ಕನ್ನಡ ಚಿತ್ರರಂಗದ ರಾಕಿಂಗ್ ಕಪಲ್ ಗಳೆಂದರೆ ಸಿಂಡ್ರೆಲಾ ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು. ಕನ್ನಡ ಚಿತ್ರರಂಗದಲ್ಲಿ ಈ ಸ್ಟಾರ್ ಜೋಡಿಗಳಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದರೆ ಅಚ್ಚರಿಯ ವಿಚಾರವೇನೆಂದರೆ ಇವರಿಗೆ ಎಷ್ಟು ಅಭಿಮಾನಿಗಳಿದ್ದಾರೋ ಅದಕ್ಕೂ ಡಬಲ್ ಅವರ ಮಕ್ಕಳಾದ ಐರಾ ಹಾಗೂ ಯಥರ್ವ್ಗೆ ಫ್ಯಾನ್ಸ್ ಇದ್ದಾರೆ ಎಂಬುದು ಸುಳಲ್ಲ.
ಹೌದು ಇದಕ್ಕೆ ಸಾಕ್ಷಿ ಎಂಬಂತೆ ಅವರ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣದ ಫ್ಯಾನ್ ಪೇಜ್ ಗಳು. ಸ್ಟಾರ್ ಕಿಡ್ಸ್ ಪಟ್ಟಿಯಲ್ಲಿ ಅಗ್ರಸ್ಥಾಮದಲ್ಲಿರುವ ಈ ರಾಕಿಂಗ್ ಮಕ್ಕಳು ಎಷ್ಟು ನಾಟಿ ಎಂಬದು ಯಶ್ ಹಾಗೂ ರಾಧಿಕಾ ಅಪ್ಲೋಡ್ ಮಾಡುವ ಫೋಟೋ ನೋಡಿದರೆ ಗೊತ್ತಾಗುತ್ತದೆ.
ಹೌದು ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಅವರು ಹೊಸ ವರುಷಕ್ಕೆ ಶುಭಾಷಯ ತಿಳಿಸಿದ್ದ ಪೋಸ್ಟ್ ಈಗಲೂ ಕೂಡ ಸಖತ್ ವೈರಲ್ ಆಗಿಯೇ ಇದೆ.ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಪ್ರೀತಿ ಸಂತೋಷ ಹಾಗೂ ಕೊಂಚ ತುಂಟಾಟ ತುಂಬಿರಲಿ. ಆರ್ಡರ್ನಲ್ಲಿದೆ ಇವರಿಬ್ಬರ ತುಂಟಾಟ. ಈ ವರ್ಷ ಅದ್ಭುತವಾಗಿರಲಿದೆ ಎಂದು ರಾಧಿಕಾ ಬರೆದಿದ್ದರು.
ಮೊದಲ ಫೋಟೋದಲ್ಲಿ ಐರಾ ಮತ್ತು ಯಥರ್ವ್ ಪೋಸ್ ನೀಡಿದ್ದು ಎರಡನೇ ಫೋಟೋದಲ್ಲಿ ಐರಾ ತಮ್ಮನ್ನನ್ನು ಕಚ್ಚಲು ಹೋಗಿದ್ದಾಳೆ ಹಾಗೂ ಮೂರನೇ ಫೋಟೋದಲ್ಲಿ ಅಕ್ಕ ನಗುತ್ತಿದ್ದರೆ ತಮ್ಮ ಅಳುತ್ತಿದ್ದಾನೆ. ಮೊದಲ ಬಾರಿ ರಾಧಿಕಾ ಈ ರೀತಿಯ ಪೋಟೋ ಶೇರ್ ಮಾಡಿಕೊಂಡಿದ್ದು ಅಭಿಮಾನಿಗಳು ಸಖತ್ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. ರಾಧಿಕಾ ಮನೆಯಲ್ಲಿ ಪ್ರತಿ ಹಬ್ಬವನ್ನೂ ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಸಂಭ್ರಮದ ಕ್ಷಣಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಲೆ ಇರುತ್ತಾರೆ.
ಸ್ಯಾಂಡಲ್ವುಡ್ ಈ ರಾಕಿಂಗ್ ಕಪ್ ಗಳು ಲಾಕ್ಡೌನ್ ಸಮಯದಿಂದಲೂ ಕೂಡ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಅವರ ತುಂಟಾಟ ತೊದಲ ಮಾತುಗಳು ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿ ಕೊಡುತ್ತಲೆ ಇರುತ್ತಾರೆ. ಕಳೆದ ವರುಷ ಡಾಡ-ಮಮ್ಮ ಎನ್ನುತ್ತಿದ್ದ ಯಥರ್ವ್ ಈಗ ಜಾನಿ ಜಾನಿ ಹೇಳುತ್ತಿದ್ದಾನೆ.
ಇದರ ಜೊತೆ ಅಕ್ಕ ಐರಾ ಮಧ್ಯೆ ಬಂದು ಕೀಟಲೆ ಕೂಡ ಮಾಡುತ್ತಿದ್ದಾಳೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಅವರು ಯುಗಾದಿ ಹಬ್ಬದ ದಿನ ಮಕ್ಕಳ ಜೊತೆ ಕೂತು ಊಟ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು ರಾಕಿ ಭಾಯ್ ಹಾಗೂ ರಾಧಿಕಾ ಅವರ ಅಭಿಮಾನಿಗಳು ಫೋಟೋಸ್ ನೋಡಿ ಸಂತೋಷಪಟ್ಟಿದ್ದಾರೆ.
ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ಜೊತೆ ಯುಗದ ಹಬ್ಬದ ಊಟದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ಬಹಳಾನೇ ವೈರಲ್ ಆಗುತ್ತು. ಸದ್ಯ ಇದೀಗ ರಾಧಿಕಾ ಹಾಗೂ ಯಥರ್ವ್ ರವರು ಸುಂದರ ಹಾಗೂ ಅದ್ಬುತ ಕ್ಷಣಗಳನ್ನು ಜೋಡಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ನಿಜಕ್ಕೂ ಇದನ್ನು ನೋಡುತ್ತಿದ್ದರೆ ಎಂತಹವರಿಗೂ ಕ್ಯೂಟ್ ಅನಿಸುತ್ತದೆ ಹೌದು ನೀವು ಕೂಡ ಲೇಖನಿಯ ಕೆಳಗೆ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಈ ಅದ್ಬುತ ಕ್ಷಣಗಳನ್ನು ನೋಡಬಹುದು. ವಿಡಿಯೋ ಕುರಿತು ನಿಮ್ಮ ಅನುಸಿಕೆ ಅಭಿಪ್ರಾಯವನ್ನ ತಪ್ಪದೆ ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.