ಈಗ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಇದೀಗ ವ್ಯತ್ಯಾಸವೇ ಇಲ್ಲದಂತಾಗಿದ್ದು ಅದೆಷ್ಟೋ ಮಕ್ಕಳು ತಮ್ಮ ಶಿಕ್ಷಕರ ಹೆಗಲ ಮೇಲೆ ಕೈ ಹಾಕಿ ನಿಂತು ಫೋಟೋ ತೆಗೆಸಿಕೊಂಡಿದ್ದೂ ಕೂಡ ಇದೆ. ಅದಷ್ಟೇ ಅಲ್ಲ ಶಿಕ್ಷಕಿ ತನ್ನ ವಿದ್ಯಾರ್ಥಿ ಜೊತೆನೇ ಸಂಬಂಧ ಬೆಳೆಸಿ ಮದುವೆ ಆಗಿದ್ದೂ ಕೂಡ ಇದೆ.
ಇಂತಹ ಘಟನೆಗಳು ಇದೀಗ ಕಾಮನ್ ಅನ್ನಿಸಿಬಿಟ್ಟಿದ್ದು ಇನ್ನು ಕೆಲವರು ತಮ್ಮ ವಿದ್ಯಾರ್ಥಿಗಳ ಜೊತೆ ಅದೆಷ್ಟು ಕ್ಲೋಸ್ ಆಗಿರುತ್ತಾರೆ ಅಂದರೆ ಅವರು ಗುರು ಶಿಕ್ಷಕರು ಅಂತ ಹೇಳಲೇ ಸಾಧ್ಯವಿಲ್ಲ. ಈ ಬಗ್ಗೆ ಕೇಳಿದರೆ ಮಕ್ಕಳಲ್ಲಿ ಭಯ ಹುಟ್ಟಿಸಬಾರದು ಶಿಕ್ಷಕರನ್ನು ಕೂಡ ಗೆಳೆಯರಂತೆ ಕಾಣಬೇಕು ಅವರು ಎಂದು ಹೇಳುತ್ತಾರೆ.
ಸದ್ಯ ಇದೀಗ ಅದಕ್ಕೆ ಸರಿಯಾಗಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಒಬ್ಬ ಶಿಕ್ಷಕಿ ಮಾಡ್ ಆಗಿ ಸೀರೆ ಉಟ್ಟಿದ್ದಲ್ಲದೆ ತನ್ನ ವಿದ್ಯಾರ್ಥಿ ಜೊತೆ ಪಬ್ ಪಾರ್ಟಿಗಳಲ್ಲಿ ಜೋಡಿಗಳು ನೃತ್ಯ ಮಾಡುವಂತೆ ಮಾಡಿದ್ದಾರೆ.
ಹೌದು ವಿದ್ಯಾರ್ಥಿಗಳ ಸೆಂಡ್ ಆಫ್ ಕಾರ್ಯಕ್ರಮದಲ್ಲಿ ಶಿಕ್ಷಕಿಯೊಬ್ಬಳು ತನ್ನ ಸ್ಟೂಡೆಂಟ್ ಜೊತೆ ಈ ರೀತಿ ಡ್ಯಾನ್ಸ್ ಮಾಡಿರುವುದು ಅನೇಕರ ಕೆಂಗಣ್ಣಿಗೆ ಕಾರಣವಾಗಿದ್ದು ಇದು ಮಕ್ಕಳಲ್ಲಿ ಮನಸ್ಸನ್ನು ಹಾಳು ಮಾಡುತ್ತದೆ ಅನ್ನುವುದೇ ಅನೇಕರ ಅಭಿಪ್ರಾಯವಾಗಿದೆ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.