ವಾರ್ತಾ ಮಂಜರಿ
Trending Stories, Viral News, Gossips & Everything in Kannada

Video: ಹತ್ತು ಬಾರಿ ಮುಖಾಮುಖಿಯಾಗಿ ಸೆಣಸಾಡುತ್ತಿರುವ ಹಾವು ಹಾಗೂ ಮುಂಗುಸಿ, ಸೆಣಸಾಟದಲ್ಲಿ ಗೆದ್ದವರು ಯಾರು?

493

ಈ ಜಗತ್ತು ಅದ್ಭುತವಾಗಿದ್ದು, ಇಲ್ಲಿರುವ ಒಂದೊಂದು ಜೀವರಾಶಿಗಳು ಮುಖ್ಯವಾದುದ್ದೆ. ಸೃಷ್ಟಿಯೊಳಗಿನ ನಿಗೂಢತೆಯನ್ನು ಭೇದಿಸಲು ಯಾರಿಗೂ ಸಾಧ್ಯವಿಲ್ಲ. ಈ ಜೀವ ಸಂಕುಲದಲ್ಲಿರುವ ಜೀವಿಗಳ ರಚನೆ ಗಾತ್ರಗಳನ್ನು ವ್ಯತ್ಯಾಸಗಳಿರುತ್ತವೆ. ಆದರೆ ಒಂದು ಜೀವಿಯಿಂದ ಮತ್ತೊಂದು ಜೀವಿಗೆ ಭಿನ್ನತೆಯನ್ನು ಕಾಣಬಹುದು. ತನ್ನ ಜೀವ ಉಳಿಸಿಕೊಳ್ಳಲು ಹರಸಾಹಸ ಕೂಡ ಪಡುತ್ತವೆ. ಮನುಷ್ಯರಂತೆ ಈ ಜೀವಿಗಳು ಕೂಡ, ಇನ್ಯಾವುದಾದರೂ ಜೀವಿ ಆಕ್ರಮಣ ಮಾಡಿದಾಗ, ತನ್ನ ಜೀವವನ್ನು ರಕ್ಷಿಸಲು ಪ್ರಕೃತಿ ಅದ್ಭುತವಾದ ದೇಹ ರಚನೆಯನ್ನು ಮಾಡಿದೆ. ಹೀಗಾಗಿ ಜೀವ ಸಂಕುಲದಲ್ಲಿರುವ ಪ್ರತಿಯೊಂದು ಜೀವಿಯೂ ತನ್ನನ್ನು ರಕ್ಷಿಸಿಕೊಂಡು ಜೀವಿಸುತ್ತವೆ. ಅದರಲ್ಲಿಯೂ ಹಾವುಗಳ ವಿಷಯಕ್ಕೆ ಬಂದರೆ ಎಲ್ಲರೂ ಭಯ ಪಡುವುದಕ್ಕೆ ಮುಖ್ಯ ಕಾರಣ ಅದರಲ್ಲಿರುವ ವಿಷ. ಈ ಹಾವುಗಳನ್ನು ಕಂಡಾಗ ಸಾಮಾನ್ಯವಾಗಿ ಎಲ್ಲರೂ ಭಯ ಪಡುತ್ತಾರೆ. ಇನ್ನು ಮುಂಗುಸಿ ಮತ್ತು ಹಾವು ಎನ್ನುವ ಪ್ರಾಣಿಗಳ ನಡುವೆ ವೈರತ್ವ ಇದೆ ಎಂದು ಪ್ರಾಚೀನ ಕಾಲದ್ದು, ಆದರೆ ಇದೀಗ ಅಪರೂಪದ ವಿಡಿಯೋವೊಂದು ವೈರಲ್ ಆಗಿದ್ದು, ಏನಿದರ ವಿಶೇಷತೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಅನೇಕ ಬಾರಿ ಹಾವು ಮತ್ತು ಮುಂಗುಸಿ ಕಚ್ಚಾಟ ನಡೆಸಿ ಹಾವು ತನ್ನ ಜೀವ ಕಳೆದುಕೊಳ್ಳುವುದನ್ನು ಜನರು ನೋಡಿದ್ದಾರೆ. ಅಷ್ಟೇ ಅಲ್ಲದೆ,ಹಾವುಗಳ ಕಾಟ ಅಧಿಕವಾಗಿರುವ ಕಡೆ ಮುಂಗುಸಿ ತಂದು ಬಿಡುವುದು ಇದೆ. ಈ ಹಾವು ಮುಂಗುಸಿ ನಡುವೆ ಹೋರಾಟ ನಡೆದ ಸಮಯದಲ್ಲಿ ಮುಂಗುಸಿ ಬೇಗ ಸೋಲುವುದಿಲ್ಲ, ಮುಂಗುಸಿ ಶರೀರದಲ್ಲಿ ಇರುವ ಉದ್ದನೆಯ ಕೂದಲಿಗೆ ಅತಿಯಾದ ರೋಗನಿರೋಧಕ ಶಕ್ತಿ ಇದೆ, ಹಾಗೆಯೇ ಮುಂಗುಸಿಗೆ ಆಹಾರ ಹಾವು, ಹಾಗೂ ಮುಂಗುಸಿ ಮೇಲೆ ಪ್ರಹಾರ ಮಾಡಿ ಕಚ್ಚಿದರೂ ಹಾವಿನ ವಿಷ ಮುಂಗುಸಿ ಶರೀರದಲ್ಲಿ ಹರಡುವುದಿಲ್ಲ, ಅಂತಹ ರೋಗನಿರೋಧಕ ಶಕ್ತಿ ಮುಂಗುಸಿ ಹೊಂದಿದೆ. ಸಾಮಾನ್ಯವಾಗಿ ಯಾರಾದರೂ ಕೂಡ ಕಿತ್ತಾಡಿಕೊಂಡರೆ ಹಾವು ಮುಂಗುಸಿ ಜಗಳಕ್ಕೆ ಹೋಲಿಕೆ ಮಾಡುತ್ತೇವೆ. ಇನ್ನು, ಸೋಶಿಯಲ್ ಮೀಡಿಯಾಗಳಲ್ಲೂ ಹಾವು ಮುಂಗುಸಿಯ ಕಚ್ಚಾಟದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.

