ಇತ್ತೀಚಿನ ದಿನಗಳಲ್ಲಿ ರಾಷ್ಟ್ರಾದ್ಯಂತ ಸಾರ್ವಜನಿಕರಿಗೆ ಭಯ ಭೀತಿ ತಂದಿರುವ ವಿಚಾರಗಳೇ ನೆಂದರೆ ಅರಣ್ಯದ ಪ್ರಾಣಿಗಳು ನಗರಗಳಿಗೆ ಧಾವಿಸುತ್ತಿರುವುದು. ಹೌದು ಹುಲಿ, ಸಿಂಹ, ಚಿರತೆ, ಆನೆ ಸೇರಿದಂತೆ ಸಾಕಷ್ಟು ಪ್ರಾಣಿಗಳು ಇದೀಗ ನಾಡಿನತ್ತ ಮುಖ ಮಾಡುತ್ತಿದ್ದು, ತಮಗೆ ಸಿಕ್ಕ ಸಾಕು ಪ್ರಾಣಿಗಳನ್ನು ಬೇಟೆಯಾಡಿ ಕೊಂಡೊಯ್ಯುತ್ತಿವೆ.
ಹೌದು ಈಗಾಗಲೇ ಈ ರೀತಿಯಾದಂತಹ ಅನೇಕ ಘಟನೆಗಳು ಇಡೀ ರಾಷ್ಟ್ರಾದ್ಯಂತ ನಡೆದಿದ್ದು, ಆನೆಗಳು ರೈತರ ಹೊಲ, ತೋಟಕ್ಕೆ ನುಗ್ಗಿ ಕಬ್ಬು , ಬಾಳೆ ತಿಂದು ಅವರ ಬೆಳೆಯನ್ನು ನಾಶ ಮಾಡಿದರೆ, ಇತ್ತ ಕ್ರೂರಪ್ರಾಣಿಗಳಾದ ಚಿರತೆ ಹಾಗೂ ಹುಲಿಗಳು ಜಾನುವಾರುಗಳು ಮತ್ತು ಸಾಕು ಪ್ರಾಣಿಗಳಾದ ನಾಯಿಗಳನ್ನು ಭೇಟೆಯಾಡಿ ತಮ್ಮ ಹಸಿವನ್ನು ನೀಗಿಸುಕೊಳ್ಳುತ್ತಿದೆ.
ಅದರಲ್ಲಿಯೂ ದಿನೇ ದಿನೇ ಚಿರತೆಯ ಅಟ್ಟಹಾಸಗಳು ಹೆಚ್ಚಾಗುತ್ತಿದ್ದು, ಕೇವಲ ಗ್ರಾಮಗಳಿಗೆ ಮಾತ್ರವಲ್ಲದೆ ನಗರ ಪ್ರದೇಶಗಳಿಗೂ ನುಗ್ಗಿ ಶಾಲೆ ಹಾಗೂ ಕಟ್ಟಡಗಳಲ್ಲಿ ಕಾಣಿಸಿಕೊಂಡು ಜನರಿಗೆ ಆತಂಕ ಮೂಡಿಸುತ್ತಿವೆ. ಇದೀಗ ಪ್ರಾಣಿಗಳು ಒಮ್ಮೆಲೇ ಬೇಟೆಯಾಡಿದ ಕ್ಷಣ ನೋಡಿ.