ನಟ ಗಣೇಶ್ ರವರು ಜೀವನದುದ್ದಕ್ಕೂ ಕೂಡ ಒಂದೇ ಒಂದು ಕಪ್ಪು ಮಸಿ ಬಳಿಸಿಕೊಳ್ಳದೆ ಹೇಳಿಕೊಳ್ಳುವಂತಹ ಕಾಂಟ್ರೋವರ್ಸಿ ಗಳಿಲ್ಲದೇ ತಮ್ಮ ಪಾಡಿಗೆ ತಾವು ವೃತ್ತಿಜೀವನದ ಕಡೆಗೆ ಗಮನ ಹರಿಸಿದವರಾಗಿದ್ದರು ಎನ್ನಬಹುದು. ಆದರೆ ಅವರ ಬದುಕಿನ ಬಹು ದೊಡ್ಡ ವಿವಾದ ಯಾವುದು ಎಂದರೆ ಅವರ ಮದುವೆಯ ಕಾಂಟ್ರವರ್ಸಿ. ಕಾಮಿಡಿ ಟೈಮ್ ಮೂಲಕ ಇಡೀ ಕರ್ನಾಟಕಕ್ಕೆ ಪರಿಚಯವಾದ ನಟ ಎಂದರೆ ಗೋಲ್ಡನ್ ಸ್ಟಾರ್ ಗಣೇಶ್.
ಮೊದಲು ಚೆಲ್ಲಾಟ ಸಿನಿಮಾದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ಗಣೇಶ್ ಮುಂಗಾರು ಮಳೆ ಚಿತ್ರದ ಮೂಲಕ ಇಡೀ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸುವುದರ ಜೊತೆಗೆ ಜನಪ್ರಿಯ ನಟರಾಗುತ್ತಾರೆ. ಆ ಸಮಯದಲ್ಲಿ ಬರೋಬ್ಬರಿ ೭೫ ಕೋಟಿ ಸಂಪಾದನೆ ಮಾಡಿದಂತಹ ಸಿನಿಮಾ ಮುಂಗಾರು ಮಳೆಯಾಗಿದ್ದು ವರ್ಷಾನುಗಟ್ಟಲೆ ಸಿನಿಮಾ ಚಿತ್ರಮಂದಿರಗಳಲ್ಲಿ ಓಡುತ್ತದೆ.
ಅಲ್ಲದೆ ಯೋಗರಾಜ್ ಭಟ್ ಹಾಗೂ ಗಣೇಶ್ ಅವರಿಗೆ ಹೊಸಜೀವಾ ತಂದುಕೊಟ್ಟ ಸಿನಿಮಾ ಮುಂಗಾರು ಮಳೆ ಎಂದು ಹೇಳಿದರೆ ತಪ್ಪಾಗಲಾರದು. ಮುಂಗಾರು ಮಳೆ ಸಿನಿಮಾದ ನಂತರ ಕನ್ನಡ ಚಿತ್ರರಂಗದಲ್ಲಿ ಗಣೇಶ್ ರವರು ದೊಡ್ಡ ನಟರಾಗಿ ಬೆಳೆದು ನಿಂತು ಬಿಟ್ಟಿದ್ದು ಲಕ್ಷಾಂತರ ಅಭಿಮಾನಿಗಳು ಕೂಡ ಹುಟ್ಟಿಕೊಳ್ಳುತ್ತಾರೆ.
ಮುಂಗಾರು ಮಳೆ ಸಿನಿಮಾದ ನಂತರ ಹುಡುಗಾಟ ಚೆಲುವಿನ ಚಿತ್ತಾರ ಗಾಳಿಪಟ ಹೀಗೆ ಸಾಕಷ್ಟು ಸಿನಿಮಾಗಳು ಸೂಪರ್ ಯಶಸ್ವಿ ಕಂಡಿದ್ದು ಸಾಲು ಸಾಲು ಸಿನಿಮಾಗಳಲ್ಲಿ ಗಣೇಶ್ ನಿರತರಾಗುತ್ತಾರೆ.ಸದ್ಯ ಇದೀಗ ನಟ ಗಣೇಶ್ ಪತ್ನಿ ಶಿಲ್ಪಿ ಹಾಗು ಅಮೂಲ್ಯ ಮಾತಾಡುತ್ತಿರುವ ವಿಡಿಯೋ ವೈರಲ್ ಆಗಿದೆ.