ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಕ್ಷಣ ಹಾವು ಕಂಡರೆ ಭಯವಾಗುತ್ತದೆ. ಅದರಲ್ಲೂ ವಿಷಕಾರಿ ಹಾವು ಕಂಡರೆ ಮಾರುದ್ಧ ಓಡಿ ಹೋಗುತ್ತೇವೆ. ಏಕೆಂದರೆ ಪ್ರಾಣ ಭಯದಿಂದ ಜನರು ಓಡಿ ಹೋಗುತ್ತಾರೆ.ಇನ್ನು ಕೆಲವೊಮ್ಮೆ ಹಾವು ಕಂಡಾಗ ಪ್ರಜ್ನೆ ತಪ್ಪಿ ಬೀಳುತ್ತಾರೆ. ಆದರೆ ಹಾವುಗಳು ಮೃದು ಸ್ವಭಾವದವು. ಜನರು ತೊಂದರೆ ನೀಡಿದಾಗ ಮಾತ್ರ ಅವು ತಮ್ಮನ್ನು ರಕ್ಷಿಸಲೆಂದು ಕಚ್ಚುತ್ತವೆ. ಆದರೂ ವಿಶ್ವದಾದ್ಯಂತ ಬಹುತೇಕ ಜನರಿಗೆ ಹಾವು ಎಂದರೆ ಭಯ ಜಾಸ್ತಿ.
ಹಾವು ನೋಡಿದರೆ ಸಾಕು, ದೊಡ್ಡ ಗಂಡಾಂತರ ಕಾದಿದೆ ಎಂದು ತಿಳಿದುಕೊಳ್ಳುವವರೇ ಹೆಚ್ಚಾಗಿದ್ದು, ಹಾವು ನೋಡಿ ಭಯಗೊಳ್ಳುವವರೂ ನಮ್ಮಲ್ಲಿ ಜಾಸ್ತಿ ಮಂದಿಯೇ ಇದ್ದಾರೆ. ಅಲ್ಲದೇ, ಸುಖಾ ಸುಮ್ಮನೆ ಅದನ್ನು ಹಾನಿ ಮಾಡುವವರೂ ನಮ್ಮಲ್ಲೇನೂ ಕಮ್ಮಿ ಇಲ್ಲ.
ಹಾವು ಕೂಡ ಪಾಪದ ಜೀವ. ಸುಮ್ ಸುಮ್ನೆ ಯಾರಿಗೂ ತೊಂದರೆ ಕೊಡುವುದಿಲ್ಲ. ಅದನ್ನು ಕೆಣಕಿದರೆ ಮಾತ್ರ ನಮ್ಮ ಮೇಲೆ ದಾಳಿ ಮಾಡುತ್ತದೆ. ಇನ್ನು ಆಶ್ಚರ್ಯಕರ ಸಂಗತಿ ಏನೆಂದರೆ ಹಾವಿನ ಕೋಪ ತನ್ನ ಬಾಲದಲ್ಲಿ ವ್ಯಕ್ತವಾಗುತ್ತವೆ. ಆದರೆ, ಆ ಗುಣಕ್ಕೆ ಕಾರಣವೂ ಇದ್ದು, ಕಾಡಲ್ಲಿ ವಾಸಿಸುವ ಹಾವಿನ ಬಾಲ ಬಣ್ಣ ಬಣ್ಣದ್ದಾಗಿರುತ್ತದೆ.
ತನ್ನ ಬಾಲವನ್ನು ನಿಧಾನವಾಗಿ ಅಲುಗಾಡಿಸಿ ಕಪ್ಪೆ, ಚಿಟ್ಟೆ ಹಾಗೂ ಇನ್ನಿತರ ಪ್ರಾಣಿ-ಪಕ್ಷಿಗಳನ್ನು ಆಕರ್ಷಿಸುತ್ತವೆ. ನಂತರ ಅದನ್ನೇ ಆಹಾರ ಮಾಡಿಕೊಳ್ಳುತ್ತದೆ. ಇದೀಗ ಹಾವುಗಳು ಮಾಡಿದ ತೊಂದರೆಯಾ ವಿಡಿಯೋ ನೋಡಿ.