ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಿಂಗಾರ ಸಿರಿಯೆ ಹಾಡಿಗೆ ಡಾನ್ಸ್ ಮಾಡಿದ ಪ್ರಜ್ವಲ್ ದೇವರಾಜ್ ಪತ್ನಿ…ಚಿಂದಿ ಕ್ಷಣ

21,988

ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ರವರು ಅತ್ಯುತ್ತಮ ನೃತ್ಯಗಾರ್ತಿ. ಹೌದು ಈ ಹಿಂದೆ ರಿಷಭಪ್ರಿಯ ಎಂಬ ಕಿರುಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದು ಆದರೆ ಲಾ ಸಿನಿಮಾದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿದ್ದರು.

ಪ್ರಜ್ವಲ್ ದೇವರಾಜ್‌ ನಟನೆಯ ಇನ್ಸ್‌ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಅತಿಥಿ ಪಾತ್ರವನ್ನೂ ಮಾಡಿದ್ದು ಸದ್ಯ ಇದೀಗ ಮತ್ತೊಮ್ಮೆ ಹೊಸ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ ರಾಗಿಣಿ. ಅವರು ನಟಿಸುತ್ತಿರುವ ಸಿನಿಮಾಗೆ ಶಾನುಭೋಗರ ಮಗಳು ಎಂದು ನಾಮಕರಣ ಮಾಡಲಾಗಿದೆ.

ಹೌದು ಸ್ಯಾಂಡಲ್‌ವುಡ್‌ನಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕೋಡ್ಲು ರಾಮಕೃಷ್ಣ ಅವರು ಈ ಶಾನುಭೋಗರ ಮಗಳು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಮಿ. ಡೂಪ್ಲಿಕೇಟ್‌ ಸಿನಿಮಾವನ್ನು ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡಿದ್ದರು. ಅದರಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದರು.

ಇದೀಗ ಅವರ ಪತ್ನಿ ರಾಗಿಣಿ ನಾಯಕಿಯಾಗಿರುವ ಸಿನಿಮಾಗೆ ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡುತ್ತಿರುವುದು ವಿಶೇಷ. ಭಾಗ್ಯ ಕೃಷ್ಣಮೂರ್ತಿ ಅವರು ಬರೆದಿರುವ ಕಾದಂಬರಿ ಆಧಾರಿಸಿ ಶಾನುಭೋಗರ ಮಗಳು ಸಿನಿಮಾ ಮಾಡಲಾಗುತ್ತಿದ್ದು ಸ್ವಾತಂತ್ರಪೂರ್ವದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ.

ಹೌದು ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ ಮತ್ತೊಮ್ಮೆ ಕಾದಂಬರಿ ಆಧಾರಿತ ಸಿನಿಮಾವನ್ನು ಕೈಗೆತ್ತಿಕೊಂಡಿರುವುದು ವಿಶೇಷವಾಗಿದ್ದು ಈ ಸಿನಿಮಾಗೆ ಬಿ.ಎ. ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದಾರೆ.

ಈ ಚಿತ್ರಕ್ಕೆ ಜೈ ಆನಂದ್ ಅವರ ಛಾಯಾಗ್ರಹಣವಿದ್ದು ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಕಲಾ ನಿರ್ದೇಶನದ ಜವಾಬ್ದಾರಿ ವಸಂತ್ ರಾವ್ ಕುಲಕರ್ಣಿ ಅವರದ್ದು. ಭುವನ್ ಫಿಲ್ಮ್ಸ್‌ ಲಾಂಛನದಲ್ಲಿ ಶಾನುಭೋಗರ ಮಗಳು ಸಿನಿಮಾ ನಿರ್ಮಾಣವಾಗುತ್ತಿದೆ.

ಇನ್ನು ಶಾನುಭೋಗರ ಮಗಳು ಚಿತ್ರದ ಪ್ರಮುಖ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸುತ್ತಿದ್ದು ಉಳಿದಂತೆ ಮೇಘಶ್ರೀ ನಿರಂಜನ್ ಕುಮಾರ್ ರಮೇಶ್ ಭಟ್ ಟೆನ್ನಿಸ್ ಕೃಷ್ಣ ‌ಶಂಕರ್ ಅಶ್ವತ್ಥ್ ನೀನಾಸಂ ಅಶ್ವತ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರದಲ್ಲಿ ಟಿಪ್ಪು ಸುಲ್ತಾನ್ ಪ್ರಮುಖ ಪಾತ್ರವಾಗಿದ್ದು ಆ ಪಾತ್ರಕ್ಕಾಗಿ ಕಲಾವಿದರ ಆಯ್ಕೆ ಕಾರ್ಯ ನಡೆಯುತ್ತಿದೆ.

ಸೆಪ್ಟೆಂಬರ್ ಕೊನೆಯ ವಾರದಿಂದ ಮೈಸೂರು ಶ್ರೀರಂಗಪಟ್ಟಣ ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ನಿರತರಾಗಿರುವ ರಾಗಿಣಿ ರವರು ವಿಶೇಷ ಡ್ಯಾನ್ಸ್ ವಿಡಿಯೋಗಳನ್ನು ಮಾಡುತ್ತಾ ಎಲ್ಲರನ್ನು ಸೆಳೆಯುತ್ತಿದ್ದು ಸದ್ಯ ಇದೀಗ ಸೂಪರ್ ಹಿಟ್ ಸಿನಿಮಾ ಕಾಂತರ ದ ಸಿಂಗಾರ ಸಿರಿಯೇ ಹಾಡಿಗೆ ವಿಶೇಷ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು ರಾಗಿಣಿ ನೃತ್ಯ ಹಾಗೂ ಸೌಂದರ್ಯಕ್ಕೆ ನೆಟ್ಟಗರು ಫಿದಾ ಆಗಿದ್ದಾರೆ.

 

 

View this post on Instagram

 

A post shared by Ragini Prajwal (@iamraginiprajwal)