ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ಎಂದೇ ರಾಧಿಕಾ ಅವರನ್ನು ಕರೆಯುತ್ತಾರೆ. ಧಾರಾವಾಹಿಗಳಲ್ಲಿ ನಟಿಸಿ ತದನಂತರ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿರುವ ಕೆಲವೇ ಕೆಲವು ನಟಿಯರಲ್ಲಿ ರಾಧಿಕಾ ಪಂಡಿತ್ ಕೂಡ ಒಬ್ಬರು. ರಾಧಿಕಾ ಅವರು ಮೊದಲು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿತದ್ದು 2008 ರಲ್ಲಿ ಮೊಗ್ಗಿನ ಮನಸ್ಸು ಎಂಬ ಚಿತ್ರದ ಮೂಲಕ. ಮೊದಲ ಸಿನೆಮಾದಲ್ಲೇ ಯಶಸ್ಸು ಕಂಡ ರಾಧಿಕಾ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. ರಾಧಿಕಾ ಅಭಿನಯಿಸಿದ ಎಲ್ಲಾ ಚಿತ್ರಗಳು ಹಿಟ್ ಆಗಿವೆ
ಸುದೀಪ್ ಯಶ್ ಅಪ್ಪು ಶಿವಣ್ಣ ರಂತಹ ಬಿಗ್ ಸ್ಟಾರ್ ಗಳ ಜೊತೆ ರಾಧಿಕಾ ತೆರೆ ಹಂಚಿ ಕೊಂಡಿದ್ದಾರೆ. ರಾಧಿಕಾ ಮೊದಲನೇ ಸಲ ತೆರೆ ಹಂಚಿಕೊಂಡಿದ್ದು ಯಶ್ ಅವರ ಜೊತೆ. 2007 ರಲ್ಲಿ ನಂದ ಗೋಕುಲ ಎಂಬ ಧಾರಾವಾಹಿಯಲ್ಲಿ ರಾಧಿಕಾ ಮತ್ತು ಯಶ್ ಅವರು ನಟನೆ ಮಾಡುವ ಮೂಲಕ ಇಬ್ಬರೂ ಒಟ್ಟಿಗೆ ವೃತ್ತಿ ಜೀವನವನ್ನು ಶುರು ಮಾಡಿದ್ದಾರೆ.
2016ರ ಆಗಸ್ಟ್ 12ರಂದು ರಾಧಿಕಾ ಪಂಡಿತ್ ಹಾಗೂ ಯಶ್ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಡಿಸೆಂಬರ್ 9ರಂದು ಈ ಜೋಡಿಯ ವಿವಾಹ ನೆರವೇರಿತು. 2018ರ ಡಿಸೆಂಬರ್ನಲ್ಲಿ ಆಯ್ರಾ ಜನಿಸಿದರೆ, 2019ರ ಅಕ್ಟೋಬರ್ 30ರಂದು ಯಥರ್ವ್ ಹುಟ್ಟಿದ.ವೃತ್ತಿ ಜೀವನ ಅಷ್ಟೇ ಅಲ್ಲ ದಾಂಪತ್ಯ ಜೀವನಕ್ಕೆ ಕೂಡ ಇಬ್ಬರೂ ಒಟ್ಟಿಗೆ ಜೊತೆ ಕೂಡಿದ್ದಾರೆ.
ರಾಧಿಕಾ ಪಂಡಿತ್ ಹಾಗೂ ಯಶ್ ಸ್ಯಾಂಡಲ್ವುಡ್ನ ಮಾದರಿ ಕಪಲ್ ಎಂದರೆ ತಪ್ಪಾಗಲಾರದು. ಇಬ್ಬರೂ ಸುಖವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.ಯಶ್ ಮತ್ತು ರಾಧಿಕಾ ಇಬ್ಬರಿಗೂ ಮಕ್ಕಳೆಂದರೆ ತುಂಬಾ ಇಷ್ಟ ಮಕ್ಕಳ ಜೊತೆ ಸಮಯ ಕಳೆಯುವುದೆಂದರೆ ಎಲ್ಲಿಲ್ಲದ ಖುಷಿ. ಬಿಡುವಿನ ಸಮಯದಲ್ಲಿ ಯಶ್ ಮತ್ತು ರಾಧಿಕಾ ತಮ್ಮ ಮಕ್ಕಳೊಂದಿಗೆ ವಿದೇಶಕ್ಕೆ ಹೋಗಿ ಎಂಜಾಯ್ ಮಾಡುತ್ತಾರೆ.
ರಾಕಿಂಗ್ ಸ್ಟಾರ್ ನಟನೆಯ KGF 2 ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರೇಕ್ಷಕರು ಮಾತ್ರ ವಲ್ಲದೇ ಅನೇಕ ಸಿನಿ ಗಣ್ಯರು ಸಹ ಸಿನಿಮಾ ನೋಡಿ ಹಾಡಿಹೊಗಳಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಸಹ ಕೆಜಿಎಫ್-2 ಸಿನಿಮಾವನ್ನು ಕನ್ನಡದಲ್ಲೇ ನೋಡಿ ಮೆಚ್ಚಿಕೊಂಡಿದ್ದಾರೆ.ಕೆಜಿ ಎಪ್ ಸಿನಿಮಾದ ಪ್ರೆಸ್ ರಿಲೀಸ್ ನಲ್ಲಿ ಶಿವರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು.ಈ ಸಂಧರ್ಭದಲ್ಲಿ ದಲ್ಲಿ ಕೆಜಿಎಪ್ ನ್ನು ಹೊಗಳಿದ ಶಿವರಾಜ್ ಕುಮಾರ್ ರಾಧಿಕಾ ಮದುವೆ ಆದ ಮೇಲೆ ಯಶ್ ಲಕ್ಕ್ ಹೆಚ್ಚಾಗಿದೆ ಅಂದಿದ್ದಾರೆ.
ಕನ್ನಡದ ಪ್ಯಾನ್ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ? ಯಾವಾಗ ಈ ಸಿನಿಮಾ ಶುರು ಆಗುತ್ತದೆ. ಹಾಗೆ ಶುರು ಆಗೋ ಚಿತ್ರದ ಡೈರೆಕ್ಟರ್ ಯಾರು? ಯಶ್ ಒಪ್ಪಿಕೊಂಡಿರೋ ಆ ಕಥೆಯಾದ್ರೂ ಯಾವುದು. ಇಂತಹ ಪ್ರಶ್ನೆಗಳೂ ಕೆಜಿಎಫ್-2 ಸಿನಿಮಾ ಬರುವ ಮುಂಚೇನು ಇದ್ದವು. ಸಿನಿಮಾ ಬಂದು ಸೂಪರ್ ಹಿಟ್ ಆದ್ಮೇಲೆ ಇವೆ.
ಆದರೆ ದೀಪಾವಳಿ ಹಬ್ಬಕ್ಕೆ ಒಂದು ಬ್ಲಾಸ್ಟಿಂಗ್ ನ್ಯೂಸ್ ಕೂಡ ಹೊರ ಬಿದ್ದಿದೆ. ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಅನೌನ್ಸ್. ಕೆವಿಎನ್ ಪ್ರೋಡಕ್ಷನ್ ಹೌಸ್ ನಿಂದಲೇ ಸಿನಿಮಾ ನಿರ್ಮಾಣ. ಡೈರೆಕ್ಟರ್ ನರ್ತನ್ ಈ ಸಿನಿಮಾ ಡೈರೆಕ್ಟರ್. ಈ ಎಲ್ಲ ವಿಷಯ ಕೆವಿನ್ ಪ್ರೋಡಕ್ಷನ್ ಹೌಸ್ನ ಹೆಸರಿನ ಸೋಷಿಯಲ್ ಮೀಡಿಯಾ ಪೇಜ್ನಲ್ಲಿಯೇ ರಿವೀಲ್ ಆಗಿದೆ. ಈ ಮೂಲಕ ಯಶ್ ಫ್ಯಾನ್ಸ್ ಗೆ ಸಿಹಿ ಸುದ್ದಿ ಕೂಡ ಸಿಕ್ಕಿದೆ.