ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರವರು ಸೂಪರ್ ಹಿಟ್ ಕಾಂತಾರ ಸಿನಿಮಾ ನೋಡಿದ್ದು ಕನ್ನಡದ ಕಾಂತಾರ ಚಿತ್ರ ವೀಕ್ಷಿಸಿ ತುಂಬಾ ಖುಷಿಪಟ್ಟಿದ್ದಾರೆ.
ಹೌದು ಕಾಂತಾರ ನನಗೆ ತುಂಬಾ ಖುಷಿ ತಂದಿದ್ದು ಈಗ ಇನ್ನೂ ಒಂದು ಹೆಜ್ಜೆ ಮುಂದೇ ಹೋದ ಸೂಪರ್ ಸ್ಟಾರ್ ರಜನಿಕಾಂತ್ ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನ ತಮ್ಮ ಬಳಿಗೆ ಕರೆಸಿಕೊಂಡಿದ್ದಾರೆ.ಹೌದು ಸುಮಾರು ಹೊತ್ತು ಮನಬಿಚ್ಚಿ ಮಾತನಾಡಿದ್ದು ಸಿನಿಮಾದ ಬಗೆಗಿನ ತಮ್ಮ ಅಭಿಪ್ರಾಯವನ್ನ ಮತ್ತೊಮ್ಮೆ ಹಂಚಿಕೊಂಡಿದ್ದಾರೆ.
ಇನ್ನು ಆ ಕ್ಷಣ ನಿಜಕ್ಕೂ ರಿಷಬ್ ಶೆಟ್ಟಿಗೆ ಗ್ರೇಟ್ ಫೀಲಿಂಗ್ ಕೊಟ್ಟಿದ್ದು ಸೂಪರ್ ಸ್ಟಾರ್ ಆದರೂ ಕೂಡ ಯೋಗಿ ರೀತಿನೇ ಬದುಕುತ್ತಿರೋ ರಜನಿಕಾಂತ್ ರವರಿಂದ ರಿಷಬ್ ಶೆಟ್ಟಿ ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ. ಹೌದು ಕಾಲಿಗೆ ಬಿದ್ದು ರಜಿನಿಗೆ ಗೌರವ ಕೂಡ ಸಲ್ಲಿಸಿದ್ದು ಈಗ ಇದುವೇ ಟಾಕ್ ಆಫ್ ದಿ ಟೌನ್ ಆಗಿದೆ ಎನ್ನಬಹುದು.
ಸದ್ಯ ಕಾಂತಾರ ಸಿನಿಮಾ ನಿಜಕ್ಕೂ ರಿಷಬ್ ಶೆಟ್ಟಿಯವರ ಜೀವನದ ಹಾದಿಯನ್ನೇ ಬದಲಿಸಿದೆ ಎನ್ನಬಹುದಾಗಿದ್ದು ಒಂದೇ ಒಂದು ಸಿನಿಮಾ ಇಡೀ ದೇಶ-ವಿದೇಶಕ್ಕೆ ರಿಷಬ್ ಶೆಟ್ಟಿಯನ್ನ ಪರಿಚಯಸಿ ಬಿಟ್ಟಿದೆ. ಇದೀಗ ಕಾಂತಾರ ಸಿನೆಮಾದಲ್ಲಿ ತೋರಿಸುವ ರೀತಿಯೇ ದೈವ ನರ್ತನದ ವಿಡಿಯೋ ಇಲ್ಲಿದೆ.