ಹೂವೇ ಹೂವೇ ಎಂಬ ಸುಮಧುರ ಹಾಡಿಗೆ ಸೊಗಸಾಗಿ ಹೆಜ್ಜೆ ಹಾಕುತ್ತಾ ಕಾವೇರಿಗೆ ಕಾಲುಂಗುರವನ್ನೇ ತೊಡೆಸಿ ಕನ್ನಡ ಚಿತ್ರರಂಗದ ನಾಯಕ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರಿಗೆ ಪ್ರೀತಿಯ ಶ್ರೀಮತಿಯಾಗಿ ಮುದ್ದಿನ ಮಕ್ಕಳಿಗೆ ದೇವಕಿಯಾಗಿ ಮಲ್ಲ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆನ್ಸೆಷನಲ್ ಮೂಡಿಸಿದ ನಾಯಕ ನಟಿಯೆಂದರೆ ಪ್ರಿಯಾಂಕ ಉಪೇಂದ್ರರವರು.
ಹೌದು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟ ಈ ನಾಯಕಿ ಈಗಲೂ ಕೂಡ ತಮ್ಮ ಸಿನಿಮಾ ಇನ್ನಿಂಗ್ಸ್ ಅನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಬೆಂಗಾಳಿ ಬೆಡಗಿಯಾಗಿದ್ದ ಪ್ರಿಯಾಂಕ ತ್ರಿವೇದಿ ಯವರು ಕನ್ನಡ ಚಿತ್ರರಂಗದ ಹೆಮ್ಮೆ ನಟ ಹಾಗೂ ನಿರ್ದೇಶಕ ಉಪೇಂದ್ರ ಅವರನ್ನು ವಿವಾಹವಾಗಿ ಇದೀಗ ಕರ್ನಾಟಕದ ಸೊಸೆಯಾಗಿದ್ದಾರೆ.
ಬೆಂಗಾಲಿ ಸೇರಿದಂತೆ ಹಿಂದಿ ತೆಲುಗು ತಮಿಳು ಕನ್ನಡ ಹಾಗೂ ಒಡಿಯಾ ಚಿತ್ರರಂಗಗಳಲ್ಲಿ ಅಭಿನಯಿಸಿರುವ ಇವರು ಹೋಥಮ್ ಬ್ರಿಶ್ತಿ ಎಂಬುವ ಬೆಂಗಾಲಿ ಸಿನಿಮಾದ ಮೂಲಕ ಸಿನಿಮಾ ಜೀವನವನ್ನು ಪ್ರಾರಂಬಿಸಿದರು. ಬರೋಬ್ಬರಿ ಆರು ಭಾಷೆಯಲ್ಲಿ ಸುಮಾರ 35 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ಪ್ರಿಯಾಂಕ ಅವರು ಮಲ್ಲ ಹಾಗೂ ಹೆಚ್ ಟೂ ಒ ಎ್ಬ ಕನ್ನಡ ಚಿತ್ರಗಳಲ್ಲಿನ ಪಾತ್ರಕ್ಕಾಗಿ ವಿಮಾರ್ಶಾತ್ಮಕ ಮೆಚ್ಚುಗೆ ಗಳಿಸಿದರು.
ಪ್ರಿಯಾಂಕ ಒಬ್ಬರು ಅದ್ಭುತ ನಟಿ ಅನ್ನುವುದಕ್ಕಿಂತ ಉತ್ತಮ ಕಲಾವಿದೆ ಎಂದೇ ಹೇಳಬಹುದು. ಹೌದು ಇತ್ತೀಚಿಗೆ ಹೆಚ್ಚಾಗಿ ನಾಯಕಿ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ ಉಪೇಂದ್ರ ನಮ್ಮ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಅಲ್ಲದೇ ಅವರಿಗೆ ಬಗೆಬಗೆಯ ಪಾತ್ರಗಳನ್ನು ನಿರ್ವಹಿಸುವ ಕನಸು ಹೊಂದಿದ್ದು ಬಹುಭಾಷಾ ಸಿನಿಮಾದಲ್ಲಿ ಅಭಿನಯಿಸಿರುವ ಅನುಭವ ಇರುವ ಕಾರಣ ಯಾವ ಪಾತ್ರ ನೀಡಿದರು ಕೂಡ ಅದಕ್ಕೆ ಜೀವ ತುಂಬುವ ಚಾಕಚ್ಯಕತೆಯನ್ನು ಹೊಂದಿದ್ದಾರೆ.
