ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಿಬಾಸ್ ಬಗ್ಗೆ ಮಾತಾಡಿದ ಸುಮಲತಾ ಹಾಗು ಸುದೀಪ್ ನೋಡಿ…ಚಿಂದಿ ವಿಡಿಯೋ

12,678

ನಟ ಕಿಚ್ಚ ಸುದೀಪ್ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಾಂಧವ್ಯದ ಬಗ್ಗೆ ಎಲ್ಲರಿಗೂ ಗೊತ್ತಿರೋದೆ. ಹೌದು ಅಂಬರೀಶ್ ಅವರನ್ನು ತುಂಬ ಇಷ್ಟಪಡುತ್ತಿದ್ದ ವ್ಯಕ್ತಿಗಳಲ್ಲಿ ಸುದೀಪ್ ಕೂಡ ಒಬ್ಬರಾಗಿದ್ದು ಅದೇ ರೀತಿ ಸುಮಲತಾ ಅವರ ಜೊತೆಯಲ್ಲೂ ಕಿಚ್ಚನಿಗೆ ಉತ್ತಮ ಆತ್ಮೀಯತೆ ಇತ್ತು. ಹೌದು ಅಂಬಿಯನ್ನ ಪ್ರೀತಿಯಿಂದ ಮಾವ ಎನ್ನುತ್ತಿದ್ದ ಸುದೀಪ್ ಸುಮಲತಾ ಅವರನ್ನು ಅಕ್ಕ ಎಂದು ಕರೆಯುತ್ತಿದ್ದರು.

ನಟ ಅಂಬರೀಶ್ ರವರ ಅಗಲಿಕೆಯ ನಂತರ ಸುದೀಪ್ ಮತ್ತು ಸುಮಲತಾ ನಡುವಿನ ಸಂಬಂಧ ಹಳಸಿದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಹೌದು ಇತ್ತೀಚಿಗೆ ನಡೆಯುತ್ತಿರುವ ಕೆಲವು ವಿದ್ಯಮಾನಗಳನ್ನ ಗಮನಿಸದಾಗ ಸುದೀಪ್ ಮತ್ತು ಸುಮಲತಾ ನಡುವೆ ಅಂತರ ಹೆಚ್ಚಾಗಿದೆ ಎಂಬ ಅನುಮಾನ ಮೂಡುತ್ತಿದ್ದು ಅದಕ್ಕೆ ಕೆಲವು ಕಾರಣಗಳು ಕೂಡ ಇವೆ.

ಹೌದು ಈ ಹಿಂದೆ ಸುಮಲತಾ ಅವರು ಮಂಡ್ಯ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ಅಂಬರೀಶ್ ಗೆ ತುಂಬ ಆಪ್ತರಾಗಿದ್ದ ಸುದೀಪ್ ಸುಮಲತಾ ಪರ ಪ್ರಚಾರಕ್ಕೆ ಬಂದೆ ಬರುತ್ತಾರೆ ಎಂದು ಭಾವಿಸಲಾಗಿತ್ತು. ಹೌದು ಆದರೆ ಮಾತ್ರ ಸುದೀಪ್ ಪ್ರಚಾರದಿಂದ ತುಂಬ ದೂರ ಸರಿದಿದ್ದು ಸುದೀಪ್ ಯಾಕೆ ಸುಮಲತಾ ಪರ ಪ್ರಚಾರ ಮಾಡಿಲ್ಲ ಎನ್ನುವುದು ಭಾರಿ ಚರ್ಚೆಗೆ ಕಾರಣವಾಗಿತ್ತು.

ಇನ್ನು ಪ್ರಚಾರದ ಬಗ್ಗೆ ಖಾಸಗಿ ವಾಹಿನಿಯಲ್ಲಿ ಮಾತನಾಡಿದ್ದ ಸುದೀಪ್ ನಾನು ಯಾವತ್ತು ಬರ್ತೀನಿ ಅಂತ ಮಾತು ಕೊಟ್ಟು ಮಾತು ತಪ್ಪಿದವನಲ್ಲ. ನನ್ನ ಅವಶ್ಯಕತೆ ಅಲ್ಲಿ ಇಲ್ಲ ಅಂತ ಅನಿಸಿತು ಎಂದು ಹೇಳಿದ್ದಾರೆ. ಚುನಾವಣೆಗೆ ನಿಂತ ನಂತರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರೆ ಹೋಗಿ ಮಾಡಿದರು ಅವಾಗ ಅವರು ನನ್ನನ್ನು ಕರೆಯಲಿಲ್ಲ. ಆದರೆ ಕರೆಯಲಿಲ್ಲ ಎನ್ನುವುದು ನನಗೆ ತಲೆಗೆ ಬಂದಿಲ್ಲ. ಆದರೆ ನನಗೆ ಅನಿಸಿತು ನನ್ನ ಅವಶ್ಯಕತೆ ಅಲ್ಲಿ ಇಲ್ಲ ಎನ್ನುವುದು ಎಂದು ಸುದೀಪ್ ಹೇಳಿದ್ದರು.

