಂಗದಲ್ಲಿ ಎಷ್ಟು ಸಕ್ರಿಯರಾಗಿದ್ದರು ಎಂಬುದು ಎಲ್ಲರಿಗೂ ತಿಳಿದೆ ಇದೆ. ಅದೇ ರೀತಿ‌ ಅವರ ಪರಾರಿ ಸಿನೆಮಾ ಸೂಪರ್ ಹಿಟ್ ಆದದ್ದು ಸಹ ನಮಗೆಲ್ಲ ತಿಳಿದೇ ಇದೆ. ಅದೇ ರೀತಿ ಈ‌ಸಿನೆಮಾದಲ್ಲಿ ಪ್ರಮೋಶನ್ ಲಾಂಚ್ ಮಾಡುವ ಸಂದರ್ಭ ಶುಭಪೂಂಜಾ ಅವರು ಹಲವು ಸಾಮಾಜಿಕ ಮಾಧ್ಯಮದಲ್ಲಿ ಹಾಗೂ ಟಿವಿ ರಿಯಾಲಿಟಿ ಶೋ ನಲ್ಲೂ ಭಾಗಿ ಆಗಿದ್ದಾರು.

ಖಾಸಗಿ ವಾಹಿನಿಯೊಂದರಲ್ಲಿ ಅವರು ಪಾಲ್ಗೊಂಡಿದ್ದು ಸದ್ಯ ಈ ಹಳೇ ವೀಡಿಯೋ ತುಂಬಾ ಫೇಮಸ್ ಆಗುತ್ತಿದೆ. ಈ ವೀಡಿಯೋದಲ್ಲಿ ಶುಭ ಪುಂಜಾ ತಮ್ಮ ಸಿನೆಮಾ ಬಗ್ಗೆ ಅಲಲ್ಲಿ ಮಾತನಾಡಿದ್ದು‌ ಮಾತ್ರವಲ್ಲದೆ ಮಾತಿನ ಪಟಾಕಿಯನ್ನು ಸಹ ಚೆಲ್ಲಿದ್ದಾರೆ. ಶುಭಾ ಅವರು ಮಂಗಳೂರು ಮೂಲದವರೆಂದು ನಮಗೆಲ್ಲ ತಿಳಿದೇ ಇದೆ ಹೀಗಾಗಿ ವಾಹಿನಿಯ ಆ್ಯಂಕರ್ ಹಲವು ಕಾಮಿಡಿ ಪ್ರಶ್ನೆಯನ್ನು ಸಹ ಕೇಳಿದ್ದು ಅದಕ್ಕೆ ಶುಭಪುಂಜಾ ಫನ್ನಿಯಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ರಿಯಾಲಿಟಿ ಶೋ‌ ಹೆಸರು ಕೋನ್ ಬನೆಗಾ ಶೂನ್ಯಾಧಿಪತಿ ಎಂದಾಗಿದ್ದು ಇದರಲ್ಲಿ ಮೊದಲು ಕಾರ್ಯಕ್ರಮಕ್ಕೆ ಆಗಮಿಸುವ ಸ್ಪರ್ಧಾಳುಗಳು ಐವತ್ತು ಸಾವಿರ ಹಣ ನೀಡಬೇಕು ಸರಿ ಉತ್ತರ ನೀಡಿದರೆ ಹಣ ಡಬಲ್ ಉತ್ತರ ತಪ್ಪಾದರೆ ಸ್ಪರ್ಧಾಳುಗಳ ಹಣ ಕಂಪೆನಿ ಪಡೆಯುತ್ತದೆ ಎಂದು ಆ್ಯಂಕರ್ ಅಶೋಕ್ ಅವರು ತಮ್ಮ ಆಟದ ಬಗ್ಗೆ ವಿವರಣೆಯನ್ನು ಸಹ ನೀಡುತ್ತಾರೆ.

ಇದರಲ್ಲಿ ಮೊದಲಿಗೆ ಮೂರು ಲೈಫ್ ಲೈನ್ ವಿವರಣೆ ನೀಡಲಾಗಿರುತ್ತದೆ ಹಾಗೂ ಚಿಯರ್ ಗರ್ಲ್ಸ್ ಎನ್ನುವ ಕಾಂಸೆಪ್ಟ್ ಸಹ ತಿಳಿಸಲಾಗುತ್ತದೆ. ಒಟ್ಟಾರೆ ಇದೊಂದು ಕಾಮಿಡಿ ಶೋ‌ಆಗಿದ್ದು ಸದ್ಯ ಈ ಹಳೇ ವೀಡಿಯೋ ಎಲ್ಲೆಡೆ ಹರಿದಾಡುತ್ತಿದ್ದು ಶುಭಾ ಪೂಂಜಾ ಅವರ ಸೆನ್ಸ್ ಆಫ್ ಹ್ಯೂಮರ್ ಅನ್ನು ಜನ ಮೆಚ್ಚುತ್ತಿದ್ದಾರೆ.