ಇನ್ನು ವಿವಾಹವಾದ ನಂತರ ಚಿತ್ರರಂಗದಿಂದ ದೂರ ಉಳಿಯುವ ಅದೇಷ್ಟೋ ನಟಿ ಮಣಿಯರ ಪೈಕಿ ಸಂಸಾರವನ್ನು ನಡೆಸುತ್ತಾ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡು ಇದರ ಮಧ್ಯೆ ತಮ್ಮ ಕನಸಿನ ದಾರಿಯಲ್ಲಿಯೇ ಸಾಗುತ್ತಿರುವ ಪ್ರಿಯಾಂಕ ರವರಿಗೆ ನಿಜಕ್ಕೂ ಶ್ಲಾಘನೀಯ ವ್ಯಕ್ತಪಡಿಸಲೇ ಬೇಕು. ಸದಾ ಸಿನಿಮಾದ ವಿಚಾರದಲ್ಲಿರುವ ಪ್ರಿಯಾಂಕ ಫಿಟ್ನೆಸ್ ವಿಚಾರದಲ್ಲೂ ಕೂಡ ಬಹಳ ಸುದ್ದಿಯಲ್ಲಿರುತ್ತಾರೆ.
ಪ್ರಿಯಾಂಕ ದಿನೇ ದಿನೇ ಫಿಟ್ ಆಗಲು ಕಾರಣ ಜಿಮ್ ವರ್ಕೌಟ್ ಎಂದೇ ಹೇಳಲಾಗುತ್ತಿದೆ. ಸದ್ಯ ಇದೀಗ ಇದೆಲ್ಲದರ ನಡುವೆಯೇ ಇದೀಗ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಕಲೆ ಮತ್ತು ಸಾಮಾಜಿಕ ಕಾರ್ಯಕ್ಕೆ ಅವರಿಗೆ ಡಾಕ್ಟರೇಟ್ ನೀಡಲಾಗಿದೆ. ಹೌದು ಈ ಗೌರವ ಸಿಕ್ಕಿರುವುದು ಅವರಿಗೆ ಖುಷಿ ನೀಡಿದೆ. ಇದರಿಂದ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಅನೇಕ ಸಿನಿಮಾಗಳಲ್ಲಿ ಪ್ರಿಯಾಂಕಾ ತೊಡಗಿಕೊಂಡಿದ್ದು ಅವರಿಗೆ ಡಾಕ್ಟರೇಟ್ ಸಿಕ್ಕಿರುವುದಕ್ಕೆ ಉಪೇಂದ್ರ ಅವರ ಇಡೀ ಕುಟುಂಬಕ್ಕೆ ಸಂತಸ ಆಗಿದೆ. ಇದೆಲ್ಲದರ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.ಪ್ರಿಯಾಂಕಾ ಅವರಿಗೆ ಗೌರವ ಡಾಕ್ಟರೇಟ್ ದಕ್ಕಿರುವ ಕಾರಣ ಕುಟುಂಬದವರೆಲ್ಲ ಬಹಳಾನೇ ಸಂತಸಪಟ್ಟಿದ್ದು ಅವರಿಂದ ಕೇಕ್ ಕತ್ತರಿಸಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ರವರು ಸ್ಯಾಂಡಲ್ ವುಡ್ ಸೆಲೆಬ್ರಿಟಿ ಕ್ಯಾಲೆಂಡರ್ ಲಾಂಚ್ ವೇಳೆ ಕಾಣಿಸಿಕೊಂಡ ವಿಡಿಯೋ ವೊಂದು ವೈರಲ್ ಆಗಿದ್ದು ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ ನೀವೆ ನೋಡಿ.