ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಬೇಡಿಕೆಯ ನಟಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಹೊಸಬರ ಚಿತ್ರಕ್ಕೆ ಲಕ್ಕಿ ಗರ್ಲ್ ಅಂತಾನೇ ಹೇಳಬಹುದು. ಕಳೆದ 3 ವರುಷಗಳಿಂದ ರಚಿತಾ ರಾಮ್ ಅಭಿನಯಿಸಿರುವ ಬಹುತೇಕ ಎಲ್ಲಾ ಚಿತ್ರಗಳೂ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದು ಸದ್ಯ ಇದೀಗ ಚಂದನವನದಲ್ಲಿ ಮೇರು ನಟಿಯಾಗಿ ಬೆಳೆದು ನಿಂತಿದ್ದಾರೆ.
ಲಕುಮಿ ಎಂಬ ಕಿರುತೆರೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ ಈ ನಟಿ ತದನಂತರ ತೂಗುದೀಪ ಪ್ರೊಡಕ್ಷನ್ಸ್ ಅಡಿ ಬುಲ್ ಬುಲ್ ಎಂಬ ಸಿನಿಮಾದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ್ದು ಮೊದಲ ಸಿನಿಮಾದಲ್ಲೇ ಡಿ ಬಾಸ್ ಎಂಬ ದೊಡ್ಡ ಬ್ರಾಂಡ್ ಜೊತೆ ಅವಕಾಶವನ್ನು ಗಿಟ್ಟೊಸಿಕೊಂಡ ಈ ಗುಳಿಗೆನ್ನೆ ಸುಂದರಿ ನಂತರ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡರು.
ಈ ಸಿನಿಮಾ ಅವರಿಗೆ ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿಬಿಟ್ಟಿತು. ಕಿರುತೆರೆಯಿಂದ ಬಂದ ಈ ನಟಿ ಸಿಕ್ಕ ಅವಾಕಾಶವನ್ನು ಸುದುಪಯೋಗ ಪಡಿಸಿಕೊಂಡು ಇದೀಗ ಕನ್ನಡದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಹೌದು ಒಂದು ಕಾಲದಲ್ಲಿ ರಮ್ಯಾ ಹಾಗೂ ರಕ್ಷಿತಾ ಅವರು ಯಾವ ರೀತಿ ಹೆಸರು ಮಾಡಿದ್ದರೋ ಆ ರೀತಿ ಖ್ಯಾತಿಯನ್ನ ಈ ಗುಳಿಕೆನ್ನೆ ಸುಂದರಿ ಗಳಿಸಿದ್ದಾರೆ. ಇದೀಗ ತೆಲುಗು ಚಿತ್ರರಂಗದಲ್ಲೂ ಕೂಡ ನಿರತರಾಗಿರುವ ಡಿಂಪಲ್ ಕ್ವೀನ್ ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಸಂಪಾಧಿಸಿ ಕೊಂಡಿದ್ದಾರೆ.
ಇನ್ನು ಈ ಹಿಂದೆ ರಚಿತಾ ರಾಮ್ ರವರು ಏಕ್ ಲವ್ ಯಾ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರ ಬಗ್ಗೆ ತಮಗೆ ತಿಳಿದಿದೆ. ಇನ್ನು ಈ ಸಿನಿಮಾ ಈಗಾಗಲೇ ಸೆನ್ಸೇಷನ್ ಮೂಡಿಸಿದ್ದು ಇದಕ್ಕೆ ಮುಖ್ಯ ಕಾರಣ ನಿರ್ದೇಶಕ ಪ್ರೇಮ್ ಅಂತಾನೆ ಹೇಳಬಹುದು. ಹೌದು ಪ್ರೇಮ್ ಸ್ಯಾಂಡಲ್ ವುಡ್ ನ ಹಿಟ್ ಡೈರೆಕ್ಟರ್ ಗಳ ಪಟ್ಟಿಯಲ್ಲಿ ಒಬ್ಬರಾಗಿದ್ದು ಕನ್ನಡ ಚಿತ್ರರಂಗಕ್ಕೆ ಅನೇಕ ಕಲಾವಿದರನ್ನು ಪರಿಚಯಿಸಿದ್ದಾರೆ.
ಲವ್ ಮತ್ತು ಮದರ್ ಸೆಂಟಿಮೆಂಟಲ್ ಕಿಂಗ್ ಅಂತಾನೆ ಅವರನ್ನು ಕರೆಯಬಹುದು. ಕರಿಯ ಎಕ್ಸ್ಕ್ಯೂಸ್ ಮಿ ಜೋಗಿ ಸಿನಿಮಾಗಳ ನಿರ್ದೇಶನದೊಂದಿಗೆ ಕನ್ನಡದಲ್ಲಿ ತನ್ನದೇ ಆದ ಟ್ರೆಂಡ್ ಸೆಟ್ ಮಾಡಿಕೊಂಡು ನಿರ್ದೇಶಕ ಪ್ರೇಮ್ ಮೊದಲ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಸೌತ್ ಇಂಡಿಯಾ ಸಿನಿಮಾದವರೇ ಒಂದು ಬಾರಿ ತಿರುಗಿ ನೋಡುವಂತೆ ಮಾಡಿದ್ದರು.
