ವಾರ್ತಾ ಮಂಜರಿ
Trending Stories, Viral News, Gossips & Everything in Kannada

Darshan: ಪುನೀತ್ ಗೆ ದೊಡ್ಡ ಮೋಸ…ಬಯಲಾಯ್ತು ಈ ಇಬ್ಬರೂ ನಟರ ಅಸಲಿ ಮುಖ ನೋಡಿ ಸತ್ಯ.

8,644

Puneeth parva: ಪವರ್‌ ಸ್ಟಾರ್‌ ಡಾ. ಪುನೀತ್‌ ರಾಜಕುಮಾರ್‌ ಅವರ ಕನಸಿನ ಕೂಸು ಗಂಧದಗುಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ಪುನೀತ್‌ ಪರ್ವಕ್ಕೆ ಅಭಿನಯ ಚಕ್ರವರ್ತಿ ಸುದೀಪ್‌ ಹಾಗೂ ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ಅವರು ಕಾರಣಾಂತರದಿಂದ ಗೈರಾಗಿದ್ದರು.

ಆದ್ರೆ ಅವರಿಬ್ಬರಿಗೂ ಅಪ್ಪು ಅವರ ಮೇಲಿರುವ ಅಭಿಮಾನ, ಪ್ರೀತಿ ಮಾತ್ರ ಅಪಾರ. ಆದರೂ ಇಬ್ಬರೂ ನಟರು ಪುನೀತ್‌ ಪರ್ವಕ್ಕೆ ಯಾಕೆ ಬಂದಿಲ್ಲ ಎಂದು ನೆಟ್ಟಿಗರು ಮತ್ತು ಇಬ್ಬರು ಸ್ಟಾರ್‌ಗಳ ಫ್ಯಾನ್ಸ್‌ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಟಾಕ್‌ ವಾರ್‌ ಶುರುವಾಗಿದೆ.

ಹೌದು ಸುದೀಪ್‌ ಅವರಿಗೆ ಅಪ್ಪು ಕಂಡ್ರೆ ತುಂಬಾ ಪ್ರೀತಿ, ದರ್ಶನ್‌ ಅವರಿಗಂತೂ ಪುನೀತ್‌ ಬಲು ಅಚ್ಚುಮೆಚ್ಚು. ಅಪ್ಪು ಅವರನ್ನು ದರ್ಶನ್‌ ಹಾಗೂ ಸುದೀಪ್‌ ಅವರು ಅಪ್ಪಿಕೊಂಡಿರುವ ಅದೇಷ್ಟೋ ಫೋಟೋಗಳನ್ನ ನೋಡಿದ್ದೇವೆ. ಅಲ್ಲದೆ ದೊಡ್ಮನೆ ಮೇಲೆ ಇಬ್ಬರೂ ನಾಯಕರಿಗೆ ಅಷ್ಟೇ ಗೌರವವಿದೆ. ಇನ್ನು ಹುಬ್ಬಳ್ಳಿಯಲ್ಲಿ ನಡೆದ ಬನಾರಸ್‌ ಸಿನಿಮಾ ರಿಲೀಸ್‌ ಕಾರ್ಯಕ್ರಮದ ವೇಳೆ ಅಪ್ಪು ನೆನೆದು ದರ್ಶನ್ ಅವರು ತಮಗರಿವಿಲ್ಲದಂತೆ ಕಣ್ಣಿರಿಟ್ಟರು. ಕಾರಣಾಂತರದಿಂದ ಇಬ್ಬರೂ ಪುನೀತ್‌ ಪರ್ವಕ್ಕೆ ಹಾಜರಾಗಿಲ್ಲ ಅಷ್ಟೇ.. ಅದ್ರೆ ಇದ್ಯಾವುದನ್ನು ತಿಳಿಯದೇ ಸುಖಾ ಸುಮ್ಮನೆ ನೆಟ್ಟಿಗರು ಚರ್ಚೆಗಿಳಿದಿದ್ದಾರೆ.

Gandhadagudi  Pre Release Event

ಅಜಾತಶತ್ರು, ಕನ್ನಡದ ಕಂದ ಪುನೀತ್‌ ರಾಜಕುಮಾರ್‌ ಎಲ್ಲರಿಗೂ ಅಚ್ಚುಮೆಚ್ಚು, ಅಪ್ಪು ಅಗಲಿಕೆ ವೇಳೆ ದರ್ಶನ್‌ ಬಾವುಕರಾಗಿದ್ದು ಎಲ್ಲರೂ ನೋಡಿದ್ದಾರೆ. ಅಲ್ಲದೆ, ಸುದೀಪ್‌ ಅವರು ನೆಚ್ಚಿನ ಗೆಳೆಯನ್ನು ಕಳೆದುಕೊಂಡು ಕೊರಗಿದ್ದರು. ಇಂದಿಗೂ ಇಬ್ಬರಿಗೂ ಅಪ್ಪು ಮೇಲೆ ಕೊಂಚವೂ ಪ್ರೀತಿ ಕಡಿಮೆಯಾಗಿಲ್ಲ. ಆದ್ರೆ ಪುನೀತ್‌ ಪರ್ವಕ್ಕೆ ಇಬ್ಬರೂ ಬಾರದಿರುವುದು ನೆಟಿಜನ್ಸ್‌ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಜೊತೆ ಇಬ್ಬರ ಫ್ಯಾನ್ಸ್‌ ಅವರ ಜೊತೆ ಸಮರ್ಥನೆಗೆ ಇಳಿದಿದ್ದಾರೆ.

