ಪ್ರತಿಯೊಬ್ಬರಿಗೂ ಕೂಡ ಹುಟ್ಟುತ್ತಲೇ ಆ ದೇವರು ಒಂದಲ್ಲಾ ಒಂದು ರೀತಿಯಾ ಕಲೆಯನ್ನು ವರವಾಗಿ ನೀಡಿರುತ್ತಾನೆ. ಆದರೆ ಅದನ್ನು ನಾವು ಕಂಡುಕೊಳ್ಳಬೇಕು ಅಷ್ಟೆ.ಇದೇ ಕಾರಣಕ್ಕಾಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಜೊತೆಗೆ, ಕ್ರೀಡೆ, ಪಿಕ್ ಅಂಡ್ ಸ್ಪೀಚ್ ಸ್ಪರ್ಧಿಗಳು ಹಾಗೂ ಮನರಂಜಾ ಕಾರ್ಯಕ್ರಮಗಳು ಸೇರಿದಂತೆ ಅನೇಕ ರೀತಿಯಾ ಕಾರ್ಯಕ್ರಮಗಳನ್ನು ಅಯೋಜಿಸಿ ಮಕ್ಕಳ ಟಾಲೆಂಟ್ ಹೊರ ತೆಗೆಯುತ್ತಾರೆ.
ಅದರೆ ಇದರಲ್ಲಿ ಬಹು ಪಾಲು ಮಕ್ಕಳು ಅಂಜಿಕೊಂಡು ಭಾಹವಹಿಸದ ಸುಮ್ಮಾನಗಿ ಬಿಡುತ್ತಾರೆ. ಹಾಗೇ ಮಾಡುವುದು ಬಹಳ ತಪ್ಪು.. ನಮ್ಮಲಿರುವ ಕಲೆಯನ್ನು ಪ್ರದರ್ಶಿಸ ಬೇಕಾದರೆ ಇಂತಹ ವೇದಿಕೆಗಳನ್ನು ಸರಿಯಾಗಿ ಉಪಯೋಗಿಸಿ ಕೊಳ್ಳಬೇಕು. ಕೇವಲ ವಿಧ್ಯಾಭ್ಯಾಸ ದಿಂದ ಸಮಾಜ ದಲ್ಲಿ ಒಳ್ಳೆಯ ಗೌರವ ಹಾಗೂ ಮರಿಯಾದೆ ಸಿಗುವುದಿಲ್ಲ.
ಮೊದಲು ಇದನ್ನು ಪೋಷಕರು ತಮ್ಮ ತಲೆಯಿಂದ ತೆಗೆದು ಮಕ್ಕಳು ಬಯಸುವ ಹಾದಿಗೆ ಬೆಂಬಲ ನೀಡಿದರೆ ಆತನು ಕೂಡ ಒಳ್ಳೆಯ ಸಾಧನೆ ಮಾಡುತ್ತಾನೆ. ವಿಧ್ಯೆ ಎಂಬುದು ಜ್ಞಾನಾರ್ಜನೆಗೆ ಮಾತ್ರ. ಇದರ ಜೊತೆ, ಗಾಯನ, ಅಭಿನಯ, ಕ್ರೀಡೆ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡರೆ ನಮ್ಮ ಬದುಕಿಗೆ ಅರ್ಥ ಸಿಗುತ್ತದೆ.
ಸದ್ಯ ಇದೀಗ ಕಾಲ ಬದಲಾಗಿದೆ. ಯುವಪೀಳಿಗೆಗಳು ತಮ್ಮ ಹಾದಿ ಯಾವುದು ಎಂಬುದರ ಬಗ್ಗೆ ಸರಿಯಾಗಿ ಅರಿತು ಯಾರ ಮಾರ್ಗದರ್ಶನವೂ ಇಲ್ಲದೇ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುತ್ತಿದ್ದಾರೆ.
ಶೇಕಡಾ ೫೦ ಭಾಗದಷ್ಟು ಯುವಪೀಳಿಗೆಗಳಿಗೆ ಸಿನಿಮಾಗಳಲ್ಲಿ ಅಭಿನಯಿಸುವ ಕನಸಿದ್ದು, ಇದನ್ನು ಸಾಮಾಜಿಕ ಜಾಲತಾಣ ಎಂಬ ವೇದಿಕೆಯನ್ನು ಸರಿಯಾಗಿ ಬಳಸಿಕೊಂಡು ತಮ್ಮ ಕನಸನ್ನು ನನಸಾಗಿಸುವುದರ ಜೊತೆಗೆ ಒಂದಿಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ. ಅದೇ ರೀತಿ ಇದೀಗ ಯುವತಿಯರ ಡಾನ್ಸ್ ವೈರಲ್ ಆಗಿದೆ ನೋಡಿ.