ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸತ್ತಂತೆ ನಟಿಸಿದ ಹೆಲಿಕಾಪ್ಟರ್ ಚಾಲಕ…ನೋಡಿ ವಿಡಿಯೋ

5,737

ಈ ನೀಲಿ ಬಣ್ಣದ ಆಕಾಶದಲ್ಲಿ ಬಗೆಬಗೆಯ ಬಣ್ಣ ಬಣ್ಣದ ಪಕ್ಷಿಗಳ ಹಾರಾಟ ಚಿಲಿಪಿಲಿ ಎಲ್ಲವನ್ನೂ ನೋಡುವುದೇ ಒಂದು ರೀತಿಯ ಆನಂದ ಎನ್ನಬಹುದು. ಹಕ್ಕಿಗಳ ಗುಂಪು ಆಕಾಶದೆತ್ತರಕ್ಕೆ ಹಾರಿದರೆ ಅದರ ಸಂಭ್ರಮ ಸಡಗರ ನೋಡುವುದೇ ಮನುಷ್ಯನಿಗೆ ಒಂದು ರೀತಿಯ ಮನಸ್ಸಿಗೆ ನೆಮ್ಮದಿ ತರುತ್ತದೆ. ಹೌದು ಅದೆಷ್ಟೋ ಜನ ಸಂಜೆ ಸಮಯದಲ್ಲಿ ಹಕ್ಕಿಯ ಹಾರಾಟ ಹಾಗೂ ಚಿಲಿಪಿಲಿ ನೋಡಲು ಅರಣ್ಯದತ್ತ ಅಥವಾ ಕೆರೆ ನದಿಗಳ ಕಡೆ ಹೋಗುತ್ತಾರೆ. ಇನ್ನು ಪ್ರತಿಯೊಬ್ಬರಿಗೂ ಕೂಡ ಪಕ್ಷಿಗಳಂತೆ ಸ್ವತಂತ್ರವಾಗಿ ಹಾರಾಡಬೇಕು ಎಂಬ ಆಸೆ ಇರುತ್ತದೆ.

ಇನ್ನು ಈ ಆಸೆಯನ್ನು ಈಡೇರಿಸಿಕೊಳ್ಳಲು ಸಾಕಷ್ಟು ಮಂದಿ ವಿಮಾನದಲ್ಲಿ ಪ್ರಯಾಣ ಮಾಡುತ್ತಾರೆ. ಮೋಡಗಳ ಮಧ್ಯೆ ವಿಮಾನದಲ್ಲಿ ಚಲಿಸುತ್ತಿದ್ದರೆ ಸ್ವರ್ಗಕ್ಕೆ ಒಂದೇ ಗೇಣು ಎಂದೆನಿಸುವುದು ದಂತೂ ಸತ್ಯ. ಅದೆಷ್ಟೋ ಜನರಿಗೆ ವಿಮಾನ ಪ್ರಯಾಣದ ಕನಸು ಕನಸಾಗಿಯೇ ಉಳಿದಿದೆ. ಇದಕ್ಕೆ ಕಾರಣ ವಿಮಾನದಲ್ಲಿ ಪ್ರಯಾಣಿಸಲು ಹಣ ಹೆಚ್ಚಾಗಿ ಬೇಕಾಗುತ್ತದೆ. ಹೀಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಾ ಸಂತಸ ಹುಡುಕುವವರಿಗೆ ವಿಮಾನ ಅಪಘಾತ ವಾಗುತ್ತಿದೆ ವಿಮಾನ ಚಲಾಯಿಸುವ ಪೈಲೆಟ್ ಇದ್ದಕ್ಕಿದ್ದ ಹಾಗೆ ಮೂರ್ಛೆ ತಪ್ಪಿ ಮಲಗಿಕೊಂಡಿದ್ದಾರೆ ಎಂದರೆ ಆ ಕ್ಷಣ ಅವರಿಗೆ ಏನಾಗಬೇಕು ಹೇಳಿ ? ಇನ್ನು ಸ್ವರ್ಗ ಹುಡುಕುತ್ತಾ ವಿಮಾನಕ್ಕೆ ಹೋದವರಿಗೆ ಕಣ್ಣೆದುರಲ್ಲೇಯೇ ನರಕ ಕಾಣುವುದಂತು ಸತ್ಯ.

