ವಾರ್ತಾ ಮಂಜರಿ
Trending Stories, Viral News, Gossips & Everything in Kannada

Viral: ಮೋದಿಗೆ ಪತ್ರ ಬರೆದಿದ್ದ ಶಿಕ್ಷಣ ಪ್ರೇಮಿ ನಿರಂಜನ್, ಬರೆದ ಪತ್ರಕ್ಕೆ ಯಶಸ್ಸು, ಏನಾಗಿದೆ ಗೊತ್ತಾ?

132

ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಜೀವನಕ್ಕೂ ಅಗತ್ಯವಾಗಿ ಬೇಕು. ಆದರೆ ಕೆಲವರಿಗೆ ಕಾಲೇಜಿನ ಮೆಟ್ಟಿಲು ಹತ್ತಲು ಆರ್ಥಿಕ ಸಮಸ್ಯೆಎದುರಾಗುತ್ತದೆ. ಹೀಗಾಗಿ ಅನೇಕರು ಕಾಲೇಜು ಶಿಕ್ಷಣ ಪಡೆಯಬೇಕು ಎನ್ನುವುದು ನನಸಾಗಿ ಯೇ ಬಿಡುತ್ತದೆ. ಆದರೆ ಇಲ್ಲೊಬ್ಬ ಶಿಕ್ಷಣ ಪ್ರೇಮಿಯೂ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮೋದಿಗೆ ಪತ್ರವನ್ನು ಬರೆದಿದ್ದರು. ಆದರೆ ಇದೀಗ ಅವರ ಕನಸು ಈಡೇರಿದೆ. ಹೌದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸ್ಥಳೀಯ ಶಿಕ್ಷಣ ಪ್ರೇಮಿಯೊಬ್ಬರು ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭಕ್ಕಾಗಿ ಪ್ರಧಾನಿ ಮೋದಿ ಹಾಗೂ ಸಿಎಂ ಸೇರಿದಂತೆ ಅನೇಕರಿಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಸದ್ಯಕ್ಕೆ ಅವರ ಆಸೆಯೂ ನೆರವೇರಿದೆ.

ಆ ಸ್ಥಳೀಯ ಶಿಕ್ಷಣ ಪ್ರೇಮಿಯ ಹೆಸರು ನಿರಂಜನ್ ಜೋಶಿ, ನಾಲತವಾಡ ಪಟ್ಟಣದ ನಿವಾಸಿಯಾಗಿದ್ದಾರೆ. ಇವರ ಸತತ ಪ್ರಯತ್ನದಿಂದ ಪಟ್ಟಣದಲ್ಲಿ ಪದವಿಪೂರ್ವ ಕಾಲೇಜು ಆರಂಭಕ್ಕೆ ಆದೇಶವಾಗಿದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಒಟ್ಟು 46 ಪದವಿಪೂರ್ವ ಕಾಲೇಜುಗಳ ಮಂಜೂರಾತಿಗೆ ಸರ್ಕಾರ ಆದೇಶ ನೀಡಿರುವುದು ಖುಷಿ ಪಡುವ ವಿಚಾರವಾಗಿದೆ. ಅಂದಹಾಗೆ, ನಿರಂಜನ್ ಜೋಶಿ ರಕ್ತ ಪತ್ರ ವ್ಯವಹಾರವು ಬಹಳ ರೋಚಕವಾಗಿತ್ತು ಎಂದರೆ ತಪ್ಪಾಗಲಾರದು. ಅಂದಹಾಗೆ, ಕಳೆದ ಐದು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಹೈಸ್ಕೂಲ್, ಪಿಯು, ಡಿಗ್ರಿ ಕಾಲೇಜು ಸ್ಥಾಪನೆಗಾಗಿ ಆಗಿನ ಶಾಸಕ ಸಿ.ಎಸ್ ನಾಡಗೌಡ, ಡಿಸಿ, ಡಿಡಿಪಿಯುಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಆದರೆ ಇವರ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಸಿಗಲೇ ಇಲ್ಲ, ಯಾವುದೇ ಪ್ರಯೋಜನ ಕೂಡ ಆಗಲಿಲ್ಲ.

