ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಕ್ಕಳು ಸಾಲು ಮರದ ತಿಮ್ಮಕ್ಕನ ಮನೆಗೆ ಬಂದ ಅಮೂಲ್ಯ..ಚಿಂದಿ ವಿಡಿಯೋ

567

ಕನ್ನಡ ಚಿತ್ರರಂಗದ ಗೋಲ್ಡನ್ ಕ್ವೀನ್ ಅಮೂಲ್ಯ ರವರ ಮನೆಗೆ ಪಧ್ಮಶ್ರೀ ವಿಜೇತೆ ಸಾಲುಮರದ ತಿಮ್ಮಕ್ಕ ಆಗಮಿಸಿದ್ದು ಸದ್ಯ ಈ ಕುರಿತು ಅಮೂಲ್ಯ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಪಧ್ಮಶ್ರೀ ವಿಜೇತೆ ಸಾವಿರಾರು ಮರ ಪೋಷಿಸಿದ ಶತಾಯುಷಿ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರು ನಮ್ಮ ಸ್ವಗೃಹಕ್ಕೆ ಭೇಟಿ ನೀಡಿ ನಮ್ಮ ಮಕ್ಕಳಿಗೆ ಹರಸಿ ಹಾರೈಸಿದ ಕ್ಷಣ.

ಸಾಲುಮರದ ತಿಮಕ್ಕರವರ ಬದುಕಿನ ಹಾದಿ ನಮಗೆಲ್ಲಾ ಮಾದರಿ. ಅವರ ಪರಿಸತ ಕಾಳಜಿ ಸದಾ ನಮಗೆಲ್ಲರಿಗೂ ಪ್ರೇರಣೆ. ಇಂತಹ ಮಹಾನ್ ತಾಯಿ ನಮ್ಮ ಮನೆಗೆ ಭೇಟಿ ನೀಡಿ ನಮ್ಮ ಮಕ್ಕಳಿಗೆ ಆಶೀರ್ವಾದಿಸಿದ್ದು ಅತ್ಯಂತ ಸಂತಸವೆನಿಸಿತು ಎಂದು ಬರೆದುಕೊಂಡುದ್ದಾರೆ ನಟಿ ಅಮೂಲ್ಯ. ಸದ್ಯ ಅಮೂಲ್ಯ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿವೆ.

ಇನ್ನು ಮಕ್ಕಳಿಲ್ಲವೆಂಬುದು ಕೊರತೆಯ ಕಾರಣವಾಗದೆ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ಈಕೆ ಓರ್ವ ಅನಕ್ಷರಸ್ಥೆ. ಪರಿಸರ ಸಂರಕ್ಷಣೆಯೇ ನನ್ನ ಬದುಕಿನ ದಾರಿಯಾಗಿದ್ದು ಆ ದಾರಿಯ ಅರಸಿ ಬರುವ ನಾವಿಕರಿಗೆ ನನ್ನ ಮರಗಳು ಮಂದಹಾಸದ ನಗೆಯೊಂದಿಗೆ ತಂಪನು ಉಣಿಸುತ್ತವೆ.

ಮಾಲಿನ್ಯರಹಿತ ಮನುಷ್ಯ ನಿರ್ಮಿತ ನೈದಿಲೆಯಂತಹ ಸೊಗಸಾದ ಸಾವಿರ ಸಾಲುಗಳ ಪಯಣಕ್ಕೆ ತಿಮ್ಮಕ್ಕನ ಮರಗಳ ನೆರೆಳೇ ನವೀನ.ಪರಿಸರವೇ ಜೀವನವೆಂದು ಬದುಕುವ ಪರಿಯೇ ನಿರ್ಮಲ. ಸ್ವತ್ಛ ಗಾಳಿ ತಂಪಾದ ನೆರಳಿನ ವಾತಾವರಣ ಇವೆಲ್ಲದಕ್ಕೂ ಮಿಗಿಲಾಗಿ ಪರಿಸರವನ್ನು ಪಾಲಿಸಿ-ಪೋಷಿಸಿ ತನುಮನದಿ ಸಾವಿರ ಸಾಲುಗಳ ಗಿಡಗಳ ತಾಯಾಗಿ ವೃಕ್ಷಗಳ ಹೆಮ್ಮೆಯ ನಾಯಕಿಯಾಗಿ ಬದುಕೇ ಹಸುರಿನ ಹೊದಿಕೆಯಾಗಿ ನಾಗರಿಕ ಸಮಾಜದ ಮಾದರಿಯಾಗಿ ಎಲೆಮರೆಯ ಕಾಯಿಯಿಂದ ಹೆಮ್ಮರವಾಗಿ ಬೆಳೆದು ಬಂದ ಈ ಮಾತೆಯೇ ಸಾಲುಮರದ ತಿಮ್ಮಕ್ಕ. ಸಾವಿರ ಮುತ್ತುಗಳ ಒಡತಿ ಎನ್ನಬಹುದು.

