ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರೊನಾಲ್ಡೊ ಮಾತ್ರ ಹೊಡೆಯಲು ಸಾಧ್ಯವಾದ ಈ ಗೋಲ್..ಚಿಂದಿ ವಿಡಿಯೋ

27,071

ಸದ್ಯ ವಿಶ್ವದ ಖ್ಯಾತ ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮುಂದಿನ ಕ್ಲಬ್ ಯಾವುದೆಂಬ ಚರ್ಚೆಗಳ ಶುರುವಾಗಿದ್ದು ಏಕೆಂದರೆ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿರುವ ಪೋರ್ಚುಗಲ್​ ಸ್ಟಾರ್ ಹೊಸ ಕ್ಲಬ್​ ಅನ್ನು ಎದುರು ನೋಡುತ್ತಿದ್ದಾರೆ. ಸದ್ಯ ಇದರ ನಡುವೆ ಸೌದಿ ಅರೇಬಿಯಾ ಮೂಲದ ಅಲ್​ ನಾಸ್ರ್ ಫುಟ್​ಬಾಲ್ ಕ್ಲಬ್ ಕ್ರಿಸ್ಟಿಯಾನೊ ಜೊತೆ ಬಿಗ್ ಡೀಲ್ ಕುದಿರಿಸಿದೆ ಎಂದು ವರದಿಯಾಗಿದ್ದು ಅದು ಕೂಡ 432 ಮಿಲಿಯನ್ ಪೌಂಡ್ ನೀಡುವ ಮೂಲಕ ಎಂಬುದೇ ಅಚ್ಚರಿ.

ಸ್ಪ್ಯಾನಿಷ್ ಪತ್ರಿಕೆಯ ಔಟ್‌ಲೆಟ್ ಮಾರ್ಕಾ ವರದಿ ಪ್ರಕಾರವಾಗಿ  ಕ್ರಿಸ್ಟಿಯಾನೊ ರೊನಾಲ್ಡೊ ಅವರೊಂದಿಗೆ ಅಲ್​ ನಾಸ್ರ್ ಫುಟ್​ಬಾಲ್ ಕ್ಲಬ್ ಡೀಲ್ ಕುದಿರಿಸಿದ್ದು ಅದರಂತೆಯೇ  ಶೀಘ್ರದಲ್ಲೇ ರೊನಾಲ್ಡೊ ಹೊಸ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಒಪ್ಪಂದದ ಪ್ರಕಾರ ಕ್ರಿಸ್ಟಿಯಾನೊ 432 ಮಿಲಿಯನ್ ಪೌಂಡ್​ ಪಡೆದು ಅಲ್​ ನಾಸ್ರ್ ಪರ ಎರಡೂವರೆ ವರ್ಷ ಆಡಲಿದ್ದಾರೆ. ಹೌದು ಅಂದರೆ ಪ್ರತಿ ವರ್ಷ ಪೋರ್ಚುಗಲ್​ ಆಟಗಾರನಿಗೆ ಕ್ಲಬ್​ ಭಾರತೀಯ ಮೌಲ್ಯ 1,687 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಸಲಿದೆ.

 

ಅಲ್-ನಾಸ್ರ್ ಸೌದಿ ಅರೇಬಿಯಾದ ಅತ್ಯಂತ ಯಶಸ್ವಿ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಒಂದಾಗಿದ್ದು ಹೀಗಾಗಿಯೇ ಕ್ರಿಸ್ಟಿಯಾನೊ ಕೂಡ ಹೊಸ ಕ್ಲಬ್​ನತ್ತ ಮುಖ ಮಾಡಲು ಆಸಕ್ತಿ ತೋರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಡೀಲ್ ಯಶಸ್ವಿಯಾದರೆ ಕ್ರಿಸ್ಟಿಯಾನೊ ನಾಲ್ಕನೇ ಕ್ಲಬ್ ಪರ ಆಡಿದಂತಾಗುತ್ತದೆ. ಇನ್ನು ಈ ಹಿಂದೆ ಪೋರ್ಚುಗಲ್​ನ ಸ್ಪೋರ್ಟಿಂಗ್​ ಕ್ಲಬ್​ ಪರ ಕಣಕ್ಕಿಳಿಯುವ ಮೂಲಕ ಫುಟ್​ಬಾಲ್ ಕೆರಿಯರ್ ಆರಂಭಿಸಿದ್ದ ಕ್ರಿಸ್ಟಿಯಾನೊ ರವರು ಆ ಬಳಿಕ ಮ್ಯಾಂಚೆಸ್ಟರ್​ ಯುನೈಟೆಡ್ ಜೆರ್ಸಿಯಲ್ಲಿ ಮಿಂಚಿದ್ದರು.

 

ಇದಾದ ಬಳಿಕ ಸ್ಪೇನ್​ನ ರಿಯಲ್​ ಮ್ಯಾಡ್ರಿಡ್​ನತ್ತ ಮುಖ ಮಾಡಿದ್ದ ರೊನಾಲ್ಡೊ ಹಲವು ದಾಖಲೆಗಳನ್ನು ನಿರ್ಮಿಸಿದ್ದು ಅಲ್ಲಿಂದ ಇಟಲಿಯ ಯುವೆಂಟಸ್ ಪರ ಆಡಿದ್ದ ರೊನಾಲ್ಡೊ ಕಳೆದ ವರ್ಷವಷ್ಟೇ ಮ್ಯಾಂಚೆಸ್ಟರ್​ ಯುನೈಟೆಡ್​ ಕ್ಲಬ್​ಗೆ ಮರಳಿದ್ದರು.

ಆದರೆ ಹಳೆಯ ಕ್ಲಬ್ ಪರ ಕಾಣಿಸಿಕೊಂಡರೂ ರೊನಾಲ್ಡೊ ಅವರಿಗೆ ಆಡಲು ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಹೌದು ಅದರಲ್ಲೂ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜರ್ ಟೆನ್ ಹಾಗ್ – ರೊನಾಲ್ಡೊ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಈ ಬಗ್ಗೆ ಪೋರ್ಚುಗಲ್ ಆಟಗಾರ ಬಹಿರಂಗ ಹೇಳಿಕೆಗಳನ್ನು ನೀಡಿ ಆಕ್ರೋಶ ಹೊರಹಾಕಿದ್ದರು.

ಇವೆಲ್ಲದರ ನಡುವೆ ಫುಟ್​ಬಾಲ್​ ಅಂಗಳದ ಆಕ್ರಮಣಕಾರಿ ಆಟಗಾರ ಎಂದೇ ಗುರುತಿಸಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅಲಿಯಾಸ್ ಸಿಎಸ್​​7 ಅವರನ್ನು ಸೌದಿ ಅರೇಬಿಯಾ ಕ್ಲಬ್ 1,687 ಕೋಟಿ ರೂ. ನೀಡಿ ಖರೀದಿಸಲು ಮುಂದಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.  ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು ರೋನಾಲ್ಡ್ ರವರನ್ನು ರೋಬೋ ಎಂದು ಯಾಕೆ ಕರೆಯುತ್ತಾರೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.