ತದನಂತರದಲ್ಲಿ ಅಂದರೆ, 2018ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಆರು ತಿಂಗಳ ನಂತರ ಪ್ರಧಾನಿ ಕಚೇರಿಯಿಂದ ಕಾಲೇಜು ಆರಂಭಿಸುವ ಭರವಸೆ ದೊರೆತಿತ್ತು. ಈ ಪತ್ರ ಬಂದಿದ್ದು, ಸಿಎಂ ಕಚೇರಿಯಿಂದ ಪರಿಶೀಲಿಸಲಾಗುವುದು ಎಂಬ ಉತ್ತರವು ಇವರಿಗೆ ಸಿಕ್ಕಿತ್ತು. ಈ ನಿರಂಜನರವರ ಮೂಲ ಉದ್ದೇಶವೆಂದರೆ, ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ತಪ್ಪಿಸಲು ಹಾಗೂ ಬಡ ಮಕ್ಕಳ ಭವಿಷ್ಯದ ಶಿಕ್ಷಣಕ್ಕಾಗಿ ರಕ್ತ ಪತ್ರ ವ್ಯವಹಾರ ಶುರು ಮಾಡಿದ್ದರು. ಕಾಲೇಜು ಆರಂಭಿಸುವಂತೆ ಪ್ರಧಾನಿಯವರಿಗೆ ರಕ್ತದಲ್ಲಿ 10 ಪುಟಗಳ ಪತ್ರ ಬರೆದು ಮನವಿ ಮಾಡಿದ್ದರು. ಆದರೆ ಇವರ ಈ ಉದ್ದೇಶಕ್ಕೆ ಅಡ್ಡಿಯಾದದ್ದು ಕೊರೊನಾ. ಕೊರೋನದಿಂದಾಗಿ ಕಾಲೇಜು ಆರಂಭಕ್ಕೆ ಹಿನ್ನಡೆಯಾಯಿತು. ಸದ್ಯ ರಾಜ್ಯ ಸರ್ಕಾರ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.

ಇದೀಗ ಸರ್ಕಾರದಿಂದ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಸ್ಥಳೀಯರು ಈ ಕುರಿತು ಸಂತಸ ವ್ಯಕ್ತಪಡಿಸಿದ್ದು, ಪಟ್ಟಣದ ಮಕ್ಕಳ ಕಾಲೇಜು ಶಿಕ್ಷಣಕ್ಕಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದ ಪಾಲಕರಿಗೆ ಈ ವಿಚಾರ ಹರ್ಷವನ್ನುಂಟು ಮಾಡಿದೆ. ನಿರಂಜನ ಅವರ ಹೋರಾಟಕ್ಕೆ ಜಯ ದೊರೆತಿದ್ದು, ಪಟ್ಟಣಕ್ಕೆ ಪದವಿ ಪೂರ್ವ ಕಾಲೇಜು ಮಂಜೂರಾಗಿದೆ. ನಮ್ಮ ನಾಲತವಾಡ ಪಟ್ಟಣದಲ್ಲಿ ಕಾಲೇಜು ಪ್ರಾರಂಭಿಸುವುದರಿಂದ ನಮ್ಮ ಮಕ್ಕಳು ನಮ್ಮ ಊರಲ್ಲೇ, ನಮ್ಮ ಕಣ್ಮುಂದೆ ಕಲಿಯಲು ಅನುಕೂಲವಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಖಾಸಗಿ ಕಾಲೇಜುಗಳ ಡೊನೇಷನ್ ಹಾವಳಿ ತಪ್ಪಿಸಲು ಹಾಗೂ ಬಡ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಸತತವಾಗಿ ತಮ್ಮ ರಕ್ತದಿಂದ ಪತ್ರ ಬರೆದು ಇದೀಗ ಯಶಸ್ಸು ಕಂಡಿರುವ ನಿರಂಜನ ಅವರಿಗೆ ಗ್ರಾಮಸ್ಥರು ಧನ್ಯವಾದ ಹೇಳಿದ್ದಾರೆ. ಒಟ್ಟಿನಲ್ಲಿ ಶಿಕ್ಷಣ ಪ್ರೇಮಿಯೊಬ್ಬರ ಕನಸು ನನಸಾಗಿರುವುದು ಖುಷಿ ಪಡುವ ವಿಚಾರ.