ಸದ್ಯ ಉಪೇಂದ್ರ ಬರ್ತ್ಡೇ ಸ್ಪೆಷಲ್ಲಾಗಿ ರಿಲೀಸ್ ಆಗಿರುವ ಕಬ್ಜ ಟೀಸರ್ ಧೂಳೆಬ್ಬಿಸಿದ್ದು ಕೇವಲ 24 ಗಂಟೆಗಳಲ್ಲಿ 1 ಕೋಟಿ 25 ಲಕ್ಷ ವೀವ್ಸ್ ಪಡೆದುಕೊಂಡು ಸದ್ದು ಮಾಡಿತ್ತು. ಟೀಸರ್ನ ಬಹುತೇಕ ಫ್ರೇಮ್ಗಳಲ್ಲಿ ಕೆಜಿಎಫ್ ಸಿನಿಮಾ ಛಾಯೆ ಕಾಣಿಸುತ್ತಿದ್ದರೂ ಕೂಡ ಸಿನಿರಸಿಕರು ಪದೇ ಪದೇ ಟೀಸರ್ ನೋಡಿ ಎಂಜಾಯ್ ಮಾಡ್ತಿದ್ದಾರೆ.
ಆರ್. ಚಂದ್ರು ನಿರ್ದೇಶನ ಹೈವೋಲ್ಟೇಜ್ ಆಕ್ಷನ್ ಎಂಟರ್ಟೈನರ್ ಸಿನಿಮಾ ಕಬ್ಜ. ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಅವತಾರದಲ್ಲಿ ಅಬ್ಬರಿಸಿದ್ದು ನಾಯಕಿಯಾಗಿ ಶ್ರಿಯಾ ಶರಣ್ ದರ್ಶನ ಕೊಟ್ಟಿದ್ದು ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಹೌದು ಉಪ್ಪಿ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲೇ ಅದ್ಧೂರಿ ಕಾರ್ಯಕ್ರಮದಲ್ಲಿ ಕಬ್ಜ ಟೀಸರ್ ಬಿಡುಗಡೆಯಾಗಿದ್ದು ತೆಲುಗು ನಟ ರಾಣಾ ದಗ್ಗುಬಾಟಿ ಟೀಸರ್ ಲಾಂಚ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು. ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು.
ಒರಿಯಾ ಹಾಗೂ ಮರಾಠಿ ಸೇರಿ ಒಟ್ಟು 7 ಭಾಷೆಗಳಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗಿದ್ದು ನಿರ್ದೇಶನದ ಜೊತೆಗೆ ಸ್ವತಃ ಆರ್. ಚಂದ್ರು ಸಿನಿಮಾ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆಕ್ಷನ್ ಪ್ಯಾಕ್ಡ್ ಟೀಸರ್ ನೋಡಿದವರು ಹುಬ್ಬೇರಿಸಿದ್ದು ಕಬ್ಜ ಟೀಸರ್ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಸಿನಿರಸಿಕರು ಮುಗಿಬಿದ್ದು ಟೀಸರ್ ನೋಡ್ತಿದ್ದು ಪರಿಣಾಮ ಈ ಟೀಸರ್ ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ ಮೊದಲ ಸ್ಥಾನದಲ್ಲಿದೆ. ಸದ್ಯ ಉಪೇಂದ್ರ ಫ್ಯಾಮಿಲಿ ಕುಡಿ ನಿರಂಜನ್ ಸಿನೆಮಾ ಕೂಡ ಬರಲಿದೆ/ ಇದೀಗ ಅವರ ವಿಡಿಯೋ ನೋಡಿ.