ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಾಲಿ ಇದ್ದಾಗ ರಮ್ಯಾ ಧರಿಸಿದ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ…ರೆಕಾರ್ಡ್ ಬ್ರೇಕ್

877

ಸದ್ಯ ಖ್ಯಾತ ನಿರ್ಮಾಪಕ ವಿಜಯ್ ಕಿರಗಂದೂರು ಅರ್ಪಿಸುತ್ತಿರುವ ಕೆ.ಆರ್.ಜಿ ಸಂಸ್ಥೆ ನಿರ್ಮಿಸುತ್ತಿರುವ ಹಾಗೂ ರೋಹಿತ್ ಪದಕಿ ರಚಿಸಿ ನಿರ್ದೇಶಿಸುತ್ತಿರುವ ಉತ್ತರಕಾಂಡ ಸಿನಿಮಾದ ಮುಹೂರ್ತ ನವೆಂಬರ್ 6ಕ್ಕೆ ಮಧ್ಯಾಹ್ನ 3.22ಕ್ಕೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ.

ರತ್ನನ್ ಪ್ರಪಂಚ ಯಶಸ್ಸಿನ ಬಳಿಕ ಮತ್ತೊಮ್ಮೆ ಒಂದಾಗಿದ್ದಾರೆ ರೋಹಿತ್ ಪದಕಿ ಹಾಗೂ ಕಾರ್ತಿಕ್ ಮತ್ತು ಯೋಗಿ.ಜಿ.ರಾಜ್. ಚಿತ್ರದ ಮುಖ್ಯ ಪಾತ್ರಧಾರಿಗಳಾದ ಧನಂಜಯ ಹಾಗು ರಮ್ಯಾ ಪೂಜೆಗೆ ಉಪಸ್ಥಿತರಿದ್ದರು.

ಸದ್ಯ ಸಿನಿರಸಿಕರಿಗೆ ಅಚ್ಚರಿ ಹಾಗೂ ಸಿಹಿ ಸುದ್ದಿಯೆಂದರೆ ಸ್ಯಾಂಡಲ್‌ವುಡ್ ಕ್ವೀನ್ ಎಂದು ಪ್ರೀತಿಪಾತ್ರರಾಗಿರೋ ನಟಿ ರಮ್ಯಾ ಉತ್ತರಕಾಂಡ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿಪರದೆಗೆ ಹಿಂತಿರುಗುತ್ತಿದ್ದು ಎಂಟು ವರ್ಷಗಳ ಬಳಿಕ ತಮಗೆ ಅತ್ಯಂತ ಆಪ್ತವಾದ ಕಥೆ ಹಾಗು ಪಾತ್ರ ಉತ್ತರಕಾಂಡ ಕೊಟ್ಟಿರುವ ಕಾರಣ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡು ಭಾಷೆ ಉಡುಗೆ-ತೊಡುಗೆ ಎಲ್ಲದರ ಮೇಲೆ ಗಂಭೀರವಾಗಿ ಕಸರತ್ತು ನಡೆಸುತ್ತಿದ್ದಾರೆ ನಟಿ ರಮ್ಯಾ.

ರತ್ನನ್ ಪ್ರಪಂಚ ಚಿತ್ರಕ್ಕೆ ನಾಯಕಿಯ ಪಾತ್ರವನ್ನು ನನಗೆ ಕೇಳಿದಾಗ ಕಾರಣಾಂತರಗಳಿಂದ ಅದನ್ನು ಒಪ್ಪಿಕೊಳ್ಳಲಾಗಿರಲಿಲ್ಲ. ನನಗೆ ಅತ್ಯಂತ ಆಪ್ತವಾದ ಸಿನಿಮಾ ರತ್ನನ್ ಪ್ರಪಂಚ. ಅಂತಹ ಒಳ್ಳೆಯ ಸಿನೆಮಾ ತಂಡದ ಜೊತೆ ಕೈ ಜೋಡಿಸಿ ಬೆಳ್ಳಿಪರದೆಗೆ ಹಿಂತಿರುಗುತ್ತಿರುವುದು ಸಂತೋಷ ತಂದಿದ್ದು ಇತ್ತೀಚಿನ ದಿನಗಳಲ್ಲಿ ಈ ತಂಡದ ಜೊತೆಗಿನ ಒಡನಾಟ ಮತ್ತು ತಂಡದವರೆಲ್ಲರು ನನ್ನ ಮೇಲೆ ತೋರುತ್ತಿರುವ ಅಭಿಮಾನ ಹಾಗು ಬಾಂಧವ್ಯ ಒಂದು ಒಳ್ಳೇ ಜಾಗದಲ್ಲಿದ್ದೀನಿ ಅನ್ನೋ ಭಾವನೆ ಕೊಟ್ಟಿದೆ.

