ಚೆಂದನವನದ ಸಿಂಡ್ರೆಲಾ ನಟಿ ರಾಧಿಕಾ ಪಂಡಿತ್ ಅವರ ಮುದ್ದು ಮಕ್ಕಳು ಗೂಗಲ್ಗೆ ಅವಾಜ್ ಹಾಕಿರುವ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಈ ವಾರವನ್ನು ನಾವು ಸಂಗೀತದೊಂದಿಗೆ ಆರಂಭಿಸೋಣ. ಕಳೆದ ಎರಡು ವರ್ಷದಿಂದ ನಾನು ಪಣ ತೊಟ್ಟಿರುವ ಸಂಗೀತ ಎಂದು ಬರೆದುಕೊಂಡು ಮಕ್ಕಳು ಗೂಗಲ್ಗೆ ಅವಾಜ್ ಹಾಕುತ್ತಾ ಬೇಬಿ ಸಾಂಗ್ ಹಾಕಿ ಎಂದು ಹೇಳುತ್ತಾ ಕುಣಿದಿದ್ದಾರೆ.
ಈ ವೀಡಿಯೋವನ್ನು ನಟಿ ರಾಧಿಕಾ ಪಂಡಿತ್ ರವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಈ ವೀಡಿಯೋ ಹಂಚಿಕೊಳ್ಳುತ್ತಿದ್ದಂತೆ ಮುದ್ದುಮಕ್ಕಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ವೀಡಿಯೋದಲ್ಲಿ ಏನಿದೆ ಎಂದರೆ ಏ ಗೂಗಲ್ ಪ್ಲೇ ಬೇಬಿ ಶಾರ್ಕ್ ಸಾಂಗ್ ಎಂದು ಯಥರ್ವ್ ಮೊದಲು ಹೇಳುತ್ತಾನೆ. ಆದರೆ ಅದು ಅಲೆಕ್ಸಾಗೆ ಕೇಳಿಸುವುದಿಲ್ಲ.
ನಂತರ ಯಥರ್ವ್ ಜೋರಾಗಿ ಕಿರುಚುತ್ತಾ ಗೂಗಲ್ಗೆ ಅವಾಜ್ ಹಾಕಿದ್ದು ಏ ಗೂಗಲ್ ಪ್ಲೇ ಬೇಬಿ ಶಾರ್ಕ್ ಸಾಂಗ್ ಎಂದಿದ್ದಾನೆ. ಆಗ ತಕ್ಷಣ ಬೇಬಿ ಸಾಂಗ್ ಪ್ಲೇ ಆಗುತ್ತಿದ್ದಂತೆ ಯಥರ್ವ್ ಕುಣಿದು ಕುಪ್ಪಳಿಸಿದ್ದು ಈ ಮಧ್ಯೆ ಯಥರ್ವ್ ಜೊತೆಗೆ ಐರಾ ಬಂದು ಡಾನ್ಸ್ ಮಾಡುವುದಕ್ಕೆ ಶರುಮಾಡಿದ್ದಾಳೆ. ಅಕ್ಕ ತಮ್ಮ ಇಬ್ಬರು ಜೊತೆಯಾಗಿ ಮುದ್ದಾಗಿ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅವರ ಅಕ್ಕ ತಮ್ಮನ ಅದ್ಬುತವಾದ ನೃತ್ಯವನ್ನು ಈ ಲೇಖನಿಯ ಕೆಳಗೆ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ನೋಡಬಹುದು.
ಸದ್ಯ ಸ್ಯಾಂಡಲ್ ವುಡ್ ನ ಸಿಂಡ್ರೆಲಾ ರಾಧಿಕಾ ಪಂಡಿತ್ ರವರು ಸಿನಿಮಾರಂಗದಿಂದ ದೂರ ಉಳಿದಿದ್ದು ಮಕ್ಕಳ ಲಾಲನೆ ಹಾಗೂ ಪೋಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆ್ಯಕ್ಟಿವ್ ಆಗಿರುವ ಅವರು ತಮ್ಮ ಮಕ್ಕಳ ಮುದ್ದಾದ ವೀಡಿಯೋವನ್ನು ಆಗಾಗ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.
