ಭಾರತೀಯ ಆಡುಗೆಗಳಲ್ಲಿ ಕರಿಬೇವಿನ ಸೊಪ್ಪಿಗೆ ಪ್ರಮುಖ ಸ್ಥಾನವನ್ನು. ಈ ಕರಿ ಬೇವು ಸೊಪ್ಪು ಇಲ್ಲದೇ ಭಾರತೀಯ ಅಡುಗೆ ಮನೆಯನ್ನು ಊಹಿಸುವುದು ಸ್ವಲ್ಪ ಕಷ್ಟವೇ. ಒಗ್ಗರಣೆಯ ಘಮ ಬರಬೇಕಾದರೆ ಎಣ್ಣೆ, ಸಾಸಿವೆ, ಬೆಳ್ಳುಳ್ಳಿಯ ಜೊತೆಗೆ ಕರಿಬೇವು ಅತ್ಯಗತ್ಯ. ಕರಿಬೇವು ಇಲ್ಲದೆ ಮಾಡಿದ ಅಡುಗೆ ರುಚಿಹೀನ ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ಕರಿಬೇವು ಎಲ್ಲರಿಗೂ ಚಿರಪರಿಚಿತ. ಗಾಢ ಹಸಿರು ಬಣ್ಣಗಳಿಂದ ಕೂಡಿರುವ ಈ ಕರಿಬೇವಿನ ಎಲೆ ಸಣ್ಣದಾಗಿರುತ್ತದೆ. ಎಲ್ಲರ ಮನೆಯ ಹಿತ್ತಲಲ್ಲಿ ಈ ಕರಿಬೇವಿನ ಗಿಡ ಇದ್ದೆ ಇರುತ್ತದೆ. ಎಲ್ಲರಿಗೂ ಚಿರಪರಿಚಿತವಾಗಿರುವ ಕರಿಬೇವಿನ ಎಲೆಗಳು ಲಿನೂಲ್, ಆಲ್ಫಾ-ಟೆರ್ಪಿನೆನ್, ಮೈರ್ಸೀನ್, ಮಹಾನಿಂಬೈನ್, ಕ್ಯಾರಿಯೊಫಿಲೀನ್, ಮುರಾಯನಾಲ್, ಮತ್ತು ಆಲ್ಫಾ-ಪಿನೆನ್ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ ಎಂಬುದು ಸಂಶೋಧನೆ ತಿಳಿದಿದೆ. ಈ ಕರಿಬೇವು ಅಡುಗೆಗೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಸೌಂಧರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಅಷ್ಟೇ ಅಲ್ಲದೇ, ಕರಿಬೇವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ಇದರಲ್ಲಿ ಔಷಧೀಯ ಗುಣಳು ಅಧಿಕವಾಗಿರುತ್ತದೆ. ಹೀಗಾಗಿ ಅನೇಕ ರೀತಿಯ ರೋಗಗಳನ್ನು ದೂರವಾಗಿಸುವಲ್ಲಿ ಈ ಕರಿಬೇವಿನ ಸೊಪ್ಪು ಮಹತ್ವಪೂರ್ಣ ಪಾತ್ರವಹಿಸುತ್ತದೆ.
- ಪ್ರತಿದಿನ ಕರಿಬೇವಿನ ಸೊಪ್ಪಿನ ಚಟ್ಟಿ ಮಾಡಿಕೊಂಡು ಊಟದೊಂದಿಗೆ ತಿನ್ನುತ್ತಿದ್ದರೆ ಸ್ಕೂಲಕಾಯದವರ ತೂಕ ಕಡಿಮೆಯಾಗುವುದು.
- ಕರಿಬೇವಿನ ಹಸಿ ಎಲೆಗಳನ್ನು ಸುಮಾರು ಮೂರು ತಿಂಗಳ ಕಾಲದವರೆಗೆ ತಿ೦ದರೆ ಮಧುಮೇಹ ರೋಗ ಗುಣವಾಗುತ್ತದೆ.
- ಕರಿಬೇವಿನ ಸೊಪ್ಪನ್ನು ಹುರಿದು ಪುಡಿ ಮಾಡಿಕೊಂಡು ಊಟವಾದ ನಂತರ ತಿಂದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು.
- ಕರಿಬೇವಿನ ಚಿಗುರು ಎಲೆಗಳನ್ನು ಜೇನುತುಪ್ಪದೊಂದಿಗೆ ಅಗಿದು ತಿಂದರೆ ಅತಿಸಾರ, ಆಮಶಂಕೆ ಮತ್ತು ಮೂಲ ವ್ಯಾಧಿ ರೋಗಗಳು ಶೀಘ್ರವಾಗಿ ಗುಣವಾಗುವುದು.
- ಕರಿಬೇವಿನ ಎಲೆಗಳನ್ನು ಒಣಗಿಸಿ ಆಗಾಗ ತಿನ್ನುತ್ತಿದ್ದರೆ ಬಾಯಿ ದುರ್ನಾತ ದೂರವಾಗುವುದು.
- ಕರಿಬೇವಿನ ಸೊಪ್ಪನ್ನು ಅರೆದು ನೀರಿನೊಂದಿಗೆ ಬೆರೆಸಿ ಕುಡಿಯುತ್ತಿದ್ದರೆ ಪಿತ್ತ ನಿವಾರಣೆಯಾಗುವುದು.