ಒಟ್ಟಾರೆಯಾಗಿ ಯಾರೂ ಬೇಕು ಅಂತ ಏನನ್ನೂ ಮಾಡುವುದಿಲ್ಲ. ಸಮಯ, ಸಂದರ್ಭ ಅಂತಹದ್ದು, ಅಷ್ಟಕ್ಕೇ ಅವರ ಮೇಲೆ ಗೂಬೆ ಕುರಿಸುವುದು ಸಮಂಜಸವಲ್ಲ ಎಂದು ಕೆಲ ಜನರು ಚರ್ಚೆಯನ್ನು ಇತ್ಯರ್ಥಗೊಳಿಸಲು ನೋಡುತ್ತಿದ್ದಾರೆ. ಆದ್ರೆ ಇನ್ನೂ ಕೆಲವರು ಅವರು ಮಾಡಿದ್ದು ತಪ್ಪು ಎನ್ನುತ್ತಿದ್ದಾರೆ.Kiccha Sudeep pays emotional tribute to his childhood friend Puneeth Rajkumar | Bollywood Bubble

ಕನ್ನಡದಲ್ಲಿ ಸ್ಟಾರ್ ನಟರೆಂದ ತಕ್ಷಣ ಎಲ್ಲರೂ ಹೇಳುವುದು ಸುದೀಪ್, ದರ್ಶನ್ ತದ ನಂತರದಲ್ಲಿ ಯಶ್ ಧ್ರುವ ಎಂದು ಆದ್ದರಿಂದ ಒಂದು ದೊಡ್ಡ ಕಾರ್ಯಕ್ರಮ ಹಾಗೂ ಪುನೀತ್ ರಾಜಕುಮಾರ್ ಅವರ ಕಟ್ಟ ಕಡೆ ಕಾರ್ಯಕ್ರಮ ನಡೆದಾಗ ಅಲ್ಲಿ ಸುದೀಪ್ ಮತ್ತು ದರ್ಶನ್ ಗೈರು ಹಾಜರಾಗಿದ್ದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸಾಕಷ್ಟು ಚರ್ಚೆಯಾಗುತ್ತಿದೆ.

ಬೇರೆ ಬೇರೆ ಭಾಷೆಯ ದೊಡ್ಡ ನಟರಾದ ಸೂರಿ, ಸಿದ್ದಾರ್ಥ್, ಪ್ರಕಾಶ್ ರೈ ಹೀಗೆ ಬೇರೆ ಭಾಷೆಯ ಹಲವಾರು ಪ್ರಖ್ಯಾತ ನಟ ನಟಿಯರು ಪುನೀತ ಪರ್ವ ಕಾರ್ಯಕ್ರಮಕ್ಕೆ ಬಂದಿದ್ದರು, ಆದರೆ ನಮ್ಮ ಮನೆಯವರಾದ ದರ್ಶನ್ ಹಾಗೂ ಸುದೀಪ್ ಬಾರದೆ ಇದ್ದಿದ್ದು ಎಲ್ಲರಲ್ಲೂ ಬೇಸರವನ್ನು ತಂದಿದೆ.

ಒಂದು ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದರೆ ಒಂದೇ ವೇದಿಕೆಯಲ್ಲಿ ಇಬ್ಬರು ಮುಖಾಮುಖಿಯಾಗಬೇಕು ಎನ್ನುವ ಸಲುವಾಗಿ ಬರಲಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ ಹಾಗೂ ಈ ರೀತಿಯ ಕಾರ್ಯಕ್ರಮಕ್ಕೆ ಹೋದಾಗ ಸಿಗಬೇಕಾದ ಸ್ಟಾರ್ ನಟರ ಗೌರವ ಸಿಗದೇ ಹೋದರೆ ಹೇಗೆ ಎಂದು ಸುದೀಪ್ ಮತ್ತು ದರ್ಶನ್ ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಮಾತುಗಳು ಈಗ ಎಲ್ಲಾ ಕಡೆ ಕೇಳಿ ಬರುತ್ತಿದೆ. ಇತ್ತ ಸುದೀಪ್ ಮ್ಯಾಚು ನೋಡಲು ಹೋಗಿದ್ದಾರೆ ಅತ್ತ ದರ್ಶನ ಜಮೀರ್ ಮಗನ ಕಾರ್ಯಕ್ರಮಕ್ಕೆ ಹೋಗಿದ್ದರು. ಅಪ್ಪು ಹೆಚ್ಚು ಪ್ರೀತಿಸಿದ ಇವರಿಬ್ಬರೂ ಕೂಡ ಪುನೀತ ಪರ್ವಕ್ಕೆ ಬಂದಿಲ್ಲ