ಸದ್ಯ ಚಿತ್ರರಂಗದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಹರಿಪ್ರಿಯಾ ರವರು ತಮ್ಮ ಭಿನ್ನ ಪಾತ್ರಗಳ ಮೂಲಕ ತಮಗೆ ತಾವೇ ಸ್ಪರ್ಧೆಯನ್ನೊಡ್ಡಿಕೊಂಡು ಸಿನಿಮಾದಿಂದ ಸಿನಿಮಾಕ್ಕೆ ಪ್ರಬುದ್ಧವಾಗಿದ್ದಾರೆ ಎನ್ನಬಹುದು.
ಮೂಲತಃ ಚಿಕ್ಕಬಳ್ಳಾಪುರದಲ್ಲಿ ಜನಿಸಿದ ಈ ಮೂಗುತಿ ಚೆಲುವೆ ತಾವು ಪ್ರಥಮ ಪಿಯುಸಿಯಲ್ಲಿ ವ್ಯಾಸಾಂಗ ಮಾಡುವಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಉಗ್ರಂ ನೀರ್ ದೋಸೆ ಸೂಜಿದಾರಾ ಬೆಲ್ ಬಾಟಮ್ ಕಥಾ ಸಂಗಮ ಡಾಟರ್ ಆಫ್ ಪಾರ್ವತಮ್ಮ ಹೀಗೆ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮನಗೆದ್ದಿದ್ದಾರೆ ಹರಿಪ್ರಿಯಾರವರು.
ಇನ್ನು ನಟಿ ಹರಿಪ್ರಿಯಾ ಅವರು ಮೊದಲು ನಟಿಸಿದ್ದು ತುಳುವಿನ ಬಡಿ ಎಂಬ ಸಿನಿಮಾದಲ್ಲಿ. ಆ ಸಿನಿಮಾದಲ್ಲಿ ಆಕೆಯ ಹೆಸರು ಶ್ರುತಿ ಅಂತ ಇತ್ತು. ಆದರೆ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಿಂದ ಆಫರ್ ಬರುತ್ತದೆ. ಇನ್ನು ತಮೆಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಶ್ರುತಿ ಹೆಸರಿನ ನಾಯಕಿ ಖ್ಯಾತರಾಗಿದ್ದಾರೆ. ಹಾಗಾಗಿ ತುಳು ಸಿನಿಮಾದ ನಿರ್ದೇಶಕರು ಹೆಸರು ಬದಲಾಯಿಸಿಕೊಳ್ಳಿ ಎಂದು ಸಲಹೆ ಕೊಟ್ಟಿದ್ದು 12 ವರ್ಷಗಳ ಹಿಂದೆ ಇರದೇ ಇದ್ದ ಹರಿಪ್ರಿಯಾ ಈಗಿದ್ದಾಳೆ.
ಹೊರ ಜಗತ್ತಿಗೆ ಹರಿಪ್ರಿಯಾ ಗೊತ್ತು ಆದರೆ ಶ್ರುತಿ ನನ್ನ ಮನದ ಮೂಲೆಯಲ್ಲಿ ಜೀವಂತವಾಗಿದ್ದಾಳೆ ಎಂದು ಹರಿಪ್ರಿಯಾ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಮನೆಯವರು ಬಿಟ್ಟು ಇನ್ಯಾರೂ ಶ್ರುತಿ ಎಂದು ಕರೆಯುವುದಿಲ್ಲವಂತೆ. ಈ ಕೊರಗು ಅವರ ಮನದಲ್ಲಿ ಸದಾ ಕಾಡುತ್ತಿದೆ ಎಂದು ತಿಳಿಸಿದ್ದಾರೆ. ಇದೀಗ ಅವರ ಮಾಡುವೆ ವಿಡಿಯೋ ವೈರಲ್ ಆಗಿದೆ ನೋಡಿ.