ವಾರ್ತಾ ಮಂಜರಿ
Trending Stories, Viral News, Gossips & Everything in Kannada

ವಿಚಿತ್ರ ಡಾನ್ಸ್ ಮಾಡುತ್ತಿರುವ ರಚಿತಾರಾಮ್…ಚಿಂದಿ ವಿಡಿಯೋ

4,337

ಕನ್ನಡ ಚಿತ್ರರಂಗದ  ಡಿಂಪಲ್ ಕ್ವೀನ್ ರಚಿತಾ ರಾಮ್ ಬುಲ್ ಬುಲ್ ಚಿತ್ರದ ಮೂಲಕ ಸಿನಿಮಾ ಜರ್ನಿ ಆರಂಭಿಸಿ ಈಗ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೌದು ಪ್ರಮುಖ ಪಾತ್ರಗಳಲ್ಲಿ ಮಾತ್ರವಲ್ಲದೆ ಗೆಸ್ಟ್‌ ರೂಲ್‌ಗಳಲ್ಲೂ ಕಾಣಿಸಿಕೊಂಡಿದ್ದು  ಸೆಪ್ಟೆಂಬರ್ 22ಕ್ಕೆ ಸಿನಿ ಜರ್ನಿ ಶುರು ಮಾಡಿ 10 ಪೂರೈಸಿದ್ದಾರೆ.

 

ಹೌದಯ ಈ ಕ್ಷಣವನ್ನು ಸಂಭ್ರಮಿಸಬೇಕು ಎಂದು ಸೂಪರ್ ಕ್ವೀನ್‌ ತಂಡ ಸರ್ಪ್ರೈಸ್ ಕೊಟ್ಟಿದ್ದು ಜೀ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋಗೆ ವಿಜಯ್ ರಾಘವೇಂದ್ರ ಜೊತೆ ರಚ್ಚು ತೀರ್ಪುಗಾರರಾಗಿದ್ದಾರೆ. ಹೌದು ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್ ನಿರೂಪಣೆ ಮಾಡುತ್ತಿದ್ದಾರೆ.

 

ಕಿರುತೆರೆಯಲ್ಲಿ ನನ್ನ 10 ವರ್ಷಗಳ ಸಿನಿಮಾ ಜರ್ನಿಯನ್ನು ಆಚರಿಸಿಕೊಂಡ ಖುಷಿ ಇದ್ದು ತೀರ್ಪುಗಾರರ ಸ್ಥಾನದಲ್ಲಿ ಕುಳಿತುಕೊಂಡು ಸ್ಪರ್ಧಿಗಳನ್ನು ನೋಡಿದಾಗ ನಾನು ಖುಷಿಯಿಂದ ರಿಯಾಕ್ಟ್‌ ಮಾಡುತ್ತೀನಿ. ನನ್ನ ವೃತ್ತಿ ಜೀವನ ಆರಂಭಿಸಿದ್ದು ಜೀ ಕನ್ನಡ ವಾಹಿನಿ ಮೂಲಕ ಅರಸಿ ಎಂಬ ಹೆಸರಿನ ಧಾರಾವಾಹಿ ಅದರಲ್ಲಿ ನಾನು ವಿಲನ್ ಪಾತ್ರ ಮಾಡ್ತೀನಿ ಆ ಜರ್ನಿ ನನ್ನ ಸೂಪರ್ ಜರ್ನಿ.

 

ಜೊತೆ ಈ ಪಾಪ್ಯೂಲಾರಿಟಿ ಹೇಗೆ ಅಂದರೆ ಒಂದು ಸಲ ಅದರ ರುಚಿ ಬಂದ್ರೆ ಅದರಲ್ಲೂ ಮೇಕಪ್ ರುಚಿ ಬಂದ್ರೆ ಅದನ್ನು ಬಿಡುವುದಕ್ಕೆ ಅಗೋಲ್ಲ ಕ್ಯಾಮೆರಾ ಮುಂದೆ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಇದು ಗೊತ್ತಿರುತ್ತದೆ. ಹೌದು ಇವತ್ತು ಕೂಡ ವಾಹಿನಿಯಿಂದ ಕರೆ ಬಂದರೆ ಮೊದಲು ಒಪ್ಪಿಕೊಳ್ಳುತ್ತೀನಿ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

 

ತೂಗುದೀಪ ನಿರ್ಮಾಣ ಸಂಸ್ಥೆಯಲ್ಲಿ ವೃತ್ತಿ ಜೀವನ ಶುರುವಾಗಿದ್ದು ನನ್ನನ್ನು ಲಾಂಚ್ ಮಾಡಿದ್ದು ತೂಗುದೀಪ. ಬುಲ್ ಬುಲ್ ಸಿನಿಮಾ ಮೂಲಕ ಜರ್ನಿ ಶುರು ಮಾಡಿದೆ ಈ 10 ವರ್ಷ ತುಂಬಾ ಚೆನ್ನಾಗಿತ್ತು ಆದರೆ ಅಷ್ಟು ಸುಲಭವಾಗಿ ಇರಲಿಲ್ಲ ಅದನ್ನು ನಾನು ಅನುಭವಿಸಿದ್ದೀನಿ. ಜೀವನದಲ್ಲಿ ಮಾತ್ರವಲ್ಲ ವೃತ್ತಿ ಜೀವನದಲ್ಲೂ ಕೂಡ ಅಪ್ಸ್‌ ಆಂಡ್ ಡೌನ್ಸ್‌ ಇರುತ್ತೆ ಬಂದ ಕೂಡಲೇ ಎಲ್ಲಾ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಕೆಲಸ ಮಾಡಿದೆ ದೊಡ್ಡ ತಂತ್ರಜ್ಞರ ಸಿನಿಮಾದಲ್ಲಿದ್ದರು ಒಳ್ಳೆ ಬ್ಯಾನರ್‌ಗಳು ಅವಕಾಶ ಕೊಟ್ಟರು.

