ಈ ವನ್ಯ ಜೀವನವೇ ಹಾಗೇ ಅಲ್ಲಿ. ಒಂದು ಪ್ರಾಣಿಗಳು ಬದುಕ ಬೇಕು ಎಂದರೇ ಮತ್ತೊಂದು ಪ್ರಾಣಿಯನ್ನು ಬೇಟೆಯಾಡಿ ತಿನ್ನಲೇ ಬೇಕು. ಅರಣ್ಯಗಳು ನೋಡಲು ಎಷು ಸುಂದರವಾಗಿರುತ್ತದ್ದೋ ಅಲ್ಲಿ ನಡೆಯುವ ಕಾಡು ಪ್ರಾಣಿಗಳ ಕಾಳಗ ಮಾತ್ರ ಅತ್ಯಂತ ಭಯಾನಕವಾಗಿರುತ್ತದೆ.
ಹೌದು ಅರಣ್ಯದ ರಾಜ ಸಿಂಹನ ಅರ್ಭಟ, ಹುಲಿ ಹಾಗೂ ಚಿರತೆಯ ವೇಗದ ಬೇಟೆ, ಜಿಂಕೆ ಹಾಗೂ ಸಸ್ಯಹಾರಿ ಪ್ರಾಣಿಗಳ ಅಸಾಯಕತೆ ಹಾಗೂ ಊಹಿಸಲಾರದ ಕಾಳಗಗಳು ಇವೆಲ್ಲವೂ ಕೂಡ ಕಾಡಿನ ಪ್ರಪಂಚದ ವಿಶೇಷತೆಯಾಗಿದ್ದು, ನೋಡುಗರಿಗೆ ನಡುಕ ತರಿಸಿವುದಂತು ಸತ್ಯ.
ಇನ್ನು ನಮಗೆ ಸುತ್ತಮುತ್ತಲಿರುವ ಹಾವುಗಳು ಇದ್ದಕಿದ್ದ ಹಾಗು ಕಂಡರೆ ಎದೆ ಝಲ್ ಎನ್ನುತ್ತದೆ. ಅಂತಹದರಲ್ಲಿ ಬಲಿಷ್ಠವಾದ ಹಾಗೂ ದೈತ್ಯವಾದ ಹೆಬ್ಬಾವನ್ನು ಪ್ರತ್ಯಕ್ಷವಾಗಿ ಕಂಡರೆ ಎಂತಹವರಾದರು ಕೂಡ ಮೂರ್ಚೆ ಹೋಗುವುದಂತು ಸತ್ಯ ಬಿಡಿ.
ಯಾಕೆಂದರೆ ಮನುಷ್ಯನನ್ನೇ ನುಂಗಿ ಹಾಕುವ ಸಾಮರ್ಥ್ಯ ನ್ನು ಈ ಹೆಬ್ಬಾವುಗಳು ಹೊಂದಿದ್ದು, ಸಿಕ್ಕ ಬೇಟೆಯನ್ನು ಎಂದಿಗೂ ಕೂಡ ಬಿಡುವುದಿಲ್ಲ. ತನ್ನ ಬೇಟೆ ಸಿಕ್ಕ ತಕ್ಷಣ ಮೊದಲು ಅದರ ದೇಹನ್ನು ತನ್ನ ಬಾಲದಿಂದ ಸುತ್ತುವರೆದು ಮೂಳೆಗಳನೆಲ್ಲಾ ಪುಡಿ ಪುಡಿ ಮಾಡಿ ನಂತರ ನಿಧಾನವಾಗಿ ಮುಖದ ಕಡೆಯಿಂದ ನುಂಗುತ್ತಾ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ. ಸದ್ಯ ಇದೀಗ ಹಾವು ಎಂಟ್ರಿ ಕೊಟ್ಟ ವಿಡಿಯೋ ನೋಡಿ.