ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಪತ್ನಿ ಜೊತೆ ಧ್ರುವ ಸರ್ಜಾ ಹೇಗಿರುತ್ತಾರೆ ನೋಡಿ…ಚಿಂದಿ ವಿಡಿಯೋ

1,392

ಸದ್ಯ ನಟ ಧ್ರುವ ಸರ್ಜಾ ರವರ ಪತ್ನಿ ಪ್ರೇರಣಾ ಸರ್ಜಾ ರವರು ತಮ್ಮ ಪತಿಯ ಪ್ರೀತಿಯ ಬಗ್ಗೆ ವಿಶೇಷ ಪೋಸ್ಟ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಹೌದು ಧ್ರುವ ಜೊತಗಿನ ಫೋಟೋ ಹಂಚಿಕೊಂಡಿರುವ ಪ್ರೇರಣಾ ಒಬ್ಬ ತಂದೆ ಅಂದರೆ ಧ್ರುವ ಸರ್ಜಾ ತನ್ನ ಮಗಳಿಗೆ ಮಾಡಬಹುದಾದ ಅತೀ ದೊಡ್ಡ ಕೆಲಸವೆಂದರೆ ಅವಳ ತಾಯಿ, ಅಂದರೆ ಪತ್ನಿಯನ್ನು ಪ್ರೀತಿಸುವುದು ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

 

ಸದ್ಯ ಈ ಪೋಸ್ಟ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಧ್ರುವ ಸರ್ಜಾ ದಂಪತಿಗಳಿಗೆ ಮಗಳ ಫೋಟೋ ತೋರಿಸುವ ಬಗ್ಗೆ ಹಾಗೂ ಹೆಸರಿನ ಬಗ್ಗೆ ಪ್ರಶ್ನೆ ಮಾಡುತ್ತಲೇ ಇದ್ದು ಸದ್ಯ ಮೂಲಗಳ ಪ್ರಕಾರ ನಾಮಕರಣ ಶಾಸ್ತ್ರದಲ್ಲಿ ಮಗಳನ್ನು ತೋರಿಸಬಹುದು ಎನ್ನಲಾಗಿದೆ. ಸದ್ಯ ನಟ ಧ್ರುವ ಸರ್ಜಾ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಾರಣ ಅವರ ಮನೆಗೆ ಮಹಾಲಕ್ಷ್ಮೀ ಕಾಲಿಟ್ಟಿದ್ದಾಳೆ.

 

ಹೌದು, ಧ್ರುವ ಸರ್ಜಾ ಅವರು ಹೆಣ್ಣು ಮಗುವಿನ ತಂದೆಯಾಗಿದ್ದು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಅವರು ಅ.2 ರಂದು ಬನಶಂಕರಿಯ ಖಾಸಗಿ ಆಸ್ಪತ್ರೆಯಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಧ್ರುವ ಸರ್ಜಾ ಹಂಚಿಕೊಂಡಿದ್ದರು. ಪ್ರೇರಣಾಗೆ ನಾರ್ಮಲ್ ಡೆಲಿವರಿ ಆಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಅವರು ಹೇಳಿದ್ದರು.

 

ಅಣ್ಣ ಇಲ್ಲ ಅನ್ನೋ ದುಃಖವನ್ನು ಮರೆಯೋದಕ್ಕೆ ಆಗಲ್ಲ. ಹೌದು ಈ ಖುಷಿ ಸಂದರ್ಭದಲ್ಲಿ ಅವರು ಇರಬೇಕಿತ್ತು. ನನಗೆ ಈಗಾಗಲೇ ಮಗ ಇದ್ದಾನೆ. ನಮ್ಮ ಅಣ್ಣನ ಮಗನೇ ನನಗೂ ಮಗ. ನನಗೆ ಮಗ ಹುಟ್ಟಿದ್ರೆ ಬೇಜಾರ್ ಆಗುತ್ತೇನೋ…? ಮನೆಗೆ ಒಬ್ಬಳು ಮಗಳು ಬೇಕು ಅನ್ನೋ ಆಸೆ ನನಗೂ ಇದೆ. ನನ್ನ ಹೆಂಡತಿಗೂ ಇದೆ. ಮಗ ಹುಟ್ಟಿದ್ರೆ ದೇವರು ಕೊಟ್ಟಿದ್ದಾನೆ ಅಂದ್ಕೋಬೇಕು. ಮಕ್ಕಳಂದರೆ ಖುಷಿ ಅಲ್ವಾ? ಅಣ್ಣ ಬರ್ತನೋ ಅಜ್ಜಿ ಬರ್ತಾರೋ ಗೊತ್ತಿಲ್ಲ ಅಂತ ಧ್ರುವ ಸರ್ಜಾ ಈಚೆಗಷ್ಟೇ ಹೇಳಿದ್ದರು. ಇದೀಗ ಅವರು ಬಯಸಿದಂತೆಯೇ ಮಗಳೇ ಬಂದಿದ್ದಾಳೆ. ಅದು ಸರ್ಜಾ ಕುಟುಂಬದ ಸಂಭ್ರಮವನ್ನು ಹೆಚ್ಚು ಮಾಡಿದೆ.

 

ಅಂದಹಾಗೆ ಧ್ರುವ ಸರ್ಜಾಗೆ ಪತ್ನಿ ಪ್ರೇರಣಾ ಶಂಕರ್ ಪಕ್ಕದ ಮನೆಯವರು. ಅಂದರೆ ಪಕ್ಕದ ಮನೆಯ ಪ್ರೇರಣಾ ಅವರನ್ನು ಚಿಕ್ಕ ವಯಸ್ಸಿನಿಂದ ಧ್ರುವ ಸರ್ಜಾ ನೋಡಿಕೊಂಡು ಬಂದಿದ್ದರು. ಬಹಳ ವರ್ಷಗಳ ಕಾಲ ಪ್ರೀತಿ ಮಾಡಿದ್ದ ಈ ಜೋಡಿ ಮನೆಯಲ್ಲಿ ಪ್ರೀತಿ ವಿಷಯ ತಿಳಿಸಿ ಮದುವೆಯಾಗಿತ್ತು.

 

2018ರ ಡಿಸೆಂಬರ್ 9ರಂದು ಧ್ರುವ ಸರ್ಜಾ, ಪ್ರೇರಣಾ ಶಂಕರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2019ರ ನವೆಂಬರ್‌ನಲ್ಲಿ ಈ ಜೋಡಿ ಮದುವೆಯಾಗಿತ್ತು. ಪ್ರೇರಣಾ ಶಂಕರ್ ಅವರು ಬೆಂಗಳೂರಿನಲ್ಲಿ ಖಾಸಗಿ ಕಾಲೇಜ್‌ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾದ ನಂತರದಲ್ಲಿ ಧ್ರುವ ಸರ್ಜಾ ಸಿನಿಮಾ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದಾರೆ.