Duniya Vijay: ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ಪ್ರಮುಖ ನಾಯಕ ನಟಿ. ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ತೆರೆ ಹಂಚಿಕೊಂಡಿರುವ ರಚಿತಾ 2013 ರಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.
2013 ರಲ್ಲಿ ತೆರೆಕಂಡ ಬುಲ್ಬುಲ್ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಪ್ರವೇಶಿಸಿದರು.ಚಿತ್ರದ ಅಡಿಷನ್ಗಾಗಿ ಬಂದ 200 ಕ್ಕೂ ಹೆಚ್ಚು ಯುವತಿಯರಲ್ಲಿ ರಚಿತಾ ಆಯ್ಕೆಯಾದರು.ಈ ಚಿತ್ರದಲ್ಲಿ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್ ಮತ್ತು ಕ್ಯೂಟ್ ನಟನೆಯಿಂದ ಪ್ರೇಕ್ಷಕರ ಮತ್ತು ವಿಮರ್ಶಕರ ಅಪಾರ ಮೆಚ್ಚುಗೆ ಪಡೆದರು.
ನಂತರ ದರ್ಶನರ `ಅಂಬರೀಶ್ ಗಣೇಶ್ರ ದಿಲ್ ರಂಗೀಲಾ ಸುದೀಪ್ರ `ರನ್ನ ಶ್ರೀಮುರಳಿಯವರ `ರಥಾವರ’ ಪುನೀತ್ರ ಚಕ್ರವ್ಯೂಹ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡದ ಬಹುಬೇಡಿಕೆಯ ನಟಿಯಾದರು. ರನ್ನ ಚಿತ್ರದ ಅಭಿನಯಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲ್ಮಫೇರ್ ಸೌಥ್ ಪ್ರಶಸ್ತಿ ಪಡೆದರು.
ಸ್ಯಾಂಡಲ್ ವುಡ್ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಮಾನ್ಸೂನ್ ರಾಗ ಸಿನಿಮಾ ಕೂಡ ಒಂದು. ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಬರ್ತಿರುವ ಮೊದಲ ಸಿನಿಮಾ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿರುವ ಮಾನ್ಸೂನ್ ರಾಗ ಸಿನಿಮಾ ರಿಲೀಸ್ ಆಗಿದೆ.
ಸಿನಿಮಾ ರಿಲೀಸ್ಗೂ ಮೊದಲೇ ಸಿನಿಮಾತಂಡ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ಸಿನಿಮಾತಂಡ ಹಾಜರಾಗಿತ್ತು. ವಿಶೇಷ ಅತಿಥಿಯಾಗಿ ದುನಿಯಾ ವಿಜಯ್ ಆಗಮಿಸಿದ್ದರು. ನಟಿ ಸುಹಾಸಿನಿ, ಡಾಲಿ ಧನಂಜಯ್, ರಚಿತಾ ರಾಮ್, ಅಚ್ಯುತ್ ಕುಮಾರ್, ಯಶ ಶಿವಕುಮಾರ್ ಸೇರಿದಂತೆ ಇಡಿ ತಂಡ ಹಾಜರಗಿತ್ತು.
ರವೀಂದ್ರ ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮನ್ಸೂನ್ ರಾಗ ಸಿನಿಮಾ ಇದೇ ತಿಂಗಳು 16ರಂದು ರಿಲೀಸ್ ಆಗುತ್ತಿದೆ. ಪ್ರೀ ರಿಲೀಸ್ ಈವೆಂಟ್ನಲ್ಲಿ ಸಿನಿಮಾತಂಡ ಅನೇಕ ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಅಂದಹಾಗೆ ದುನಿಯಾ ವಿಜಯ್ ಈ ಪ್ರೀ ರಿಲೀಸ್ ಈವೆಂಟ್ಗೆ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ದುನಿಯಾ ವಿಜಯ್ ರಚಿತಾ ರಾಮ್ ಅವರನ್ನು ಹಾಡಿಹೊಗಳಿದ್ದಾರೆ.
ರಚಿತಾ ರಾಮ್ ಇಷ್ಟು ವರ್ಷ ಸಿನಿಮಾರಂಗದಲ್ಲಿ ಇದ್ದಾರೆ ಅಂದರೆ ರಚಿತಾ ಎದೆಯಲ್ಲಿ ಮೋಸ ಇಲ್ಲ ಹಾಗಾಗಿ ಎಂದು ಹೇಳಿದ್ದಾರೆ. ಧನಂಜಯ್ ಮತ್ತು ದುನಿಯಾ ವಿಜಯ್ ಇಬ್ಬರೂ ವೇದಿಕೆಯಲ್ಲಿ ನಿಂತು ಮಾತನಾಡುವಾಗ ರಚಿತಾ ರಾಮ್ ಅವರನ್ನು ಹಾಡಿಹೊಗಳಿದರು. ರಚಿತಾ ಎದೆಯಲ್ಲಿ ಮೋಸ ಇಲ್ಲ. ಅದಕ್ಕೆ ಅವರು ಇನ್ನೂ ಚಿತ್ರರಂಗದಲ್ಲಿದ್ದಾರೆ’ ಎಂದು ಹೇಳಿದರು. ಅವರ ಕಣ್ಣುಗಳು ಪಳ ಪಳ ಅಂತ ಹೊಳೀತಾ ಇರುತ್ತೆ’ ಎಂದು ಹೇಳಿದರು.
ಇನ್ನು ನಟಿ ಸುಹಾಸಿನಿ ಬಗ್ಗೆಯು ದುನಿಯಾ ವಿಜಯ್ ಮಾತನಾಡಿದ್ದಾರೆ. ಅವರನ್ನು ಹಾಡಿ ಹೊಗಳಿದ್ದಾರೆ. ಭಗವಂತ ಮತ್ತೆ ನನಗೆ ಜನ್ಮ ಕೊಟ್ರೆ ಸುಹಾಸಿನಿ ಮೇಡಂ ಜೊತೆ ವಿಷ್ಣು ಸರ್ ಬಂಧನ ಪಾತ್ರ ಮಾಡ್ತೀನಿ.
ಸುಹಾಸಿನಿ ಮೇಡಂ ಜೊತೆ ಒಂದ್ ಫೋಟೋ ತಗೋಬೇಕು’ ಅಂತ ದುನಿಯಾ ವಿಜಯ್ ಹೇಳಿದರು.
ಇನ್ನು ನಟ ಧನಂಜಯ್ ಕೂಡ ಮಾತನಾಡಿ ಮಾನ್ಸೂನ್ ರಾಗ ತುಂಬಾ ನೆನಪುಗಳನ್ನ ಕೊಟ್ಟಿದೆ. ರಚಿತಾ ರಾಮ್ ಜೊತೆ ನಟಿಸಿದ್ದು ಖುಷಿಯಾಗಿದೆ. ರಚಿತಾ ಮನೆ ಮುಂದೆ ನಾವೆಲ್ಲಾ ಬೀಟ್ ಹಾಕ್ತಿದ್ವಿ ಅವಾಗ. ಕತ್ರಿ ಗುಪ್ಪೆಯಲ್ಲಿ ರಚಿತಾ ಇದ್ರು. ಆಗ ಡಿಂಪಲ್ ಡಿಂಪಲ್ ಕಾಣುತ್ತಾ ಅಂತ ಮನೆ ಮುಂದೆ ಬೀಟ್ ಹಾಕ್ತಿದ್ವಿ’ ಎಂದು ಹೇಳಿದರು
ಇನ್ನು ನಟ ಧನಂಜಯ್ ಸುಹಾಸಿನಿ ಅವರಿಗಾಗಿ ಹಾಡು ಹಾಡಿದರು. ಧನಂಜಯ್ ಅವರ ಕವಿತೆಗೆ ನೂರೊಂದು ನೆನಪು ಹಾಡನ್ನು ಸುಹಾಸಿನಿ ಹಾಡಿದ್ರು. ಧನಂಜಯ್ ಮತ್ತು ದುನಿಯಾ ವಿಜಯ್ ಹೊಗಳಿಗೆ ನಟಿ ರಚಿತಾ ರಾಮ್ ಎದ್ದು ಕೈ ಮುಗಿದರು. ಇನ್ನು ಮಾನ್ಸೂನ್ ರಾಗ ಮೂಲಕ ನಟಿ ಸುಹಾಸಿನಿ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.