ಪ್ರಚಾರಕ್ಕೆ ಬನ್ನಿ ಎಂದು ಯಾರನ್ನು ಕರೆದಿಲ್ಲ. ಸುದೀಪ್ ಅವರು ನನ್ನ ಒಳ್ಳೆಯ ಫ್ರೆಂಡ್. ಅವರು ತಾವೇ ಇಷ್ಟ ಪಟ್ಟು ಪ್ರಚಾರದಲ್ಲಿ ಭಾಗಿಯಾದರೆ ನಾನು ಸ್ವಾಗತ ಮಾಡುತ್ತಾನೆ. ನಾನು ಸುದೀಪ್ ಅವರಿಗೆ ತೊಂದರೆ ನೀಡಲು ಇಷ್ಟ ಪಡುವುದಿಲ್ಲ. ಸುದೀಪ್ ಇಷ್ಟ ಇದ್ದರೆ ಬರಬಹುದು. ಆದರೆ ನಮ್ಮ ಅವರ ಸಂಬಂಧ ರಾಜಕೀಯವನ್ನು ಮೀರಿದ್ದು. ನಾನು ಇದನ್ನು ರಾಜಕೀಯವಾಗಿ ನೋಡಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದರು.

ಆದರೂ ಸುದೀಪ್ ಪ್ರಚಾರ ಮಾಡ್ತಾರೆ ಎಂಬ ನಿರೀಕ್ಷೆ ಇತ್ತು. ಇನ್ನು ನಂತರ ಸುದೀಪ್ ರವರ ಹುಟ್ಟುಹಬ್ಬಕ್ಕೂ ಸುಮಲತಾ ರವರು ವಿಶ್ ಮಾಡಿರಲಿಲ್ಲ ಹಾಗೂ ಅವರ ಚಿತ್ರಗಳ ಬಗ್ಗೆ ಕೂಡ ತುಟಿ ಬಿಚ್ಚಿರಲಿಲ್ಲ. ಇನ್ನು ಈಗಿರುವ ಪರಿಸ್ಥಿತಿಯಲ್ಲಿ ದರ್ಶನ್ ಮತ್ತು ಕಿಚ್ಚನ ಮಧ್ಯ ಸುಮಲತಾ ಮಧ್ಯಪ್ರವೇಶಿಸಿ ಸಂಧಾನ ಮಾಡಿಸಬಹುದು ಎಂಬ ನಿರೀಕ್ಷೆಯೂ ಇದೆ.

ಆದರೆ ಸುಮಲತಾ ಮತ್ತು ಸುದೀಪ್ ನಡುವಿನ ಸಂಬಂಧದಲ್ಲಿ ಅಂತರ ಹೆಚ್ಚಾಗಿದೆ ಎಂಬುದು ಇದು ಸಾಧ್ಯನಾ ಎಂಬ ಅನುಮಾನವನ್ನ ತರಿಸಿದೆ. ಮತ್ತೊಂದೆಡೆ ಮಂಡ್ಯೆ ಸಂಸದೆಯಾಗಿರುವ ಸುಮಲತಾ ಅವರಿಗೆ ಈಗ ಹೆಚ್ಚಿನ ಜವಾಬ್ದಾರಿ ಇದ್ದು ಆ ಕೆಲಸಗಳ ಬಗ್ಗೆ ಹೆಚ್ಚು ಗಮನ ಕೊಡುತ್ತಿರಬಹುದು ಎನ್ನುವುದನ್ನ ಕೂಡ ಅಲ್ಲೆಗಳೆಯುವಂತಿಲ್ಲ. ಈ ನಡುವೆ ಸುದೀಪ್ ಹಾಗೂ ಸುಮಲತಾ ರವರ ಪರೂಪದ ವಿಡಿಯೋ ವೈರಲ್ ಆಗಿದ್ದು ಇವರಿಬ್ಬರ ನಡುವೆ ಬಾಂಧವ್ಯ ಹೇಗಿತ್ತು ನೀವೇ ನೋಡಿ.