ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಾಲೆ ಧರಿಸುತ್ತಿದ್ದಾಗ ಅಪ್ಪು ಶಿವಣ್ಣ ಹೇಗಿರುತ್ತಿದ್ದರು ನೋಡಿ…ವಿಡಿಯೋ

141

ರಾಜ್​ ಕುಮಾರ್ ಅವರ ಕುಟುಂಬ​ ಕರುನಾಡು ಮೆಚ್ಚಿದ ಸಂಸಾರ. ತಂದೆ-ತಾಯಿ ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರು ಕೂಡ ಸಮಾಜದದಲ್ಲಿ ಎಂದೂ ಉತ್ತಮ ವಿಚಾರಗಳಿಗೆ ಸುದ್ದಿಯಾದವರೇ ಹೊರತು ಬೇರೆ ವಿಚಾರದಲ್ಲಿ ಎಂದೂ ಅವರ ನೆರಳು ಕೂಡ ಸೋಕದಂತೆ ನೋಡಿಕೊಂಡಿದ್ದಾರೆ. ಇದಕ್ಕೆ ಆ ಮನೆಯ ವಾತಾವರಣ ಹಾಗೂ ಸಂಸ್ಕಾರವೇ ಕಾರಣ.

ಈ ವಾತರಣದಲ್ಲಿ ಬೆಳೆದ ಪುನೀತ್​ ಅವರಿಗೆ ರಾಯರೆಂದರೆ ಬಲು ಪ್ರೀತಿ. ಮಂತ್ರಾಲಯದ ಗುರುರಾಘವೇಂದ್ರ ದೇವರ ಬಗ್ಗೆ ಅಪ್ಪು ತಂದೆಯಂತೆಯೇ ವಿಶೇಷ ಭಕ್ತಿ ಹೊಂದಿದ್ದರು. ವರ್ಷಕ್ಕೆ ಒಂದು ಬಾರಿಯಾದರೂ ಕುಟುಂಬದ ಜೊತೆ ಮಂತ್ರಾಲಯಕ್ಕೆ ಭೇಟಿ ನೀಡುತ್ತಿದ್ದರು

ಡಾ. ರಾಜ್‌ಕುಮಾರ್ ಕುಟುಂಬ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಭಕ್ತರು. ಪ್ರತಿವರ್ಷವೂ ಡಾ. ರಾಜ್‌ ಮಾಲೆ ಹಾಕಿ ಶಬರಿಮಲೆಗೆ ಹೋಗುತ್ತಿದ್ದರು. ಅವರಷ್ಟೇ ಅಲ್ಲದೆ, ಅವರ ಕುಟುಂಬದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌, ಪುನೀತ್ ರಾಜ್‌ಕುಮಾರ್‌ ಸೇರಿ ಎಲ್ಲರು ಶಬರಿಮಲೆಗೆ ಹೋಗಿಬರುತ್ತಾರೆ. ಅಂತೆಯೇ ಈ ವರ್ಷವೂ ಕೂಡ ಶಿವಣ್ಣ ಮಾಲೆ ಹಾಕಿ ಅಯ್ಯಪ್ಪನ ದರ್ಶನಕ್ಕೆ ಸಿದ್ಧರಾಗಿದ್ದಾರೆ.

ಗುರುಸ್ವಾಮಿ ಹಿರಿಯ ನಟ ಶಿವರಾಮ್ ಅವರ ಮಾರ್ಗದರ್ಶನದಲ್ಲಿ ಅವರು ಮಾಲೆ ಧರಿಸಿದ್ದರು.ಇವರು ಇದ್ದ ಕೊನೆಯವರೆಗೂ ಅಯ್ಯಪ್ಪನ ಮಾಲೆ ಧರಿಸಿ ನಿಷ್ಠೆಯಿಂದ ಇದ್ದು ದೇವರನ್ನು ದರ್ಶನ ಮಾಡಿಕೊಳ್ಳುತ್ತಿದ್ದರು. ಇವರಂತೆಯೇ ಇವರ 3 ಮಕ್ಕಳು ಕೂಡ ಸ್ವಾಮಿ ಅಯ್ಯಪ್ಪ ಅಂದರೆ ಪರಮ ಭಕ್ತಿ. ಇವರು ಕೂಡ ಆಗಾಗ ಮಾಲೆಯನ್ನು ಧರಿಸಿ ದರ್ಶನ ಮಾಡಿಕೊಳ್ಳುವುದಕ್ಕೆ ಹೋಗುತ್ತಿರುತ್ತಾರೆ.

