ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಕ್ಕಮ್ಮ ಹಾಡಿಗೆ ವಿಚಿತ್ರ ಡ್ಯಾನ್ಸ್ ಮಾಡಿದ ಕಾಲೇಜು ಹುಡುಗರು..ಚಿಂದಿ ವಿಡಿಯೋ

17,481

ಹದಿಹರೆಯದ ವಯಸ್ಸನ್ನ ಹುಚ್ಚು ಕುದುರೆಯ ಮನಸ್ಸು ಅಂತಾರೆ. ಹೌದು ವಿದ್ಯಾರ್ಥಿ(Students) ಜೀವನದ ಮರೆಯಲಾಗದ ಘಟ್ಟ (Unforgettable moment) ಈ ಕಾಲೇಜ್ ಲೈಫ್(College Life). ಹೊಸ ಪರಿಸರ (Environment) ಹದಿಹರೆಯದ ವಯಸ್ಸಿನ ಮುಗ್ಧ ಮನಸುಗಳು ಅಂದ-ಚಂದದ ಮುದ್ದು ಮುಖಗಳು ಎಲ್ಲಾ ತೀರಾ ಹೊಸತು ಎಂಬ ಭಾವನೆ ಈ ಕಾಲೇಜು ಜೀವನದ ಆರಂಭದ ದಿನಗಳ ಸವಿ ನೆನಪುಗಳು(Sweet Memories).

ಹೌದು ಹೇಳಿ ಕೇಳಿ ಇದು ಅಸಲಿ ಟೀನೇಜ್‍ n (Teenage) ಕಥೆ. ಮುಗ್ಧವಾಗಿ ಆರಂಭವಾಗುವ ಸ್ನೇಹ ಪ್ರೀತಿಯೆಂಬ ಅನುಬಂಧದತ್ತ ಬೆಸೆದುಕೊಳ್ಳುವ ಸಮಯವೂ ಹೌದು. ಉತ್ತರ ಸಿಗದ ಹಲವು ಪ್ರಶ್ನೆಗಳು ಕಾಡುವ ವಯಸ್ಸೂ ಹೌದು.

ಎಸ್ಸೆಸ್ಸೆಲ್ಸಿ(SSLC) ಪಾಸಾದ ನಂತರ ನಾನು ಕಾಲೇಜಿಗೆ (College) ಹೋಗುತ್ತಿದ್ದೇನೆ ಎಂಬ ಒಣಜಂಭ ಬೇರೆ ಮನಸ್ಸಿಗಂಟಿಬಿಟ್ಟಿರುತ್ತದೆ. ಅದುವರೆಗೆ ಇದ್ದ ಹೋಂ ವರ್ಕ್ಸ್(Home Work) ಅಸೈನ್‍ಮೆಂಟ್ಸ್(Assignments) ಪನಿಶ್‍ಮೆಂಟ್‍ಗಳಿಂದ(Punishment) ಮುಕ್ತಿ ದೊರಕಿ ಶಿಕ್ಷಕರ ಕಾಟದಿಂದ ದೂರ ಬಂದೆ ಎಂಬ ತೃಪ್ತಿ ಬೇರೆ.

ಭಾರವಾದ ದೊಡ್ಡ ಸ್ಕೂಲ್ ಬ್ಯಾಗ್‍ಗೆ ಟಾಟಾ ಬೈ ಬೈ ಹೇಳಿ ಬಿಡಿ ಪುಸ್ತಕಗಳ ಕೈ ಹಿಡಿದು ಫಾರ್ಮಲ್ ಬಟ್ಟೆಗೆ ಕೈ ಕೊಟ್ಟು ಸ್ವಲ್ಪ ಕ್ಯಾಶುವಲ್ ಆಗಿ ಬದಲಾಗಿ ಪಕ್ಕಾ ಕಾಲೇಜ್ ಲೈಫ್‍ಗೆಂದೇ ಬದಲಾದ ನೆನಪು ನಿಜಕ್ಕೂ ಮಧುರ.
ಹೇಳಿ ಕೇಳಿ ಕಾಲೇಜು ಜೀವನದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇದ್ದೇ ಇರುತ್ತದೆ. ಹೌದು ಕೆಲವೊಂದು ನಿರೀಕ್ಷೆಗಳು ಹುಸಿಯದರೂ ಎಂಜಾಯ್‍ಮೆಂಟ್‍ಗೆ(Enjoyent) ಕೊರತೆಯೇ ಇಲ್ಲ. ಅದುವರೆಗೆ ಸ್ಕೂಲ್‍ನಲ್ಲಿ ಬರುತ್ತಿದ್ದ ಶಿಕ್ಷಕರ ಬದಲು ಲೆಕ್ಚರರ್ಸ್ ಬಂದು ಗಂಟೆಗಟ್ಟಲೆ ಮಾಡುವ ಉಪನ್ಯಾಸಕ್ಕೆ ಆರಂಭದ ದಿನಗಳಲ್ಲಿ ಅಡ್ಜಸ್ಟ್ ಆಗೋದೇ ಕಷ್ಟ.

