ಇನ್ಸ್ಟಾಗ್ರಾಮ್, ಫೇಸ್ಬುಕ್, ವಾಟ್ಸ್ಆಪ್ ಯೂಟ್ಯೂಬ್ ಸೇರಿದಂತೆ ಹಲವಾರು ಅಪ್ಲಿಕೇಶನ್ ಗಳಲ್ಲಿ ಈಗಲೂ ಕೂಡ ರಾಬರ್ಟ್ ಸಿನಿಮಾದ ಕಣ್ಣು ಅಂದರಿಂಧಿ ಎಂಬ ತೆಲುಗು ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಈ ಹಾಡು ಇಷ್ಟೊಂದು ದೊಡ್ಡ ಮಟ್ಟಕ್ಕೆ ಹೋಗಲು ಕಾರಣ ಗಾಯಕಿ ಮಂಗ್ಲಿ. ಇನ್ನು ಕನ್ನಡದ ಕಣ್ಣು ಹೊಡಿಯಾಕ ಎಂಬ ಹಾಡನ್ನು ಶ್ರೇಯಾ ಘೋಷಾಲ್ ಅವರು ಹಾಡಿದ್ದು, ಇದಕ್ಕಿಂತ ಹೆಚ್ಚಿನ ಮನರಂಜನೆ ಮಂಗ್ಲಿ ಅವರಿಂದ ಸಿಕ್ಕಿದೆ. ಈಗ ಕನ್ನಡದ ಜನ ಮಂಗ್ಲಿಯವರ ಧ್ವನಿಯನ್ನು ಬಹಳ ಇಷ್ಟಪಟ್ಟಿದ್ದು, ರಾಬರ್ಟ್ ಸಿನಿಮಾದ ಈ ಹಾಡಿನಿಂದ ಮುಂಗ್ಲಿ ಅವರು ದೊಟ್ಟಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ.
ಅದೃಷ್ಟ ಎಂಬುದು ಯಾವಾಗ ಕೈಹಿಡಿಯುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಹೌದು ಉತ್ತಮ ಪ್ರತಿಭೆಗಳಿದ್ದರೂ ಕೂಡ ಅದು ಬೆಳಕಿಗೆ ಬರುವುದು ಸುಮಾರು ವರುಷವೇ ಆಗುತ್ತದೆ. ಆದರೆ ಒಂದು ಸಾರಿ ಈ ಅದೃಷ್ಟ ಎಂಬುದು ಕೈ ಹಿಡಿದರೆ ನಾವು ಯಶಸ್ಸಿನ ತುತ್ತ ತುದಿ ಏರುವುದಂತೂ ಖಚಿತ.
ಈ ರೀತಿಯಾದ ಅದೃಷ್ಟ ಎಂಬುದು ಇದೀಗ ರಾಬರ್ಟ್ ಸಿನಿಮಾದ ಗಾಯಕಿ ಒಬ್ಬರಿಗೆ ಸಿಕ್ಕಿದೆ. ಹೌದು ಕೇವಲ ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಗಾಯಕಿ, ಇದೀಗ ಕರುನಾಡ ಪಡ್ಡೆ ಹೈಕಳ ಕ್ರಶ್ ಆಗಿಬಿಟ್ಟಿದ್ದಾರೆ. ಅಲ್ಲದೇ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಿಗೆ ಗಾಯನ ಮಾಡುವ ಅವಕಾಶಗಳು ಸಿಗುತ್ತಿವೆ. ಇದೀಗ ಮಂಗ್ಲಿ ಹಾಡಿರುವ ಹೊಸ ಹಾಡು ದೂಳೆಬ್ಬಿಸುತ್ತಿದೆ ನೋಡಿ.