ಕನ್ನಡದ ಇಂಡಸ್ಟ್ರಿಯಲ್ಲಿ ಬಹಳಷ್ಟು ಹೆಸರು ಮಾಡಿದಂತಹ ಕಲಾವಿದ ಮತ್ತು ಹಿರಿಯ ನಟನೆಂದೆ ಕರೆಸಿಕೊಳ್ಳುವಂತಹ ಕಲಾವಿದ ಎಂದರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅವರ ಹಲವು ಸಿನಿಮಾಗಳು ಬಹಳಷ್ಟು ಹಿಟ್ ದಾಖಲೆಯನ್ನು ನೀಡಿದೆ. ಅವರು ಮಾಡಿರುವಂತಹ ಹಲವು ಹಾಡುಗಳು ಇಂದಿಗೂ ಕೂಡ ಎಲ್ಲರ ಗಮನವನ್ನು ಸೆಳೆಯುತ್ತದೆ ಅವೆಲ್ಲ ಹಾಡುಗಳು ಕೂಡ ಎವರ್ಗ್ರೀನ್ ಹಾಡುಗಳಾಗಿಯೇ ಇದೆ ಹಾಗಾಗಿ ಅವರಿಗೆ ಅಷ್ಟೊಂದು ಕ್ರೇಜ್ ಕೂಡ ಜಾಸ್ತಿ ಇರುವುದು. ಮತ್ತು ಅವರಿಗಿರುವಂತಹ ಅಭಿಮಾನಿ ಬಳಗವು ಕೂಡ ಹೆಚ್ಚು.
ಇನ್ನು ರವಿಚಂದ್ರನ್ ಅವರ ಹಲವು ಸಿನಿಮಾಗಳು ಇತ್ತೀಚಿಗೆ ರಿಲೀಸ್ ಆಗಿವೆ ಆದರೂ ಕೂಡ ಅವೆಲ್ಲವೂ ಕೂಡ ಫ್ಲಾಪ್ ಆಗಿದೆ ಹಾಗಾಗಿ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ನೋವುಗಳನ್ನು ಅನುಭವಿಸುತ್ತಾ ಇದ್ದಾರೆ ಎಂಬ ಮಾತನ್ನು ತಾವೇ ಸ್ವತಃ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಅದನ್ನು ನೆನೆಯುತ್ತ ಅವರು ಭಾವುಕರಾಗಿದ್ದರು ಮತ್ತು ಅವರು ಹೇಳಿಕೊಂಡ ಅನೇಕ ಘಟನೆಗಳು ಎಲ್ಲರನ್ನೂ ಕೂಡ ಭಾವುಕರಾಗುವಂತೆ ಮಾಡಿತು ಅದರಲ್ಲಿ ಅವರು ತಮ್ಮ ಇಷ್ಟಪಟ್ಟಂತಹ ಮನೆಯನ್ನು ಬಿಟ್ಟು ಬರಬೇಕಾದಂತಹ ಪರಿಸ್ಥಿತಿಯನ್ನು ಹೇಳಿದಾಗ ಎಲ್ಲರಿಗೂ ಕೂಡ ಬೇಸರವಾಯಿತು .
ರವಿಚಂದ್ರನ್ ಅವರು ರಿಯಾಲಿಟಿ ಶೋ ಒಂದರ ವೇದಿಕೆಯ ಮೇಲೆ ಬಂದು ತಮ್ಮ ಜೀವನದಲ್ಲಿ ನಡೆಯುತ್ತಿರುವ ಕಷ್ಟಗಳ ಕುರಿತಂತೆ ಭಾವನಾತ್ಮಕವಾಗಿ ಹೇಳಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾ ಸಾಲು ಸಾಲಾಗಿ ಸೋಲುತ್ತಿರುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಸಂಬದ್ಧವಾಗಿ ಕೆಲವು ವ್ಯಕ್ತಿಗಳು ಕಾಮೆಂಟ್ ಮಾಡುತ್ತಿದ್ದರು. ಇದಕ್ಕೆ ರವಿಚಂದ್ರನ್ ಅವರು ಕಣ್ಣೀರು ಹಾಕುತ್ತಾ ನಾನು ಹಣವನ್ನು ಕಳೆದುಕೊಂಡಿರುವುದು ಯಾವುದು ಕೆಟ್ಟ ಕೆಲಸಕ್ಕಾಗಿ ಅಲ್ಲ ಬದಲಾಗಿ ಒಳ್ಳೆಯ ಸಿನಿಮಾ ಮಾಡಿ ನಿಮ್ಮನ್ನು ರಂಜಿಸಬೇಕು ಎನ್ನುವುದಾಗಿ ಎಂಬುದಾಗಿ ಹೇಳಿದ್ದರು.
ಕೇವಲ ಇಷ್ಟು ಮಾತ್ರವಲ್ಲದೆ ಇಂದು ನಿನ್ನೆಯಿಂದಲ್ಲ ಕಳೆದ 30 ವರ್ಷಗಳಿಂದಲೂ ಕೂಡ ನಾನು ನಿಮ್ಮನ್ನು ರಂಜಿಸುವುದಕ್ಕಾಗಿಯೇ ಹಣವನ್ನು ಕಳೆಯುತ್ತಾ ಬಂದಿದ್ದೇನೆ ಎಂಬುದಾಗಿ ಹೇಳುತ್ತಾರೆ. ಈ ಮೂಲಕ ಸದ್ಯಕ್ಕೆ ಅವರ ಆರ್ಥಿಕ ಪರಿಸ್ಥಿತಿ ಎನ್ನುವುದು ಅಷ್ಟೊಂದು ಚೆನ್ನಾಗಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಂದು ವೇಳೆ ಈಗ ಜೀವಂತವಾಗಿದ್ದರೆ ಖಂಡಿತವಾಗಿ ರವಿಚಂದ್ರನ್ ಅವರಿಗೆ ದೊಡ್ಡ ಮಟ್ಟದ ಸಹಾಯ ಮಾಡುತ್ತಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈಗ ಅವರ ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ ಆಗಿರುವ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಆಹ್ವಾನ ಮಾಡುವ ನಿಟ್ಟಿನಲ್ಲಿ ಫೋನ್ ಕಾಲ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ರವಿಚಂದ್ರನ್ ಅವರ ವಿಡಿಯೋ ನೋಡಿರುವ ಹಿನ್ನೆಲೆಯಲ್ಲಿ ಅವರಿಗೆ ಸಾಂತ್ವಾನವನ್ನು ಕೂಡ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಕೇವಲ ಪುನೀತ್ ಪರ್ವ ಕಾರ್ಯಕ್ರಮಕ್ಕೆ ಬರುವುದಕ್ಕೆ ಆಹ್ವಾನ ನೀಡಿರುವುದು ಮಾತ್ರವಲ್ಲದೆ ಫೋನ್ ಕರೆಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ರವರು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎನ್ನುದಾಗಿ ಧೈರ್ಯವನ್ನು ಕೂಡ ತುಂಬಿದ್ದಾರೆ. ರವಿಚಂದ್ರನ್ ಅವರು ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲಾಗಿ ಗೆಲುವನ್ನು ನೀಡಲಿ ಎಂಬುದು ಎಲ್ಲರ ಹಾರೈಕೆ