ಅದರಲ್ಲೂ ಥಿಯರಿ ಕ್ಲಾಸ್‍ಗಳಲ್ಲಂತೂ ನಿದ್ದೆಯೋ ನಿದ್ದೆ. ಕೆಲವೊಂದು ತರಗತಿಗಳಲ್ಲಿ ಕುಳಿತಲ್ಲಿಯೇ ಸುಖಾಸುಮ್ಮನೆ ಮಾತನಾಡುತ್ತಾ ಒಬ್ಬರಿಗೊಬ್ಬರು ಕೀಟಲೆ ಮಾಡುತ್ತಾ ನಗುತ್ತಾ-ನಗಿಸುತ್ತಾ ಲೆಕ್ಚರರ್ಸ್ ಮೇಲೇ ರಾಕೆಟ್ ಹಾರಿಸಿದ ಕೆಲದಿನಗಳು ಇಂದಿಗೂ ಹುಚ್ಚೆಬ್ಬಿಸಿ ನಗಿಸುತ್ತದೆ. ಈ ಕಾಲೇಜು ಜೀವನದಲ್ಲಿ ಹಬ್ಬುವ ಅತಿ ದೊಡ್ಡ ಸಾಂಕ್ರಾಮಿಕ ರೋಗ ಅಂದ್ರೆ ಅದೇ ಕ್ಲಾಸ್ ಬಂಕ್.

ಹೌದು ಸಿಲ್ಲೀ ನೆಪ ಹೇಳಿ ತರಗತಿ ತಪ್ಪಿಸಿಕೊಂಡು ಮತ್ತೆ ಉಪನ್ಯಾಸಕರ ಮುಂದೆ ಬಂದು ತಲೆ ತಗ್ಗಿಸಿ ನಿಂತು ಬೈಗುಳ ತಿಂದಿರುವುದು ಆ ಕ್ಷಣದಲ್ಲಿ ಅಳಿಸಿದ್ದರೂ ಈ ಕ್ಷಣ ಮಾತ್ರ ಬಿದ್ದೂ ಬಿದ್ದೂ ನಗಬೇಕೆನಿಸುತ್ತದೆ. ಊರ ಜಾತ್ರೆ ಸ್ನೇಹಿತರ ಮನೆಯ ಕಾರ್ಯಕ್ರಮ ಅಥವಾ ಪಾರ್ಟಿ ಇದ್ದರಂತೂ ಕೇಳೋದೇ ಬೇಡ. ಮಾಸ್ ಬಂಕ್ ಹೊಡೆದುಚಾಲಿಪೋಲಿಗಳಂತೆ ಜಾಲಿ ಮಾಡಿ ಕಿಸೆ ಖಾಲಿ ಮಾಡೋ ಚಾಳಿಯಂತೂ ಇದ್ದೇ ಇದೆ.

ಈ ವಯಸಿನಲ್ಲಿ ಮಾಡೋ ಬಲುದೊಡ್ಡ ಪಿಎಚ್‍ಡಿ ವಿಷಯವೇ ಪ್ರೀತಿ-ಸ್ನೆಹಕ್ಕೆ ಅರ್ಥ ಕಂಡುಕೊಳ್ಳುವ ಪ್ರಯತ್ನ. ಮಗ್ಧ ಮನಗಳ ಬಲು ದೊಡ್ಡ ಗೊಂದಲಕ್ಕೆ ಈ ಪ್ರೀತಿ- ಪ್ರೇಮ ಕಾರಣವಾಗಿಬಿಡುತ್ತದೆ. ಸದ್ಯ ಇದೀಗ ಕಾಲೇಜ್ ಲೈಫ್ ಬಗ್ಗೆ ಮಾತನಾಡಲು ಕಾರಣವಿದೆ. ಹೌದು ಸಾಮಾಜಿಕ ಜಾಲತಾಣದಲ್ಲಿ ಕಾಲೇಜ್ ಡೇ ದಿನ ವಿದ್ಯಾರ್ಥಿಗಳು ಫನ್ನಿ ಡ್ರಸ್ ತೊಟ್ಟು ನೃತ್ಯ ಮಾಡಿದ್ದು ಒಮ್ಮೆ ಈ ವಿಡಿಯೋ ನೋಡಿ ನಿಮಗೂ ಕಾಲೇಜು ದಿನ ನೆನಪಾಗುತ್ತದೆ.