ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕಾಲೇಜು ಹುಡುಗರ ವಿಚಿತ್ರ ಡಾನ್ಸ್…ಚಿಂದಿ ವಿಡಿಯೋ

2,673

ನೆನಪುಗಳು(Memories) ಅಂದರೇನೆ ಹಾಗೆ. ಮನಸ್ಸಿಗೆ ಖುಷಿ(Pleasant to mind)ನೀಡುವಂತಹ ಅನೇಕ ನೆನಪುಗಳು ಒಂದು ಕಡೆಯಾದರೆ ಮನಸ್ಸಿನಿಂದ ಮಾಸಿ ಹೋಗಬೇಕೆನಿಸುವ ನೆನಪುಗಳು ಇನ್ನೊಂದು ಕಡೆ. ಕಾಲೇಜು ಜೀವನ (College Life) ಎನ್ನುವುದು ಸವಿನೆನಪುಗಳ (Sweet Memories) ಬುತ್ತಿ ಅಂತಾನೆ ಹೇಳಬಹುದು ಅಲ್ವೆ? ನಾವು ಮಾಡಿದ ತುಂಟಾಟ ಚೇಷ್ಟೆಗಳು ಗೊತ್ತಿಲ್ಲದೆ ಮಾಡಿರುವ ಅವಾಂತರಗಳು ಇವೆಲ್ಲವೂ ಆ ಬುತ್ತಿಯೊಳಗೆ ಸೇರಿಕೊಂಡು ಸುಮ್ಮನೆ ಮೆಲುಕು ಹಾಕಿಕೊಂಡು ಕೂರುವಾಗ ನಮಗೆ ನಗೆಯ ರಸದೂಟವನ್ನು ಬಡಿಸುತ್ತದೆ.

ಗೆಳೆತನ(Friendship) ಎಂಬುದು ಕೇವಲ ಒಂದು ಪದವಲ್ಲ ಈ ಸ್ನೇಹ ಜೀವನದಲ್ಲಿ ಅದ್ಭುತ ಭಾವನೆಗಳನ್ನು ಹೊಂದಿರುವ ಜಗತ್ತು. ಹೌದು ಅಲ್ಲಿರುವುದು ನಿಷ್ಕಲ್ಮಶ ಸ್ನೇಹ(Immaculate friendship).ಆಟ ಪಾಠಗಳ ಜೊತೆಗೆ ನನ್ನ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ ಸಮಸ್ಯೆಗಳನ್ನು ಎದುರಿಸಲು ಬೆನ್ನು ತಟ್ಟುವ ನಲ್ಮೆಯ ಸ್ನೇಹಿತರು. ಹೌದು ಕಾಲೇಜಿನಲ್ಲಿ ಸ್ನೇಹಿತರ ಜೊತೆ ಕಳೆದ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ.

ಎಲ್ಲಿಂದಲೋ ಬಂದ ನಾವೆಲ್ಲರೂ ಒಂದೇ ಕುಟುಂಬದವರಾಗುತ್ತಾರೆ. ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಪಟ್ಟಾಂಗ ಹಾಕುತ್ತಾ ತಮಾಷೆ ನಗು ಕಿರುಚಾಟ ಇವೆಲ್ಲದರ ನಡುವೆ ಕೆಲವೊಂದು ವಿಷಯದಲ್ಲಿ ಜಗಳವೂ ನಡಿತ್ತವೆ. ಪದವಿಯ ಮೂರು ವರ್ಷಗಳಲ್ಲಿ ಅದೆಷ್ಟೋ ಸಿಹಿ-ಕಹಿ ನೆನಪುಗಳು ಇರುತ್ತವೆ. ಕಹಿಗಿಂತ ಹೆಚ್ಚು ಸಿಹಿ ನೆನಪುಗಳೇ ಹೇರಳವಾಗಿರುತ್ತದೆ. ಒಂದಷ್ಟು ಮರೆಯಲಾಗದಷ್ಟು ವಿಷಯಗಳು ಇರುತ್ತವೆ.ಆದರೆ ಇನ್ನು ಅವೆಲ್ಲವೂ ಈಗ ಕೆಲವರಿಗೆ ನೆನಪುಗಳು ಮಾತ್ರ.

ಮೊದ ಮೊದಲು ಪದವಿ ಪಡೆಯಲು ಕಾಲೇಜಿಗೆ ಸೇರಿದಾಗ ಯಾವಾಗಲಾದರೂ ಮುಗಿಯಿತೋ ಈ ಕಾಲೇಜು ಜೀವನ ಎಂದು ಅನಿಸುತಿತ್ತು. ಆದರೆ ದಿನ ಉರುಳಿ ವರ್ಷಗಳು ಕಳೆದು ಅಂತಿಮ ವರ್ಷದ ಪದವಿಗೆ ಬಂದಾಗ ಯಾಕಪ್ಪ ಇಷ್ಟು ಬೇಗ ಕಾಲೇಜು ಜೀವನ ಮುಗಿಯಿತು ಎಂದೆನಿಸುತ್ತದೆ ಯಾಕೆಂದರೆ ಕಾಲೇಜು ಕೇವಲ ನಮಗೆ ವಿದ್ಯೆ ಕಲಿಸುವ ವಿದ್ಯಾಮಂದಿರವಲ್ಲ. ಅದು ವಿದ್ಯಾರ್ಥಿಗಳಲ್ಲಿ ಸ್ನೇಹ ಪ್ರೀತಿ ಬಾಂಧವ್ಯದ ಜೀವನವನ್ನು ರೂಪಿಸುವ ಒಂದು ಭವ್ಯ ಮಂದಿರ ಎಂದರೂ ತಪ್ಪಾಗಲಾರದು. ಸದ್ಯ ಕಾಲೇಜು ದಿನ ನೆನಪಿಸುವ ವಿಡಿಯೋವೊಂದು ವೈರಲ್ ಆಗುತ್ತಿದ್ದು GPUC ಬಿಳಿಕರೆ ವಿದ್ಯಾರ್ಥಿಗಳು ಕಾಲೇಜ್ ಫಂಕ್ಷನ್ ನಲ್ಲಿ ನೃತ್ಯ ಮಾಡಿ ಹೇಗೆ ನಕ್ಕು ನಲಿಸಿದ್ದಾರೆ ನೀವೆ ನೋಡಿ. ಈ ವಿಡಿಯೋ ನೋಡುತ್ತಿದ್ದರೆ ಖಂಡಿತ ಕಾಲೇಜ್ ದಿನದ ನೆನಪುಗಳು ಮರುಕಳಿಸುತ್ತವೆ.