ತಿಮ್ಮಕ್ಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ್ದು ಶಿಕ್ಷಣದ ಗಂಧವೇ ತಿಳಿಯದ ಇವರು ಹೊಟ್ಟೆ ಬಟ್ಟೆಗಾಗಿ ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ತಮ್ಮ ದಿನಗಳನ್ನು ಕಳೆದರು. ಸಂದರ್ಭಗಳ ಅಲೆಯಲ್ಲಿ ಪ್ರೀತಿಯ ಚಿಲುಮೆಗೆ ಸಾಕ್ಷಿಯಾಗಿ ಚಿಕ್ಕಯ್ಯ ಎಂಬ ಒಬ್ಬ ದನಕಾಯುವವರನ್ನು ಮದುವೆಯಾಗಿದ್ದು ವರ್ಷಗಳು ಉರುಳಿದರೂ ಮಕ್ಕಳಾಗಲಿಲ್ಲ. ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ಮೊದಲಿಗೆ ಆಲದ ಮರಗಳನ್ನು ನೆಡುವ ಮೂಲಕವಾಗಿ ತಮ್ಮ ಜೀವನದಲ್ಲಿ ಖುಷಿಯನ್ನು ಹುಡುಕಲು ಆರಂಭಿಸಿದರು.

ಇನ್ನು ಆಲದ ಮರಗಳ ಸಾಲೇ ತಿಮ್ಮಕ್ಕರವರ ಪರಿಸರದ ಸುತ್ತಮುತ್ತ ವಿಜೃಂಭಿಸುತ್ತಿದ್ದು ಪ್ರತಿಯೊಬ್ಬರಿಗೂ ಪ್ರತೀ ವಿಷಯವೂ ಕಾಮನಬಿಲ್ಲಿನ ಬಣ್ಣದ ಹಾಗೇ ಕಾಣುವ ರೀತಿಯೇ ಬೇರೆ. ತಿಮ್ಮಕ್ಕ ಮತ್ತು ಅವರ ಪತಿಯ ಕಣ್ಣುಗಳು ವಿಶಾಲ ಹೃದಯವೇ ಈ ಬದಲಾವಣೆಗೆ ಕಾರಣವೂ ಹೌದು. ಮೊದಲಿಗೆ ಮರಗಳಿಂದ ಸಸಿಗಳನ್ನು ಕಸಿಮಾಡಲು ಆರಂಭಿಸಿ ಮೊದಲ ವರ್ಷದಲ್ಲಿ ಹತ್ತು ಸಸಿಗಳನ್ನು ನೆರೆಯ ಕುದೂರು ಹಳ್ಳಿಯ ಬಳಿ 4 ಕಿ.ಮೀ. ಉದ್ದಳತೆಯ ದೂರದಲ್ಲಿ ನೆಡಲಾಯಿತು.

ಹೀಗೆಯೇ ಎರಡನೇ ವರ್ಷ ಹದಿನೈದು ಮತ್ತು ಮೂರನೇ ವರ್ಷ 20 ಸಸಿಗಳನ್ನು ನೆಡಲಾಯಿತು. ಇನ್ನು ಕುದೂರಿನಿಂದ ಹುಲಿಕಲ್‌ ತನಕವಿರುವ ರಾಜ್ಯ ಹೆದ್ದಾರಿಯಲ್ಲಿ ಒಮ್ಮೆ ಹಾದುಹೋದರೆ ನಮಗೆ ಕಾಣಸಿಗುವುದೇ ತಿಮ್ಮಕ್ಕರವರು ಬೆಳಸಿದ ಆಲದ ಮರಗಳು. ಹೌದು ಅವರ ಪೋಷಣೆಯಲ್ಲಿ ಹಸನ್ಮುಖೀಗಳಾಗಿ ಬೆಳೆದ ಹಸಿರು ಶಾಲಿನ ಮುಗಿಲು ಮುಟ್ಟುವ ಅಂಬರ ಸ್ನೇಹಿ ಮಕ್ಕಳು.