ಕೆಲ ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರು ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಅಲ್ಲಿ 18 ಮೆಟ್ಟಿಲುಗಳನ್ನು ಹತ್ತಿ ಅಯ್ಯಪ್ಪನ ದರ್ಶನವನ್ನು ಮಾಡಿಕೊಂಡು ಬಂದಿದ್ದರು. ಆದರೆ ದುರದೃಷ್ಟವಶಾತ್ ನೋಡಿ ಪುನೀತ್ ಅವರು ಕೇವಲ 46 ವರ್ಷಗಳಿಗೆ ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದರು.

ಇನ್ನೂ ಪುನೀತ್ ಅವರ ವ್ಯಕ್ತಿತ್ವ ಹೇಗಿದೆ ಎನ್ನುವುದಕ್ಕೆ ಅವರ ಮರಣದ ದಿನ ಮತ್ತು ಅಂತ್ಯಕ್ರಿಯೆ ದಿನ ಬಂದಿದ್ದ ಅಭಿಮಾನಿಗಳ ಸಂಖ್ಯೆ ಸಾಕ್ಷಿಯಾಗಿದೆ. ಪುನೀತ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರು ಮರಣ ಹೊಂದಿ 1 ತಿಂಗಳು ಆಗುತ್ತಿದ್ದರೂ ಕೂಡ ಇವರ ಸಮಾಧಿಯನ್ನು ನೋಡಲು ಸಾಕಷ್ಟು ಅಭಿಮಾನಿಗಳು ಮೂಲೆ ಮೂಲೆಗಳಿಂದ ಬರುತ್ತಿದ್ದಾರೆ.

ಇವರು ಮಾಡಿರುವ ಸಾಕಷ್ಟು ಸಮಾಜ ಸೇವೆಗಳು ಈಗ ಒಂದೊಂದಾಗಿಯೇ ಹೊರ ಬೀಳುತ್ತಿದೆ. ಪುನೀತ್ ಅವರ ಬಳಿ ಯಾರೇ ಏನೇ ಸಹಾಯ ಕೇಳಿದರು ಹಿಂದೆ ಮುಂದೆ ನೋಡದೆ ಮಾಡುತ್ತಿದ್ದರಂತೆ. ಆದರೆ ಇವರು ಸಹಾಯ ಮಾಡುತ್ತಿದ್ದನ್ನು ಎಲ್ಲೂ ಕೂಡ ಪ್ರಚಾರ ಮಾಡುತ್ತಿರಲಿಲ್ಲ. ಒಂದು ವೇಳೆ ಯಾರಾದರೂ ಪ್ರಚಾರ ಮಾಡಿದರೆ ಅವರಿಗೆ ಸರಿಯಾಗಿ ಬುದ್ಧಿ ಹೇಳುತ್ತಿದ್ದರಂತೆ.

ಇನ್ನು ಅಯ್ಯಪ್ಪ ಸ್ವಾಮಿಯ ಭಕ್ತರಾಗಿರುವ ಪುನೀತ್​ ರಾಜ್​ಕುಮಾರ್​ ಬಹುತೇಕ ವರ್ಷಗಳಲ್ಲಿ ಸಹೋದರರ ಜೊತೆ ಮಾಲೆ ಧರಿಸಿ ಶಬರಿಮಲೆ ಯಾತ್ರೆ ನಡೆಸಿದ್ದರು. ಅಪ್ಪು ದೇವರ ಮೇಲೆ ಎಷ್ಟು ನಂಬಿಕೆ ಹೊಂದಿದ್ದರೋ, ಹಿರಿಯರ ಮೇಲೆ ಅಷ್ಟೇ ಗೌರವ ಕಿರಿಯರ ಮೇಲೆ ಅಷ್ಟೇ ಪ್ರೀತಿ ಹೊಂದಿದ್ದರು. ಹೀಗಾಗಿ ಇಂದು ಇಡೀ ಕರ್ನಾಟಕ ಅವರ ಅಗಲಿಕೆಗೆ ಕಣ್ಣೀರು ಹಾಕುತ್ತಿದೆ.