ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗ ಮತ್ತು ದೇಶದ ಚಿತ್ರರಂಗ ಖ್ಯಾತ ನಟ. ಹಳವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ದೇಶದ ಟಾಪ್ ನಟ ಅನ್ನುವ ಹೆಗ್ಗಳಿಕೆಯನ್ನ ಪಡೆದುಕೊಂಡಿದ್ದಾರೆ. ಕೆಜಿಎಫ್ ಚಿತ್ರದ ನಂತರ ನಟ ಯಶ್ ಅವರ ಜೀವನವೇ ಬದಲಾಯಿತು ಎಂದು ಹೇಳಬಹುದು. ಸದ್ಯ ಮುಂದಿನ ಚಿತ್ರದ ತಯಾರಿಯಲ್ಲಿ ನಟ ಯಶ್ ಇದ್ದು ಅವರ ಮುಂದಿನ ಚಿತ್ರ ಯಾವುದು ಅನ್ನುವ ಕುತೂಹಲದಲ್ಲಿ ಜನರು ಇದ್ದಾರೆ.
ಹೊಸ ಹೊಸ ಪ್ರಾಜೆಕ್ಟ್ಗಳತ್ತಲೂ ಗಮನ ಹರಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ -2 ಬಳಿಕ ತಮ್ಮ ಕುಟುಂಬದೊಂದಿಗೆ ಆತ್ಮೀಯವಾದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಅದೇ ರೀತಿ ತಂಗಿಯನ್ನು ಅತ್ಯಂತ ಪ್ರೀತಿ ಹಾಗೂ ಆತ್ಮೀಯವಾಗಿ ನೋಡಿಕೊಳ್ಳುತ್ತಾರೆ. ನಂದಿನಿ ಅವರಿಗೂ ಅಣ್ಣ ಯಶ್ ಎಂದರೆ ಅಷ್ಟೇ ಆತ್ಮೀಯ ಅದಕ್ಕಾಗಿ ಪ್ರತಿ ವರ್ಷ ಅಣ್ಣನ ಬಗ್ಗೆ ಹಲವು ಫೋಟೋ ಅಪ್ಲೋಡ್ ಮಾಡುತ್ತಿದ್ದು ತುಂಬಾ ಫೇಮಸ್ ಆಗಿದೆ.
ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಬಾಲ್ಯದಲ್ಲಿ ತುಂಟಾಟಕ್ಕೆ ಜೋಡಿಯಾಗಿದ್ದ ಮುದ್ದಿನ ತಂಗಿ ನಂದಿನಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು. ಇತ್ತೀಚಿಗೆ ರಾಕಿಂಗ್ ಸ್ಟಾರ್ ದಂಪತಿ ವಿದೇಶ ಪಯಣ ಮಾಡಿ ಬಂದಿದ್ದಾರೆ. ಪ್ರವಾಸದಲ್ಲಿನ ಸುಂದರ ಕ್ಷಣಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇಟಲಿಯಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ತಮ್ಮ ಅಭಿಮಾನಿಗಳು ಭೇಟಿಯಾದ ಫೋಟೋವೊಂದನ್ನು ಶೇರ್ ಮಾಡಿಕೊಂಡು ಇದು ಬಹಳ ವಿಶೇಷವಾದದ್ದು ಎಂದು ಹೇಳಿಕೊಂಡಿದ್ದರು. ನಟ ಯಶ್ಗೆ ರಾಖಿ ಹಬ್ಬ ತುಂಬ ಸ್ಪೇಷಲ್. ತಂಗಿ ನಂದಿನಿ ಕಡೆಯಿಂದ ಪ್ರತಿ ವರ್ಷ ತಪ್ಪದೆ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸುತ್ತಾರೆ ಯಶ್. ಅದು ಈ ಸಲವೂ ಮುಂದುವರಿದಿದೆ. ಹಾಗೆ ರಾಖಿ ಕಟ್ಟಿಸಿಕೊಂಡ ಕೆಲವು ಫೋಟೋಗಳನ್ನು ಯಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ನಂದಿನಿ ಈಗ ಎರಡು ಮಕ್ಕಳ ತಾಯಿ. ನಂದಿನಿ ಕಂಡರೆ ಯಶ್ಗೆ ತುಂಬ ಇಷ್ಟ. ಕನಸಿನಂತೆ ತಂಗಿ ಮದುವೆಯನ್ನು ಯಶ್ ಅವರು ತುಂಬ ಜೋರಾಗಿ ಮಾಡಿದ್ದರು. ಪತಿ, ಮಕ್ಕಳ ಜೊತೆ ನಂದಿನಿ ಸದ್ಯ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ.ಒಡಹುಟ್ಟಿದವರು, ಜೀವಮಾನದಾದ್ಯಂತ ಪ್ರೀತಿ ಮತ್ತು ಬೆಂಬಲದಿಂದ ಜೊತೆಗಿದ್ದೇವೆ. ಎಂದು ಯಶ್ ಬರೆದುಕೊಂಡಿದ್ದರು.
ಯಶ್ ಅವರಿಗೆ ತಂಗಿ ನಂದಿನಿ ಅವರು ರಾಖಿ ಕಟ್ಟಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೆ ಅಲ್ಲದೆ ಯಶ್ ಜೊತೆ ಕಳೆದ ಸುಂದರ ಪೊಟೋಗಳು ಇಲ್ಲಿವೆ ಪ್ರತಿ ವರ್ಷ ಯಶ್ ಅವರು ತಮ್ಮ ತಂಗಿಯಿಂದ ರಾಖಿ ಕಟ್ಟಿಸಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ರಾಖಿ ಕಟ್ಟಿದ ತಂಗಿಗೆ ಅಣ್ಣ ಯಶ್ ಕೊಟ್ಟ ಉಡುಗೊರೆಯ ವಿಷಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಹೌದು ರಾಖಿ ಕಟ್ಟಿದ ತಂಗಿಗೆ ನಟ ಯಶ್ ಅವರು ದುಬಾರಿ ಉಡುಗೊರೆಯನ್ನ ನೀಡಿದ್ದಾರೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಯಶ್ ಅವರ ಮುಂದಿನ ಚಿತ್ರ ಯಾವುದೆನ್ನುವ ಕುತೂಹಲ ಹಾಗೆಯೇ ಉಳಿದಿದೆ. ಯಾವಾಗ ಮತ್ತು ಯಾರೊಂದಿಗೆ ರಾಕಿಂಗ್ ಸ್ಟಾರ್ ಮುಂದಿನ ಚಿತ್ರ ಮಾಡುತ್ತಾರೆ ಎನ್ನುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.