ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದಶಕದಿಂದ ಕನ್ನಡ ಚಿತ್ರರಂಗದಲ್ಲಿ ನಿರತರಾಗಿದ್ದು ಸ್ಯಾಂಡಲ್ವುಡ್ ಅಂಗಳದಲ್ಲಿ ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಹೆಚ್ಚು ಗುರುತಿಸಿಕೊಂಡ ನಟಿಯಾಗಿದ್ದಾರೆ ಹಾಗೂ ಪಡ್ಡೆ ಹುಡುಗರ ಪಟ್ಟದರಸಿಯಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಟಾಪ್ ಒಂದರ ಸ್ಥಾನದಲ್ಲಿ ಉಳಿದಿರುವ ರಚಿತಾರಾಮ್ ಈಗಲೂ ಸಹ ಹೆಚ್ಚು ಸಿನಿಮಾಗಳಲ್ಲಿ ಬಿಜಿ ಇದ್ದು ಇದೆ ವರ್ಷ ತೆಲುಗು ಚಿತ್ರ ಒಂದರಲ್ಲೂ ಕೂಡ ನಟಿ ರಚ್ಚು ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅಲ್ಲದೇ ಮುಂದಿನ ವರ್ಷ ತಮಿಳು ಚಿತ್ರ ಒಂದರಲ್ಲಿ ಕಾಣಿಸಲಿರುವ ರಚ್ಚು ಹೆಚ್ಚು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ ಎನ್ನಬಹುದು.ಅಂದಹಾಗೆ,ಗುಳಿ ಕೆನ್ನೆಯ ಚೆಲುವೆ ರಚಿತಾ ರಾಮ್,ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ನಟಿ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ರಚಿತಾ ರಾಮ್ ಅವರ ನಟನೆಗೆ ಫಿದಾ ಆಗದವರು ಯಾರು ಇಲ್ಲ. ಇದೀಗ ಸದ್ಯ ಅವರು ತೆಲುಗು ಮಾತಾಡಿದ ವಿಡಿಯೋ ನೋಡಿ.