ತದನಂತರ ನಟನೆಯತ್ತ ಮುಖ ಮಾಡಿದ ಅವರು ಪ್ರೀತಿ ಏಕೆ ಭೂಮಿಯಲ್ಲಿದೆ ಚಿತ್ರದ ಮೂಲಕ ನಾಯಕನಾಗಿ ಬಣ್ಣ ಹಚ್ಚಿದ್ದರು. ಚಿತ್ರದ ಹಾಡುಗಳಂತೂ ಸೂಪರ್ ಹಿಟ್ ಆಗಿತ್ತು ಆದರೆ ಸಿನಿಮಾ ಮಾತ್ರ ಅಂದುಕೊಂಡಂತೆ ಹಿಟ್ ಆಗಿರಲಿಲ್ಲ. ತದನಂತರ ಡಿಕೆ ದಾಸವಾಳ ಪ್ರೇಮ್ ಅಡ್ಡ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಅವರು ನಾಯಕನಾಗಿ ಯಶಸ್ಸು ಕಾಣದೆ ಇದ್ದ ಕಾರಣ ನಟನೆಗಿಂತ ಇದೀಗ ನಿರ್ದೇಶನದಲ್ಲಿ ಹೆಚ್ಚಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಹೌದು ಈ ಹಿಂದೆ ಸುದೀಪ್ ಹಾಗೂ ಶಿವಣ್ಣ ಅಭಿನಯದ ದಿ ವಿಲನ್ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಅವರು ಈ ಸಿನಿಮಾ ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಇತ್ತೀಚೆಗಷ್ಟೇ ಏಕ್ ಲವ್ ಯಾ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪ್ರೇಮ್ ಮೊದಲೇ ಈಗಾಗಲೇ ಟೀಸರ್ ಹಾಗೂ ಪೋಸ್ಟರ್ ಮುಖಾಂತರ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ನಂತರ ಸಿನಿಮಾ ತೆರೆಕಂಡು ನಿರೀಕ್ಷೆಯಂತೆಯರೆ ಸೂಪರ್ ಹಿಟ್ ಆಯಿತು.
ಇನ್ನು ಚಿತ್ರದಲ್ಲಿ ರಚಿತಾ ರಾಮ್ ರವರು ತುಟಿಗೆ ಚುಂಬನ ನೀಡುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದು ರಚಿತಾ ರಾಮ್ ಚಿತ್ರದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂಬುದನ್ನು ಟೀಸರ್ ನಲ್ಲಿಯರೆ ತೋರಿಸಿಕೊಟ್ಟಿದ್ದರು. ಇದೀಗ ಇದರ ಬೆನ್ನಲ್ಲೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಏಕ್ ಲವ್ ಯಾ ಸಿನಿಮಾದ ಟ್ರೈಲರ್ ಬಿಡುಗಡೆ ವೇಳೆ ರಕ್ಷಿತಾ ಹಾಗೂ ರಕ್ಷಿತಾ ಇಬ್ಬರು ಕೂಡ ಒಂದು ವಿಶೇಷವಾದ ಹಾಡನ್ನು ಹಾಡುತ್ತಾ ಎಲ್ಲರ ಗಮನ ಸೆಳೆದಿದ್ದರು.
ಹೌದು ಒಂದು ಕಾಲದಲ್ಲಿ ನಟಿ ರಕ್ಷಿತಾ ಅವರು ಯಾವ ಮಟ್ಟಕ್ಕೆ ಹೆಸರು ಮಾಡಿದ್ದರೂ ತಮಗೆ ತಿಳಿದಿದೆ. ಹೌದು ಕರ್ನಾಟಕಾದ್ಯಂತ ಪಡ್ಡೆ ಹುಡುಗರ ರಾಣಿಯಾಗಿದ್ದ ರಕ್ಷಿತಾ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಗ್ಲಾಮರಸ್ ಗೊಂಬೆಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೀಗ ರಚಿತಾ ರಾಮ್ ಕೂಡ ರಕ್ಷಿತಾ ಅವರಂತೆಯೇ ದೊಡ್ಡ ಹೆಸರನ್ನು ಸಂಪಾದಿಸಿದ್ದು ಈ ಇಬ್ಬರು ನಟಿಯನ್ನು ಒಂದೇ ವೇದಿಕೆಯ ಮೇಲೆ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಸಿಕ್ಕಿತ್ತು.
ಅದರಲ್ಲಿಯೂ ಈ ಇಬ್ಬರೂ ನಟಿಮಣಿಯರು ಒಟ್ಟಿಗೆ ಹಾಡು ಹೇಳಿದರೆ ಅಭಿಮಾನಿಗಳ ಸಂತಸ ಕೇಳಬೇಕೆ? ಮುಗಿಲು ಮುಟ್ಟಿತ್ತು ಅಂತಾನೇ ಹೇಳಬಹುದು. ಅದರಲ್ಲಿಯೂ ಇವರಿಬ್ಬರು ಎಣ್ಣೆ ಹಾಡನ್ನು ಹಾಡಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಾಗಾದರೆ ರಚಿತಾ ಹಾಗೂ ರಕ್ಷಿತಾ ಯಾವ ಹಾಡನ್ನು ಹಾಡಿದ್ದಾರೆ ಹಾಗೂ ಯಾವ ರೀತಿ ಹಾಡಿದ್ದಾರೆ ಎಂದು ತಿಳಿಯಲು ಈ ವಿಡಿಯೋ ನೋಡಿ.