ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಅಪರೂಪದ ಪಾರಿವಾಳ ಹಿಡಿಯಲು ಈತ ಮಾಡಿದ ಉಪಾಯ ನೋಡಿ…ವಿಡಿಯೋ

3,010

ನಿರ್ಮಲವಾದಂತಹ ವಾತಾವರಣ, ಸ್ವಚ್ಛಂಧವಾದ ಪರಿಸರ, ಎಲ್ಲಿ ನೋಡಿದರು ಹಸಿರು ಮರಗಳ ತೋಪುಗಳು, ಅಲ್ಲಲ್ಲಿ ಕಾಣುವ ಹಳ್ಳ ಕೊಳ್ಳಗಳು, ನಗರದ ಗೌಜುಗದ್ದಲಗಳ ಗೈರು, ಇವೆಲ್ಲವುದರ ನಡುವೆ ಚಿಲಿಪಿಲಿ ಎಂದು ಇಂಪಾಗಿ ಗುಂಯ್ ಎಂದು ಗುಡುತ್ತಿರುವ ವಿವಿಧ ಬಣ್ಣ ಚಿತ್ತಾರಗಳ ಹಲವು ಹಕ್ಕಿಗಳ ಸಹಜವಾದ ಹಾರಾಟ, ಇಷ್ಟು ಸಾಕಲ್ಲವೇ? ಬಳಲಿ ಬೆಂಡಾದ ಮನಕೆ ನೆಮ್ಮದಿಯ, ಆನಂದದ ಅನುಭವ ಕರುಣಿಸಲು.

ಹೌದು, ಸಾಕಷ್ಟು ಜನರು ವಿರಾಮದ ಕಾಲದಲ್ಲಿ ಬಗೆ ಬಗೆಯ ಹಕ್ಕಿಗಳನ್ನು ನೋಡುವುದು, ಫೋಟೋ ಕ್ಲಿಕ್ಕಿಸಿ ಅವುಗಳನ್ನು ಸೆರೆ ಹಿಡಿಯುವುದು ಒಂದು ರೀತಿಯಾ ಉಲ್ಲಸಾದ ಅನುಭವವನ್ನು ತಂದು ಕೊಡುತ್ತದೆ.ಈ ಆಧುನಿಕ ಕಾಲದಲ್ಲಿ ಮನೆಯಲ್ಲಿ ಪ್ರಾಣಿಪಕ್ಷಿಗಳನ್ನು ಸಾಕುವುದು ಟ್ರೆಂಡ್‌ ಆಗಿ ಬಿಟ್ಟಿದೆ.

ಅವುಗಳೊಂದಿಗಿನ ಒಡನಾಟ ಮನಸ್ಸಿಗೆ ಸಂತೋಷತರುವಂತದ್ದಾಗಿದ್ದರೂ ಅವುಗಳ ಆರೈಕೆಯಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಸಗಿರುತ್ತದೆ. ಅವುಗಳು ಸಹ ಜೀವಿಯಾಗಿರುವುದರಿಂದ ಬೇಸರವಾಗದ ರೀತಿಯಲ್ಲಿ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಹಿಂದಿನ ಕಾಲದಲ್ಲಿ ಈ ಪ್ರಾಣಿ, ಪಕ್ಷಗಳನ್ನು ಕೇವಲ ಗ್ರಾಮೀಣ ಭಾಗಗಳಲ್ಲಿಸಾಕುವುದು ಸೀಮಿತವಾಗಿತ್ತು. ಆದರೆ ಇದೀಗ ನಗರದ ಮಂದಿಯಲ್ಲಿ ಫ್ಯಾಶನ್‌ ಆಗಿ ಬೆಳೆಯುತ್ತಿದೆ. ಅದರಲ್ಲೂ ನಾಯಿ, ಬೆಕ್ಕು, ಹಕ್ಕಿಗಳನ್ನು ಸಾಕುವುದಕ್ಕೆ ಜನ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರಂತೆ ಕಾಣುವುದರಿಂದ ಇವುಗಳೂ ನಮಗೆ ತುಂಬಾ ಹತ್ತಿರವಾಗಿ ಬಿಟ್ಟಿವೆ. ಇದೀಗ ಪಾರಿವಾಳ ಹುಯ್ಯಡಿಯಲು ಇಂಥ ಮಾಡಿದ ಸ್ಕೆಚ್ ನೋಡಿ.