ಇಂತಹ ದೈತ್ಯ ಪ್ರತಿಭೆಗಳ ಜೊತೆ ಶೂಟಿಂಗ್ ಶುರು ಮಾಡೋದಕ್ಕೆ ಕಾಯ್ತ ಇದ್ದೀನಿ ಎಂದಿದ್ದಾರೆ ನಟಿ ರಮ್ಯಾ. ಇನ್ನು ಹಿಂದೆಯೇ ಚಿತ್ರತಂಡ ಹಂಚಿಕೊಂಡಂತೆ ಉತ್ತರಕಾಂಡದಲ್ಲಿ ಧನಂಜಯ ಮುಖ್ಯಭೂಮಿಕೆಯಲ್ಲಿದ್ದಾರೆ. ವೈವಿಧ್ಯಮಯ ಪಾತ್ರಗಳಲ್ಲಿ ನಾಯಕನಟನಾಗಿ ಮಿಂಚುತ್ತಿರುವ ಧನಂಜಯ ಅವರ ವೃತ್ತಿಯಲ್ಲೇ ಅತಿ ದೊಡ್ಡ ಸಿನೆಮಾ ಉತ್ತರಕಾಂಡ. ಅತ್ಯಂತ ಗಟ್ಟಿಯಾದ ಕಷ್ಟವಾದ ಪಾತ್ರ ವಹಿಸಿಕೊಂಡಿರುವುದರ ಬಗ್ಗೆ ಅವರೇ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಈಗಾಗಲೇ ಧನಂಜಯ ಅವರ ಸುಕ್ಕಾ ಲುಕ್ ವೈರಲ್ ಆಗಿದೆ.

ಈ ನಡುವೆ ರಮ್ಯಾ ಅವರು ಬಂದ ಲುಕ್ ನೋಡಿ ಎಲ್ಲರೂ ಕೂಡ ಫಿದಾ ಆಗಿದ್ದು ಜರತಾರಿ ಸೀರೆಯನ್ನುಟ್ಟು ಬಂಗಾರದ ನಕ್ಲೇಸ್ ಅನ್ನು ತೊಟ್ಟು ಮದುಮಗಳಂತೆ ಕಾಣಿಸುತ್ತಿದ್ದಾರೆ ರಮ್ಯಾ. ಸದ್ಯ ಅವರ ಈ ಲುಕ್ ನೋಡಿ ಪಡ್ಡೆ ಹುಡುಗರು ನಿದ್ದೆ ಗಳಿಸಿಕೊಂಡಿರುವುದಂತೂ ಸತ್ಯ. ಎರಡು ದಶಕಗಳಿಂದ ಚಿತ್ರರಂಗದಲ್ಲಿ ಇರುವಂತಹ ರಮ್ಯಾ ಅವರಿಗೆ ಅಭಿಮಾನಿ ಬಳಗ ಮಾತ್ರ ಕಡಿಮೆಯಾಗಿಲ್ಲ.

ಹೌದು ದಿನದಿಂದ ದಿನಕ್ಕೆ ಇವರ ನೋಟಕ್ಕೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದು
ಅದರಲ್ಲಿಯೂ ಕೂಡ ಈ ರೀತಿ ಸೀರೆಯನ್ನು ಉಟ್ಟು ಆಭರಣ ತೊಟ್ಟು ಕ್ಯಾಮೆರಾ ಮುಂದೆ ಬಂದರೆ ಯಾವ ಹುಡುಗರು ತಾನೆ ಇಷ್ಟ ಪಡುವುದಿಲ್ಲ ಹೇಳಿ ? ಇದು ಒಂದು ಕಡೆಯಾದರೆ ಇದೀಗ ರಮ್ಯಾ ಅವರು ಧರಿಸಿ ಬಂದ ನಕ್ಲಿಸ್ ವಿಚಾರ ಭಾರಿ ಚರ್ಚೆಗೆ ಗುರಿಯಾಗಿದೆ. ಹೌದ ನಟಿ ರಮ್ಯಾ ಅವರು ಧರಿಸಿದ ನೆಕ್ಲೆಸ್ ಬೆಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಿಕ್ಕಾಪಟ್ಟೆ ಚರ್ಚೆ ನಡೆದಿದೆ ಕೆಲವು ಮೂಲಗಳ ಪ್ರಕಾರ ನಟಿ ರಮ್ಯಾ ಅವರು ಧರಿಸಿದ ನಕ್ಲೇಸ್ ಬೆಲೆ 20 ಲಕ್ಷ ರೂಪಾಯಿ ಅಂತ ತಿಳಿದು ಬಂದಿದೆ.

 

View this post on Instagram

 

A post shared by Dhananjaya KA (@dhananjaya_ka)