ನಮ್ಮ ಕನ್ನಡ ಚಿತ್ರರಂಗದ ಟಾಪ್ ನಟಿಯಾರಲ್ಲಿ ಮುದ್ದು ಮುಖದ ಚೆಲುವೆ ಹರಿಪ್ರಿಯಾ ಸಹ ಒಬ್ಬರಾಗಿದ್ದು ತುಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅವರು ತದನಂತರ ಕನ್ನಡ ಚಿತ್ರರಂಗದಲ್ಲಿ ಅದ್ಭುತ ನಟಿಯಾಗಿ ಟಾಪ್ ಹಿರೋಯಿನ್ ಆಗುತ್ತಾರೆ.
ಹೌದು ಇನ್ನು ಇವರ ಮೂಲ ಹೆಸರು ಶ್ರುತಿ ಎಂಬುದಾಗಿದ್ದು ಸಿನಿಮಾದಲ್ಲಿ ಹರಿಪ್ರಿಯಾ ಎಂದು ಬದಲಿಸಿಕೊಂಡಿದ್ದು ಈ ಹೆಸರಿನಿಂದಲೇ ಪ್ರಸಿದ್ಧರಾಗಿ ಭಾರತೀಯ ಚಲನಚಿತ್ರದ ನಟಿ ಮತ್ತು ರೂಪದರ್ಶಿ ಆಗುತ್ತಾರೆ. ಇನ್ನು ನಟಿ ಹರಿಪ್ರಿಯಾ ಅವರು1991 ಅಕ್ಟೋಬರ್ 29ರಂದು ನಮ್ಮ ಬೆಂಗಳೂರಿನಲ್ಲಿಯೇ ಜನಿಸಿದ್ದು ಬೆಳೆದದ್ದು ಮಾತ್ರ ಕೋಲಾರದ ಚಿಕ್ಕಬಳ್ಳಾಪುರ ಪಟ್ಟಣದಲ್ಲಿ.
ಹೌದು ಅಲ್ಲಿಯೇ ಅವರು ತಮ್ಮ ವಿದ್ಯಾಭ್ಯಾಸವನ್ನು ಸಹ ಪೂರ್ಣಗೊಳಿಸಿದ್ದು ಅಲ್ಲದೆ ಇವರು ಭರತನಾಟ್ಯದಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ.
ಹೌದು ಭರತನಾಟ್ಯ ಕಲಿತ ಬಳಿಕ ಹಲವಾರು ಭರತನಾಟ್ಯ ಕಾರ್ಯಕ್ರಮ ಮಾಡಿ ಸೈ ಎನಿಸಿಕೊಂಡ ಹರಿಪ್ರಿಯಾ ರವರು 2008 ರಲ್ಲಿ ತೆರೆಕಂಡ ಮನಸುಗಳು ಮಾತು ಮಧುರ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದಾದ ನಂತರ ಕನ್ನಡ ಮಾತ್ರವಲ್ಲದೆ ತೆಲುಗು ಭಾಷೆಯ ಸಿನಿಮಾಗಳಲ್ಲಿ ಅದ್ಭುತವಾಗಿ ಅಭಿನಯಿಸಿ ಜನರ ಗಮನವನ್ನ ತನ್ನತ್ತ ಸೆಳೆದಿದ್ದಾರೆ.
ಸಾಮಾನ್ಯವಾಗಿ ಅನೇಕ ನಟ ನಟಿಯರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ಬಳಿಕ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು ಅದೇ ರೀತಿಯಾಗಿ ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ರವರು ಕೂಡ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದರು.
ಹೌದು ನಟಿ ಹರಿಪ್ರಿಯಾ ಅವರ ಮೊದಲ ಹೆಸರು ಶ್ರುತಿ ಮೊದಲ ಸಿನಿಮಾದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು ಹರಿಪ್ರಿಯಾ ಮೊದಲಿಗೆ ತುಳಿವಿನ ಬಡಿ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೀಗ ಇವರ ಅರಿಶಿಣ ಶಾಸ್ತ್ರ ವಿಡಿಯೋ ನೋಡಿ .