ಪ್ರಾಣಿಗಳೆಂದರೆ ಏನೋ ಒಂದು ರೀತಿಯ ಆಕರ್ಷಣೆ. ಹಲವರಿಗೆ ಸಾಕು ಪ್ರಾಣಿಗಳೆಂದರೆ ಹೆಚ್ಚು ಪ್ರೀತಿ. ಇನ್ನೂ ಕೆಲವರಿಗೆ ಭಯಾನಕ ಕಾಡು ಪ್ರಾಣಿಗಳ ಮೋಜು, ಮಸ್ತಿ, ಬೇಟೆ ನೋಡುವುದೆಂದರೆ ಒಂದು ರೀತಿಯ ಕುತೂಹಲ. ಮೊದಲೆಲ್ಲಾ ಇದಕ್ಕಾಗಿ ಕೆಲವು ಚಾನಲ್ ಗಳನ್ನು ಅವಲಂಬಿಸಬೇಕಿತ್ತು. ಆ
ದರೆ ಇದು ಇಂಟರ್ನೆಟ್ ಯುಗ, ನಮಗೆ ಬೇಕಾಗಿದ್ದೆಲ್ಲಾ ಬೆರಳ ತುದಿಯಲ್ಲೇ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ.ಕಾಡಿನಲ್ಲಿ ಹುಲಿಯು ಮೋಡಗಳಂತೆ ಚಲಿಸಿದರೆ, ಚಿರತೆಗಳು ಮಂಜಿನಂತೆ ಸಾಗುತ್ತವೆ.
ಚಿರತೆಗಳು ಅತ್ಯಂತ ಗುಪ್ತಚರ ಜೀವಿಗಳು. ಅವುಗಳ ಮೈ ಬಣ್ಣ ಚಿನ್ನ ಹಾಗು ಹೂವಿನ ಆಕಾರದಲ್ಲಿ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಅವುಗಳ ಮುಖ್ಯ ಗುಣವೆಂದರೆ ಯಾವ ಪರಿಸರಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ. ಕೊರೆವ ಚಳಿ ಪ್ರದೇಶದಿಂದ ಹಿಡಿದು ಸುಡುವ ಬಿಸಿಲಿನ ಪ್ರದೇಶದವರೆಗೂ ಎಲ್ಲ ಜಾಗಗಳಲ್ಲಿ ಇವುಗಳು ಬದುಕಬಲ್ಲವು. ಸುಮಾರು 10 ದಿನದವರೆಗೂ ನೀರಿಲ್ಲದೆ ಬದುಕುವ ತಾಕತ್ತು ಅವಕ್ಕಿದೆ. ಅದೇ ರೀತಿಯ ಇದೀಗ ವಿಚಿತ್ರ ಪ್ರಾಣಿಯ ವಿಡಿಯೋ ಪತ್ತೆಯಾಗಿದೆ ನೋಡಿ.