ವಾರ್ತಾ ಮಂಜರಿ
Trending Stories, Viral News, Gossips & Everything in Kannada

Kantara: ಕಾಂತಾರ ಸಿನೆಮಾಗೆ ರಿಷಬ್ ಬಳಿ ಕಿಶೋರ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ…ತಲೆ ತಿರ್ಗೋದು ಪಕ್ಕಾ

102,482

ಅದೊಂದು ಕಾಲದಲ್ಲಿ ತಮ್ಮ ಅದ್ಭುತ ಕಂಠದ ಮೂಲಕ ಅದೆಷ್ಟೋ ಸಿನಿಮಾಗಳಲ್ಲಿ ಗುಡುಗಿದಂತಹ ನಟ ಕಿಶೋರ್ ಅವಕಾಶಗಳ ಕೊರತೆಯಿಂದಾಗಿ ಸಿನಿಮಾ ರಂಗವನ್ನು ತೊರೆದು ಗದ್ದೆಗೆ ಇಳಿದು ವ್ಯವಸಾಯ ಮಾಡಲು ಪ್ರಾರಂಭಿಸಿದರು.ಇದೀಗ ಮತ್ತೊಮ್ಮೆ ಕಾಂತಾರ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಂಬ್ಯಾಕ್ ಮಾಡಿದ್ದಾರೆ ಎನ್ನಬಹುದು.ಕಿಶೋರ್ ಈ ಸಿನಿಮಾದಲ್ಲಿ ನಟಿಸಲು ಪಡೆದಿರುವ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾ ಮುಂದೆ ಓದಿ.

ಕನ್ನಡ ಸಿನಿಮಾದ ಕಡಕ್ ನಟ ಎಂದೊಡನೆ ನೆನಪಿಗೆ ಬರುವುದು ಕಿಶೋರ್. ಇವರು ಮೂಲತಃ ರಾಮನಗರದ ಚನ್ನಪಟ್ಟಣ ಜಿಲ್ಲೆಯವರು. ಚಿಕ್ಕಂದಿನಿಂದಲೂ ನಟನೆಯ ಮೇಲೆ ಬಹಳ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.
ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಪದವಿ ಪಡೆದು ನಾಟಕ ತರಬೇತಿ ಪಡೆಯಬೇಕೆಂದು ಕಂಪನಿಯೊಂದಕ್ಕೆ ಸೇರಿಕೊಳ್ಳುತ್ತಾರೆ. ಹೀಗೆ ರಂಗಭೂಮಿಯ ಮೂಲಕ ನಟನೆಯ ಕುರಿತು ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡು ಬಳಿಕ ಅವಕಾಶಕ್ಕಾಗಿ ಹುಡುಕಾಡುತ್ತಿದ್ದ ಸಂದರ್ಭ ಕಿಶೋರ್ ಅವರಿಗೆ ಸೂಕ್ತವಾದ ಆಫರ್ ಸಿಗದ ಕಾರಣ ಶಿಕ್ಷಕನಾಗಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದರು.Kantara' is a realistic, rooted story albeit with elements of fantasy that  I have personally felt: Rishab Shetty | Kannada Movie News - Times of India

ನಂತರ 2004 ರಲ್ಲಿ ಮುರಳಿ ಅವರ ಕಂಠಿ ಸಿನಿಮಾದ ಮೂಲಕ ಪ್ರಥಮ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ.ಕಂಠಿ ಸಿನಿಮಾದಲ್ಲಿ ಇವರ ಅತ್ಯದ್ಭುತ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ದೊರಕಿದ ಬೆನ್ನೆಲ್ಲೇ ಪುನೀತ್ ರಾಜಕುಮಾರ್ ಅವರೊಡನೆ ಆಕಾಶ್, ಡೆಡ್ಲಿಸೋಮ, ಕ್ಷಣಕ್ಷಣ, ದುನಿಯಾ, ಇಂತಿ ನಿನ್ನ ಪ್ರೀತಿಯ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದರು.

ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದುಕೊಂಡು ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಉಪನ್ಯಾಸ ಮಾಡುವವುದರ ಜೊತೆಗೆ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡಿದರು.ಇವರು ಕಾಲೇಜ್‌ ಥಿಯೇಟರ್‌ಗಳಲ್ಲಿ ನಾಟಕ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಕನ್ನಡದ ‘ಕಂಠಿ’ ಸಿನಿಮಾ ಆರಂಭವಾಗಿತ್ತು. ಅಲ್ಲಿದ್ದ ಇವರ ಸ್ನೇಹಿತನ ಕಡೆಯಿಂದ ಇವರಿಗೆ ಆಕಸ್ಮಿಕವಾಗಿ ಆಕ್ಟ್ ಮಾಡಲು ಅವಕಾಶ ಸಿಕ್ತು. ಅಂದಿನಿಂದ ಇವರ ಸಿನಿಮಾ ಜೀವನ ಮುಂದುವರೆಯಿತು. ಹೀಗೆ ಇವರು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಇವರು ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಂತರ ಅಲ್ಲು ಅರ್ಜುನ್ ಅವರೊಡನೆ ಹ್ಯಾಪಿ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುವ ಮೂಲಕ ಟಾಲಿವುಡ್ ಮಂದಿಯ ಮನಸ್ಸನ್ನು ಕೂಡಾ ಗೆದ್ದರು.ನಾಯಕ ನಟನಾಗಿ, ಖಳನಟನಾಗಿ, ಪೋಷಕ ನಟನಾಗಿ ಬಹಳಷ್ಟು ಪ್ರಖ್ಯಾತಿ ಪಡೆದಂತಹ ನಟ ಕಿಶೋರ್ ಅವಕಾಶಗಳ ಕೊರತೆ ಉಂಟಾಯಿತು.

ನಂತರ ಮತ್ತೇ ಮರಳಿ ವ್ಯವಸಾಯ ಮಾಡುವ ಮೂಲಕ ಗದ್ದೆಯಲ್ಲಿ ಬೆವರು ಸುರಿಸಿ ಸಂತಸದ ಬದುಕನ್ನು ನಡೆಸುತ್ತಿದ್ದರು. ಇದೀಗ ಮತ್ತೆ ರಿಷಬ್ ಶೆಟ್ಟಿ ಅವರ ಒತ್ತಾಯದ ಮೇರೆಗೆ ಕಾಂತಾರ ಸಿನಿಮಾದ ಖಡಕ್ ಅರಣ್ಯ ಅಧಿಕಾರಿ ಆಗಿ ಕಾಣಿಸಿಕೊಂಡಂತಹ ಕಿಶೋರ್ ವಿಮರ್ಶಕರಿಂದ ಮೆಚ್ಚುಗೆ ಒಳಗಾಗಿದ್ದಾರೆ.
ಅಷ್ಟೇ ಅಲ್ಲದೆ ಇವರ ಅಭೂತಪೂರ್ವ ಅಭಿನಯಕ್ಕೆ ಕನ್ನಡಿಗರು ಬಹುಪರಾಕ್ ಹಾಕುತ್ತಿದ್ದು, ಈ ಒಂದು ಸಿನಿಮಾದಲ್ಲಿ ಅಭಿನಯಿಸಲು 20 ಲಕ್ಷ ಸಂಭಾವನೆಯನ್ನು ಪಡೆದಿರುವ ಬಗ್ಗೆ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.