ಹೌದು, ಈ ಹಾವು ಮುಂಗುಸಿಗಳು ಕಚ್ಚಾಟ ನಡೆಸುವುದು ಸರ್ವೇ ಸಾಮಾನ್ಯ. ಹಾವು ಮುಂಗುಸಿಯೂ ಸೆಣಸಾಟ ನಡೆಸಲು ಶುರು ಮಾಡಿದರೆ ಅಷ್ಟು ಸುಲಭವಾಗಿ ನಿಲ್ಲುವುದಿಲ್ಲ. ಎರಡರಲ್ಲಿ ಒಂದು ಸೆಣಸಾಟ ನಡೆಸಿ ಜೀವ ಬಿಡುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸುಮಾರು ಹತ್ತು ಬಾರಿ ಸೆಣಸಾಟ ನಡೆಸಲು ಹಾವು ಹಾಗೂ ಮುಂಗುಸಿಯೂ ಮುಖಾಮುಖಿಯಾಗಿದೆ. ಹಾವು ಮತ್ತು ಮುಂಗುಸಿಯೂ ಜಟಾಪಟಿ ಜೋರಾಗಿಯೇ ಇದೆ. ಈ ಹಾವು ಮುಂಗುಸಿಯ ಜಗಳವನ್ನು ನೋಡಿದರೆ ಎಂತಹವರಿಗಾದರೂ ಕೂಡ, ಒಂದು ಕ್ಷಣ ಮೈ ಜುಮ್ ಎನಿಸದೇ ಇರದು. ಸುಮಾರು ಹತ್ತು ಬಾರಿ ಸೆಣಸಾಟ ನಡೆಸಲು ಮುಖಾ ಮುಖಿಯಾಗಿರುವ ಈ ಅಪರೂಪದ ದೃಶ್ಯವನ್ನು ನೋಡಲು ಈ ಕೆಳಗಿನ ವಿಡಿಯೋ ನೋಡಿ.