ಇನ್ನು ಇತ್ತೀಚಿಗಷ್ಟೆ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ದೀಪಾವಳಿ ಹಬ್ಬ ಅದ್ದೂರಿಯಾಗಿ ನಡೆದಿದ್ದು ಯಥರ್ವ್ ಸಿಲ್ಕ್ ಶರ್ಟ್ ಲುಂಗಿ ಹಾಗೂ ಶಲ್ಯ ತೊಟ್ಟು ಅಪ್ಪನ ಜೊತೆ ನಿಂತು ಫುಲ್ ಮಿಂಚಿರುವ ಫೋಟೋಎಲ್ಲರ ಗಮನ ಸೆಳೆದಿದ್ದು ರಾಕಿ ಭಾಯ್ ಮಗನ ಜೊತೆ ಫೋಟೋಗೆ ಪೋಸ್ ನೀಡಿರುವುದು ಬಹಳಾನೇ ವೈರಲ್ ಆಗಿತ್ತು. ಇನ್ನು ಐರಾ ಅಜ್ಜಿಯ ಜೊತೆ ನಗುತ್ತ ಮಾತನಾಡುತ್ತಿದ್ದು ಹೀಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ರಾಧಿಕಾ ಪಂಡಿತ್ ತಮ್ಮ ಮನೆಯಲ್ಲಿನ ವರಮಹಾಲಕ್ಷ್ಮೀ ಪೂಜೆಯ ಝಲಕ್ ತೋರಿಸಿದ್ದರು.
ಪೋಸ್ಟ್ ಗೆ ಅಭಿಮಾನಿಗಳು ಹಲವು ರೀತಿಯ ಕಮೆಂಟ್ ಮಾಡಿದ್ದು ಸೋ ಸ್ವೀಟ್ ವಂಡರ್ಫುಲ್ ಹಾಗೂ ಹಾರ್ಟ್ ಎಮೋಜಿಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಹಲವರು ಲೈಕ್ ಮಾಡಿ ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿದ್ದಾರೆ.ರಾಧಿಕಾ ಪಂಡಿತ್ ಮಕ್ಕಳ ಚಟುವಟಿಕೆಯ ವೀಡಿಯೋ ಹಾಗೂ ಫೋಟೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇದ್ದು ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿ 5 ವರ್ಷಗಳಾದ ಹಿನ್ನೆಲೆ ವೀಡಿಯೋ ಪೋಸ್ಟ್ ಮಾಡಿ ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ನೆನಪಿಸಿಕೊಂಡಿದ್ದರು. ಅದೇ ರೀತಿ ಅಪ್ಪ ಮಕ್ಕಳು ಆಟವಾಡುತ್ತಿರುವ ವೀಡಿಯೋಗಳನ್ನು ಸಹ ರಾಧಿಕಾ ಪಂಡಿತ್ ಹಂಚಿಕೊಳ್ಳುತ್ತಿರುತ್ತಾರೆ.
ಸದ್ಯ ಯಶ್ ನಟನೆಯ ಕೆಜಿಎಫ್ 2 ಸಿನಿಮಾ ತೆರೆಗೆ ಬಂದು ಐದು ತಿಂಗಳು ಕಳೆದಿದ್ದು ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಆದರೆ ಈ ವರೆಗೆ ಆ ಬಗ್ಗೆ ಅಪ್ಡೇಟ್ ಸಿಕ್ಕಿಲ್ಲ. ಅವರ ಹೊಸ ಸಿನಿಮಾ ಆದಷ್ಟು ಬೇಗ ಘೋಷಣೆ ಆಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ. ಅದಕ್ಕೂ ಮೊದಲು ಯಶ್ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿದ್ದು ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ವಿಚಾರ ಕೇಳಿ ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ.
ಅದು ನಿಜವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಸದ್ಯ ಯಶ್ ಹಾಗೂ ರಾಮ್ ಚರಣ್ ಒಟ್ಟಾಗಿ ಸಿನಿಮಾ ಮಾಡಲಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಈ ಚಿತ್ರಕ್ಕೆ ಆ್ಯಕ್ಷನ್ಕಟ್ ಹೇಳುತ್ತಿರುವುದು ಖ್ಯಾತ ನಿರ್ದೇಶಕ ನರ್ತನ್. ಈಗಾಗಲೇ ಎರಡು ಸ್ಟಾರ್ಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಅವರು ಗೆದ್ದು ತೋರಿಸಿದ್ದಾರೆ. ಮಫ್ತಿ ಚಿತ್ರದಲ್ಲಿ ಶಿವರಾಜ್ಕುಮಾರ್ ಹಾಗೂ ಶ್ರೀಮುರಳಿ ಪಾತ್ರಗಳನ್ನು ಬ್ಯಾಲೆನ್ಸ್ ಮಾಡಿ ತೆಗೆದುಕೊಂಡು ಹೋಗಿದ್ದರು. ಈ ಚಿತ್ರ ಗೆದ್ದಿತ್ತು. ಈಗ ನರ್ತನ್ ಅದೇ ಮಾದರಿಯ ಸಾಹಸಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಇದು ನಿಜವಾಗಲಿದೆಯೇ ಕಾದುನೋಡಬೇಕಿದೆ.