ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ನಟಿ ಅದಿತಿ ಪ್ರಭುದೇವ…ಚಿಂದಿ ವಿಡಿಯೋ

357

aditi prabhudeva marriage haldi ceremony: ಅಸಾಮಾನ್ಯ ಕನಸುಗಳನ್ನು ಇಟ್ಟುಕೊಂಡಿರುವ ಸಾಮಾನ್ಯ ಹುಡುಗಿ ಎಂದರೆ ನಟಿ ಅಧಿತಿ ಪ್ರಭುದೇವ ಅವರು. ಹೌದು ತೀರಾ ಸಾಮಾನ್ಯ ಕುಟುಂಬದಿಂದ ಬಂದ ಈ ಪ್ರತಿಭೆ, ತನ್ನದೇ ಆದ ಒಂದು ಗುರುತು ಬಿಟ್ಟು ಈ ಜಗತ್ತಿನಿಂದ ಮರಳಬೇಕು ಅನ್ನುವ ಅದಮ್ಯವಾದ ಆಸೆ ಇಟ್ಟುಕೊಂಡವರು. ಇನ್ನು ಅಧಿತಿ ಸಿನಿಮಾ ಜಗತ್ತಿಗೆ ಬರದೇ ಹೋಗಿದ್ದರೆ ಲೆಕ್ಚರರ್ ಆಗಿರುತ್ತಿದ್ದರು.

ಇಂಜಿನಿಯರಿಂಗ್ ಪದವಿ ಮುಗಿಸಿರುವ ಅವರು, ಎಂಬಿಎ ಕೂಡ ಮಾಡಿದ್ದಾರೆ. ಉಪನ್ಯಾಸಕಿ ಹುದ್ದೆ ಎಂದರೆ ಅವರಿಗೆ ಬಹಳ ಇಷ್ಟವಿದ್ದು, ಚಿತ್ರರಂಗದಲ್ಲಿ ಅವಕಾಶ ದೊರೆಯದೇ ಇದ್ದಿದ್ದರೆ ಕಾಲೇಜಲ್ಲಿ ಪಾಠ ಮಾಡಿಕೊಂಡು ಇದ್ದುಬಿಡುತ್ತಿದ್ದರು.

ಇನ್ನು ದಾವಣಗೆರೆಯ ಈ ಮುದ್ದು ಚೆಲುವೆ ಎಂದೂ ಕೂಡ ಸುಮ್ಮನೆ ಕೂತ ಹುಡುಗಿಯಲ್ಲ. ಟ್ಯೂಷನ್ ಹೇಳುವುದು, ಯಾವುದಾದರೂ ವಸ್ತು ತಯಾರಿಸಿ ಮಾರುವುದು, ವಾಯ್ಸ್‌ಓವರ್ ಕೊಡುವುದು, ಜಾಹೀರಾತಲ್ಲಿ ಕಾಣಿಸಿಕೊಳ್ಳುವುದು, ನಿರೂಪಣೆ ಮಾಡುವುದು, ಹೀಗೆ ಒಂದಲ್ಲ ಒಂದು ಕೆಲಸ ಮಾಡುತ್ತಾ ಬೆಳದು ಬಂದವರು.

ಎಂದಿಗೂ ಕೂಡ ಅವರು ಮನೆಯವರನ್ನು ಅವಲಂಬಿಸಿರಲಿಲ್ಲ ಹಾಗೂ ಸ್ವಂತ ಕಾಲ ಮೇಲೆ ನಿಲ್ಲಬೇಕು ಎಂಬ ಕನಸು ಅವರದಾಗಿತ್ತು. ಓದುವ ಸಮಯದಲ್ಲೂ ಕೂಡ ಎಲ್ಲರೂ ಪಿಕ್ನಿಕ್, ಸಿನಿಮಾ, ಔಟಿಂಗ್ ಎಂದು ರೆಡಿಯಾಗುತ್ತಿದ್ದರೆ ಅಧಿತಿ ಮಾತ್ರ ಕಾರ್ಯಕ್ರಮದ ನಿರೂಪಣೆ ಮಾಡಲು ರೆಡಿಯಾಗುತ್ತಿದ್ದರು. ಇದೀಗ ಅವರ ಅರಿಶಿನ ಶಸ್ತ್ರ ವಿಡಿಯೋ ನೋಡಿ.