ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸಂಗೀತವೇ ಕಲಿಯದ ಶ್ರುತಿ ಮಗಳು ಹಾಡಿದ ರೀತಿ ನೋಡಿ…ಚಿಂದಿ ವಿಡಿಯೋ

2,087

Kannada Actress Shruti Daughter Gowri Shruti Singing her mother movie2119: ನಟಿ ಶೃತಿಯವರು ತಮಗೆಲ್ಲರಿಗೂ ತಿಳಿದಿರುವಂತೆ ಚಂದನವನದಲ್ಲಿ ಬಹಳನೇ ಹೆಸರು ಪಡೆದಂತಹ ನಟಿಯಾಗಿದ್ದಾರೆ. ಕನ್ನಡದಲ್ಲಿ ಬಹುತೇಕ ನಟರ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದು ತಮಗೆಲ್ಲರಿಗೂ ತಿಳಿದಿರುವಂತೆ ನಟಿ ಶ್ರುತಿ ಅವರಿಗೆ ಒಬ್ಬ ಮಗಳು ಕೂಡ ಇದ್ದಾಳೆ. ಹೌದು ಅವರ ಹೆಸರು ಗೌರಿ. ಈಗ ಮಗಳು ಹೇಗಿದ್ದಾಳೆ ಅಂದರೆ ನಿಮ್ಮಿಂದ ನಂಬಲು ಕೂಡ ಸಾಧ್ಯವಿಲ್ಲ.

ಗೌರಿ ಅವರು ತನ್ನ ತಾಯಿಯಂತೆ ಬಹಳ ಎತ್ತರಕ್ಕೆ ಬೆಳೆದು ನಿಂತಿದ್ದು ಶೃತಿ ಅವರ ಮಗಳು ಗೌರಿ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುತ್ತಾರೆ ಅವರಿಗೆ ವೈಲ್ಡ್ ಲೈಫ್ ಅಂದರೆ ತುಂಬಾನೇ ಇಷ್ಟ ಹಾಗಾಗಿ ಕೆಲವೊಮ್ಮೆ ಅವರು ಬಿಡುವಿನ ಸಮಯದಲ್ಲಿ ತನ್ನ ಕುಟುಂಬದೊಂದಿಗೆ ಸಫಾರಿ ಮಾಡುತ್ತಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ಗೌರಿಶ್ರುತಿ ಹಾಗೂ ಶ್ರುತಿ ಅವರ ತಂದೆ ಕೃಷ್ಣ ತಾಯಿ ರುಕ್ಮಿಣಿ ಮತ್ತು ರಾಧಾ ಅವರು ಕುಟುಂಬದೊಟ್ಟಿಗೆ ಬಹಳ ದಿನದ ಬಳಿಕ ಬಂಡೀಪುರ ಅರಣ್ಯಕ್ಕೆ ಹೋಗಿ ಪ್ರಾಣಿಗಳನ್ನು ವೀಕ್ಷಣೆ ಮಾಡುವುದರ ಮೂಲಕವಾಗಿ ಕೆಲವೊಂದಷ್ಟು ಮೋಜಿನ ಸಮಯವನ್ನು ಕಳೆದಿದ್ದರು. ಇನ್ನು ಈ ವಿಡಿಯೋ ಒಂದನ್ನು ಸ್ವತಃ ಶ್ರುತಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಅಭಿಮಾನಿಗಳೊಂದಿಗೆ ಇದನ್ನು ಶೇರ್ ಮಾಡಿ ಕೊಂಡಿದ್ದರು.

ಇದನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಸದ್ಯ ಈಗ ಶೃತಿ ಅವರ ಮಗಳು ಗೌರಿ ಹಾಡೊಂದಕ್ಕೆ ತಮ್ಮ ಧ್ವನಿಯನ್ನು ನೀಡಿದ್ದು ನಿಜಕ್ಕೂ ಈ ಹಾಡನ್ನು ಇವರು ಎಷ್ಟು ಮನಮೋಹಕವಾಗಿ ಹಾಡಿದ್ದಾರೆ ಅಂದರೆ ಈ ಹಾಡನ್ನು ಕೇಳುತ್ತಿದ್ದರೆ ನಿಜಕ್ಕೂ ಕೂಡ ಮನಸ್ಸು ಒಂದು ರೀತಿಯಲ್ಲಿ ಪ್ರಶಾಂತವಾಗುತ್ತದೆ.

ಅಷ್ಟೇ ಅಲ್ಲದೆ ಈ ಹಾಡನ್ನು ಕೇಳುತ್ತಿದ್ದರೆ ಪ್ರೊಫೆಷನಲ್ ಸಿಂಗರ್ ಯಾವ ರೀತಿಯಲ್ಲಿ ಹಾಡುತ್ತಾರೋ ಅದೇ ಮಾದರಿಯಲ್ಲಿ ಆಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಹೌದು ಸದ್ಯಕ್ಕೆ ಗೌರಿ ಅವರು ಹಾಡಿರುವಂತಹ ಈ ಹಾಡನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದು ಇದನ್ನು ನೋಡಿದಂತಹ ನೆಟ್ಟಿಗರು ಇವರ ವಾಯ್ಸ್ ಕೇಳಿ ನಿಜಕ್ಕೂ ಫಿದಾ ಆಗಿದ್ದಾರೆ ಅಂತನೇ ಹೇಳಬಹುದು.

ಇನ್ನು ಮುಂದೊಂದು ದಿನ ಗೌರಿ ಅವರು ಕೂಡ ಸಿಂಗರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅನಿಸಿಕೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದು ಏಕೆಂದರೆ ಅಷ್ಟು ಮನಮೋಹಕವಾಗಿ ಇವರು ಹಾಡನ್ನು ಹಾಡುತ್ತಿದ್ದಾರೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಗೌರಿ ಅವರು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಕಾರಣದಿಂದ ಸದ್ಯಕ್ಕೆ ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ.

ಆದರೆ ಸಿನಿಮಾ ಕ್ಷೇತ್ರದ ಬಗ್ಗೆ ಯಾವುದೇ ರೀತಿಯಾದಂತಹ ಅಪ್ಡೇಟ್ಸ್ ಅನ್ನು ಅವರು ನೀಡಿಲ್ಲ. ಇನ್ನು ಮುಂದೆ ತಮ್ಮ ತಾಯಿಯ ಮಾದರಿಯಲ್ಲಿ ಅವರು ಕೂಡ ಸಿನಿಮಾ ಕ್ಷೇತ್ರಕ್ಕೆ ಬರುತ್ತಾರೋ ಅಥವಾ ಇಲ್ಲವೋ ಎಂಬುದು ತಿಳಿದಿಲ್ಲ. ಆದರೂ ಸಹ ನೋಡುವುದಕ್ಕೆ ಇವರು ತುಂಬಾ ಚೆನ್ನಾಗಿದ್ದು ಚಂದನವನಕ್ಕೆ ಕಾಲು ಇಡುವುದರಲ್ಲಿ ಯಾವುದೇ ರೀತಿಯಾದಂತಹ ಅನುಮಾನವಿಲ್ಲ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಶ್ರುತಿ ಮತ್ತು ಮಹೇಂದರ್ ಇವರಿಬ್ಬರು ದೂರಾದ ಬಳಿಕ ಗೌರಿ ಅವರು ತಮ್ಮ ಜೀವನವನ್ನು ತಾಯಿ ಶೃತಿ ಅವರೊಟ್ಟಿಗೆ ನಡೆಸುತ್ತಿದ್ದಾರೆ.