ಕನ್ನಡ ಚಿತ್ರರಂಗದಲ್ಲಿ ಅನೇಕ ನಟ ನಟಿಯರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕಷ್ಟ ಪಟ್ಟು ಅವಕಾಶವನ್ನು ಗಿಟ್ಟಿಸಿಕೊಂಡು ಚಿತ್ರರಂಗದಲ್ಲಿ ನೆಲೆ ನಿಂತವರು ಹಲವರು. ಅದೇ ರೀತಿ ಒಂದೆರಡು ಸಿನಿಮಾಗಳನ್ನು ಮಾಡಿ, ಸಿನಿಮಾ ನಮ್ಮ ಪಾಲಿಗೆ ಕೈ ಹಿಡಿಯಲ್ಲ ಎಂದು ಕೈ ಚೆಲ್ಲಿ, ಸಿನಿ ಜಗತ್ತಿನಿಂದ ಹೊರನಡೆದವರು ಅನೇಕರು. ಅಂತಹ ನಟ ನಟಿಯರ ಪೈಕಿ ಸಿನಿರಂಗದಲ್ಲಿ ಬದುಕು ಕಟ್ಟಿಕೊಂಡವರು ನಟಿ ಹರಿಪ್ರಿಯಾ. ಅಂದಹಾಗೆ, ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ
.ಇವರು ಜನಿಸಿದ್ದು 29 ಅಕ್ಟೋಬರ್ 1991 ಚಿಕ್ಕಬಳ್ಳಾಪುರದಲ್ಲಿ. ಇವರ ಬಾಲ್ಯದ ಹೆಸರು ಶೃತಿಯಾದರೂ, ಚಿತ್ರರಂಗಕ್ಕೆ ಬಂದ ನಂತರ ಹರಿಪ್ರಿಯಾ ಆಗಿ ಗುರುತಿಸಿಕೊಂಡರು. ಇನ್ನು ವಿದ್ಯಾಮಂದಿರ ಶಾಲೆಯಲ್ಲಿ ತಮ್ಮ ಪಿಯುಸಿಯನ್ನು ಪೂರ್ಣಗೊಳಿಸಿದ ಇವರು ನೃತ್ಯದಲ್ಲಿ ತುಂಬಾ ಆಸಕ್ತಿ ಇದ್ದಿದ್ದರಿಂದ ಭರತ ನಾಟ್ಯ ತರಬೇತಿಗೆ ಸೇರಿಕೊಂಡರು.
ಭರತ ನಾಟ್ಯ ಕಲಿತ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು.ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದೂ, ಮಾಡುವೆ ಬಳಿಕ ನೀವು ಕೂಡ ನಟಿಯ ತುಂಟಾಟವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.