ಸದ್ಯ ಈ ರೀತಿಯ ಘಟನೆ ನಡೆದಿದ್ದು ದಂಪತಿಗಳಿಬ್ಬರು ಪ್ರಕೃತಿ ಸವಿಯಲು ಹೆಲಿಕ್ಯಾಪ್ಟರ್ ನಲ್ಲಿ ಹಾರಿದ್ದು ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಪೈಲೆಟ್ ಮೂರ್ಛೆ ತಪ್ಪಿ ಕಣ್ಣುಮುಚ್ಚುತ್ತಾರೆ. ಇದರಿಂದ ಭಯಭೀತರಾದ ಆ ದಂಪತಿಗಳು ಎಷ್ಟೇ ಕೂಗಿದರೂ ಕೂಡ ಫೈಲೇಟ್ ಮೇಲಕ್ಕೆ ಹೇಳುವುದೇ ಇಲ್ಲ. ಮೂರ್ಚೆ ಹೋಗಿರುವ ಹಾಗೇ ನಿದ್ದೆ ಮಾಡಿ ಕಣ್ಣನ್ನು ತೆರೆಯುವುದೇ ಇಲ್ಲ. ಈ ಸಮಯದಲ್ಲಿ ಏನು ಮಾಡಬೇಕು ಎಂದು ತೋಚದ ಆ ಮಹಿಳೆ ಜೋರಾಗಿ ಅರಚಿದ್ದು, ಇತ್ತ ಆತನ ಪ್ರಿಯತಮ ಕೂಡಾ ಪೈಲೆಟ್ ಅವರನ್ನು ಎಬ್ಬಿಸಲು ನಾನಾ ರೀತಿಯಲ್ಲಿ ಪ್ರಯತ್ನಿಸಿದ್ದಾನೆ. ಮಹಿಳೆ ಮಾತ್ರ ಜೀವವೇ ಬಾಯಿಗೆ ಬಂದಂತೆ ಮಕ್ಕಳಂತೆ ಜೋರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದು, ನಂತರ ಪೈಲೆಟ್ ಕಣ್ಣು ಬಿಟ್ಟು ಅವರಿಬ್ಬರನ್ನು ನೋಡಿ ನಕ್ಕಿದ್ದಾರೆ.

ಹೌದು ಇದು ವಿಮಾನದ ಪ್ರ್ಯಾಂಕ್.
ಸಾಮಾನ್ಯವಾಗಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫ್ರಾಂಕ್ ಗಳು ಮಾಡುವ ಟ್ರೆಂಡ್ ಪ್ರಾರಂಭವಾಗಿದೆ. ಕೆಲವರು ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರಿಗೆ ಹೆದರಿಸುವ ಫ್ರಾಂಕ್ ಮಾಡಿದರೆಬಇನ್ನೂ ಕೆಲವರು ಫೇಕ್ ಹುಲಿಗಳನ್ನು ತಂದು ನಾಯಿಗಳಿಗೂ ಕೂಡ ಹೆದರಿಸಿದ್ದಾರೆ. ಆದರೆ ಇಲ್ಲಿನ ಪೈಲೆಟ್ ಒಂದು ಹೆಜ್ಜೆ ಮುಂದೆ ಹೋಗಿದ್ದು ವಿಮಾನ ಚಲಾಯಿಸುತ್ತಾ ಸತ್ತುಹೋಗಿರುವ ರೀತಿಯಲ್ಲಿ ನಟನೆ ಮಾಡಿ ಇಬ್ಬರಿಗೂ ಪ್ರಾಣ ಬಾಯಿಗೆ ಬರುವಂತೆ ನಿರ್ಧರಿಸಿದ್ದಾರೆ. ಒಮ್ಮೆ ಈ ವಿಡಿಯೋ ನೋಡಿ ನೀವು ನಕ್ಕು ನಲಿಯುವುದಂತು ಖಚಿತ.