ವಾರ್ತಾ ಮಂಜರಿ
Trending Stories, Viral News, Gossips & Everything in Kannada

Amulya: ಅವಳಿ ಮಕ್ಕಳಿಗೆ ಹೆಸರಿಡಲು ಸ್ವಾಮೀಜಿ ಬಳಿ ಬಂದ ಅಮೂಲ್ಯ…ಚಿಂದಿ ವಿಡಿಯೋ

426

Amulya jagadish twin babies naming: ಕನ್ನಡ ಚಿತ್ರರಂಗದ ಹಾಲ್ಗೆನ್ನೆ ಸುಂದರಿ ನಟಿ ಅಮೂಲ್ಯ ರವರು ಬಹಳ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಯಶಸ್ಸು ಹಾಗೂ ಕೀರ್ತಿ ಎಲ್ಲವನ್ನು ಕೂಡ ಗಳಿಸಿದ ನಟಿಯಾಗಿದ್ದು ಬಾಲಕಲಾವಿದೆಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಾರೆ ನಟಿ ಅಮೂಲ್ಯ.

2007 ರಲ್ಲಿ ಕಲಾಸಾಮ್ರಾಟ ಎಸ್ ನಾರಾಯಣ್ ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ನಾಯಕಿಯಾಗಿದ್ದು ಆ ಸಿನಿಮಾ ಯಾವ ರೀತಿ ದೊಡ್ಡ ಯೆಶಸ್ಸು ಕಂಡಿತ್ತು ಎಂವುದು ತಮಗೆಲ್ಲರಿಗೂ ಕೂಡ ಗೊತ್ತಿರುವ ವಿಚಾರವಾಗಿದೆ. ಇನ್ನು ಚೆಲುವಿನ ಚಿತ್ತಾರ ಸಿನಿಮಾ ಯೆಶಸ್ಸು ಕಂಡ ಬಳಿಕ ನಟಿ ಅಮೂಲ್ಯರವರಿಗೆ ಅವಕಾಶದ ಸುರಿಮಳೆಯೇ ಹರಿದು ಬರುತ್ತದೆ.

ಹೌದು ಬಹುತೇಕ ಕನ್ನಡದ ಎಲ್ಲಾ ಟಾಪ್ ನಟರ ಸಿನಿಮಾಗಳಲ್ಲಿ ನಾಯಕಿಯಾಗುವ ಅವಕಾಶ ಪಡೆದುಕೊಂಡ ಅಮೂಲ್ಯ ಆದರೆ 2017 ರಲ್ಲಿ ದಿಢೀರ್ ಎಂದು ರಾಜಕೀಯದ ಬ್ಯಾಗ್ರೌಂಡ್ ನವರಾದ ಜಗದೀಶ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಇನ್ನು ಮದುವೆ ನಂತರ ಅಮೂಲ್ಯ ಹೆಚ್ಚಾಗಿ ನಟಿಸಲಿಲ್ಲ ಚಿತ್ರರಂಗದಿಂದ ದೂರ ಉಳಿದಿದ್ದು ಮುಗುಳುನಗೆ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ಅಮೂಲ್ಯ ನಟಿಸಲಿಲ್ಲ. ಇದೀಗ ಅವಳಿ ಮಕ್ಕಳ ತಾಯಿ ಅಮೂಲ್ಯ ಮಗುವನ್ನು ಹೆಸರಿಡುವುದಕ್ಕಾಗಿ ಸ್ವಾಮೀಜಿ ಬಳಿ ಕರೆತಂದ ವಿಡಿಯೋ ನೋಡಿ.