 

ಆದರೆ ಮಾತ್ರ ಕೆಲವೊ ಸಿನಿಮಾ ಹಿಟ್ ಆಯ್ತು ಕೆಲಸ ಸಿನಿಮಾ ಫ್ಲಾಪ್ ಆಯ್ತು ಇದು ಎಲ್ಲರೂ ಎದುರಿಸಿರುತ್ತಾರೆ ಅದರೆ ಇದು ವಂಡರ್‌ಫುಲ್‌ ಜರ್ನಿ ಆಗಿತ್ತು. ಹಿಟೋ ಫ್ಲಾಪೋ ಪಾಸಿಟಿವೋ ನೆಗೆಟಿವೋ ಒಟ್ಟಾರೆ ಸುದ್ದಿಯಲ್ಲಿ ಇರುತ್ತೀನಿ ಏನೇ ಆದರೂ ಜನರು ಮಾತನಾಡುತ್ತಾರೆ. ಇನ್ನು ಅದೆಲ್ಲಾ ಬಿಡಿ ಟಿವಿ ಅವರು ನನ್ನನ್ನು ಕರೆದು ಕೂರಿಸುತ್ತಾರೆ ಅಲ್ವಾ ಅಷ್ಟು ಸಾಕು. ಇಷ್ಟು ವರ್ಷ ನನಗೆ ಸಪೋರ್ಟ್ ಮಾಡಿದ ಕನ್ನಡಿಗನಿಗೆ ನಾನು ಕೆಲಸ ಮಾಡಿದ ಪ್ರತಿಯೊಬ್ಬ ಹೀರೋ ಅಭಿಮಾನಿಗೆ ನನ್ನ ದೊಡ್ಡು ನಮಸ್ಕಾರ ಮತ್ತು ಸಲ್ಯೂಟ್ ಎಂದು ಹೇಳಿದ್ದಾರೆ.

 

ಸದ್ಯ ಚಿತ್ರಬಿಡುಗಡೆಗೂ ಒಂದು ತಿಂಗಳ ಮುಂಚೆಯೇ ದರ್ಶನ್ ಮತ್ತು ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ತಿಂಡವು ಪೂರ್ಣ ಪ್ರಮಾಣದ ಪ್ರಚಾರವನ್ನು ಆರಂಭಿಸಿದ್ದು  ಜನವರಿ 26 ರಂದು ಸಿನಿಮಾ ತೆರೆಕಾಣಲಿದೆ. ಚಿತ್ರವು ಐದು ಹಾಡುಗಳನ್ನು ಒಳಗೊಂಡಿದ್ದು ಒಂದು ವಾರದ ಹಿಂದೆ ಮೈಸೂರಿನಲ್ಲಿ ಮೊದಲ ಹಾಡು ಧರಣಿ ಬಿಡುಗಡೆಯಾಯಿತು. ಅದರಂತೆ ಚಿತ್ರತಂಡ ಹೊಸಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎರಡನೇ ಹಾಡಾದ ಬೊಂಬೆ ಬೊಂಬೆ ಯನ್ನು ಬಿಡುಗಡೆ ಮಾಡಿದೆ. ಅನೇಕ ಭಾಷೆಗಳಲ್ಲಿ ಲಿರಿಕಲ್ ವಿಡಿಯೋವನ್ನು DBeats ಮ್ಯೂಸಿಕ್ ಲೇಬಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

 

ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಯೋಗರಾಜ್ ಭಟ್ ಅವರ ಸಾಹಿತ್ಯ ಸೋನು ನಿಗಮ್ ಹಾಡಿರುವ ಮತ್ತು ಭೂಷಣ್ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಹಾಡು ಕೇಳುಗರ ಗಮನ ಸೆಳೆದಿದೆ. ದರ್ಶನ್ ಮತ್ತು ರಚಿತಾ ರಾಮ್ ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿಯನ್ನು ಒಳಗೊಂಡಿರುವ ಈ ಹಾಡು ಬಿಡುಗಡೆಯಾದಾಗಿನಿಂದ ಟ್ರೆಂಡಿಂಗ್ ಆಗಿದೆ.

 

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗನಲ್ಲಿರುವ ರಚಿತಾ ಅನೇಕ ಪೋಸ್ಟ್ ಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇನ್ನು ವಿಶೇಷ ಡಬ್ ಸ್ಮಾಷ್ ಮಾಡುವ ಮೂಲಕ ಕೂಡ ಎಲ್ಲರನ್ನು ಸೆಳೆಯುವ ರಚ್ಚು ಪಡ್ಡೆ ಹುಡುಗರ ಹಾಟ್ ಫೇವರಿಟ್. ಕೆಳಗಿನ ವಿಡಿಯೋದಲ್ಲಿ ರಚಿತಾರಾಮ್ ರವರ   ಬ್ಯೂಟಿಫುಲ್ ಡಬ್ ಸ್ಮಾಶ್ ನೋಡಬಹುದು.