ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಿದ್ಯಾಭ್ಯಾಸ ಹಿನ್ನೆಲೆ ತೀರ ರಹಸ್ಯವಾಗೇನೂ ಉಳಿದಿಲ್ಲ ಎನ್ನಬಹುದು. ಅದೆಷ್ಟೋ ಬಾರಿ ಅವರೇ ಓದಿದ್ದೇ ಎಸ್ಎಸ್ಎಲ್ಸಿ ಎಂದು ಹೇಳಿಕೊಂಡಿದ್ದಯ ಹೀಗಾಗಿ ದಾಸನ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ 10ನೇ ತರಗತಿಯಲ್ಲಿ ಎಷ್ಟು ಅಂಕ ಪಡೆದಿರಬಹುದು ಎನ್ನೋದನ್ನು ಕೆದಕುವುದಕ್ಕೆ ಹೋಗಿರಲಿಲ್ಲ.
ಸದ್ಯ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದು ಸರ್ಕಾರಿ ಶಾಲೆಯನ್ನು ಉಳಿಸುವ ಸಂದೇಶ ಹೊತ್ತು ಕ್ರಾಂತಿ ಮಾಡಲು ಹೊರಟಿದ್ದಾರೆ. ಹೌದು ಇದೇ ಸಿನಿಮಾದ ಪ್ರಚಾರದ ವೇಳೆ ದರ್ಶನ್ ಸರ್ಕಾರಿ ಶಾಲೆಯಲ್ಲಿಯೇ ಓದಿರುವ ಬಗ್ಗೆ ಹಾಗೂ ಎಸ್ಎಸ್ಎಲ್ಸಿ ಪಡೆದ ಅಂಕ ಎಷ್ಟು ಎನ್ನೋದನ್ನು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ರಿವೀಲ್ ಮಾಡಿದ್ದಾರೆ.
ನಟ ದರ್ಶನ್ ಹೆಚ್ಚು ಓದಿಲ್ಲ. ಓದಿದ್ದೇ 10ನೇ ತರಗತಿ ಎಂಬ ರಹಸ್ಯವನ್ನು ಕೂಡ ಉಳಿಸಿಕೊಂಡಿಲ್ಲ. ಇನ್ನು ಸರ್ಕಾರಿ ಶಾಲೆಯ ಹಿನ್ನೆಲೆ ಇಟ್ಟುಕೊಂಡೇ ಚಿತ್ರ ಮಾಡುತ್ತಿರುವುದರಿಂದ ತಾವು ಓದಿದ ಶಾಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ . ಹೌದು ನಾನು ಸರ್ಕಾರಿ ಶಾಲೆ ಹುಡುಗನೇ ಎಂದಿರುವ ದಚ್ಚು ಮೈಸೂರಿನಲ್ಲಿ ಓದಿದ್ದು. ಮೊದಲು ಟೆರೇಸಿಯನ್ ಸ್ಕೂಲ್ನಲ್ಲಿ ಓದಿದ್ದು ಜೆಎಸ್ಎಸ್ ಒಂದು ವರ್ಷ ಓದಿದೆ.
ಆ ನಂತರ ವೈಶಾಲಿಯಲ್ಲಿ ಓದಿದೆ. 10ನೇ ತರಗತಿವರೆಗೂ ಕೂಡ ಮೈಸೂರಿನಲ್ಲೇ ಓದಿದ್ದು 10ನೇ ತರಗತಿನೇ ಕೊನೆ ಎಂದು ದರ್ಶನ್ ಹೇಳಿದ್ದಾರೆ.ತಾನು ತುಂಬಾನೇ ಅವರೇಜ್ ಸ್ಟುಡೆಂಟ್ ಎಂದ ದರ್ಶನ್ ಒಂದು ವಿಷಯ ಅಂತಲ್ಲ. ಎಲ್ಲದನ್ನು ಕೂಡ ನೋಡಿದರೂ ಓಡಿ ಹೋಗೋಣ ಅಂತ ಅನಿಸುತ್ತಿತ್ತು. ಹೌದು ಕ್ಲಾಸ್ನಿಂದ ಹೊರಗಡೆ ನಿಲ್ಲುತ್ತಿದ್ದ ವಿದ್ಯಾರ್ಥಿನೇ ನಾನು.
ಇನ್ನು ಏನಾದರೂ ಒಂದು ಕಾರಣಕ್ಕೆ ಹೊರಗಡೆ ನಿಲ್ಲುತ್ತಿದ್ದೆ. ಆದರೆ ಕನ್ನಡದ ಒಂದು ಕಥೆ ತುಂಬಾನೇ ಇಷ್ಟ ಪಟ್ಟು ಓದುತ್ತಿದ್ದು ಗೋಪಾಲ ಕೃಷ್ಣರ ಕಥೆ. ಯಾವಾಗಲೂ ಅದನ್ನೇ ಓದುತ್ತಿದ್ದೆ. ನಮ್ಮ ಅಪ್ಪ ಲೋ ಯಾವಾಗಲೂ ಅದೇ ಓದುತ್ತಿದ್ದೆಯಲ್ಲೋ ಎಂದು ಹೇಳುತ್ತಿದ್ದರು. ಯಾಕಂದರೆ ಹುಲಿ ಬರುತ್ತಲ್ಲಾ ಅಂತ ಓದುತ್ತಿದ್ದೆ ಎಂದು ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಇನ್ನು ದರ್ಶನ್ ರವರು ಓದಿದ್ದು ಕೇವಲ 10ನೇ ತರಗತಿ ಅನ್ನೋದೇನೋ ನಿಜವಾಗಿದ್ದು ಆದರೆ ಎಸ್ಎಸ್ಎಲ್ಸಿಯಲ್ಲಿ ದರ್ಶನ್ ಎಷ್ಟು ಅಂಕ ಪಡೆದಿದ್ದರು? ಯಾವ್ಯಾವ ವಿಷಯಕ್ಕೆ ಎಷ್ಟು ಅಂಕ ಎಂಬ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ. 10ನೇ ತರಗತಿಯ ನನ್ನ ಮಾರ್ಕ್ಸ್ 210. ಅವಾಗೆಲ್ಲಾ 35, 35 ಅಲ್ಲದೆ ಹಿಂದಿಗೆ 80 ಮಾರ್ಕ್ಸ್ ಇದ್ದು ಎಲ್ಲಾ ಒಟ್ಟು ಸೇರಿಸಿದರೆ 210 ಅಂಕ.
ನಮ್ಮ ಮನೆಯವರು ನನ್ನನ್ನು ಕರೆದುಕೊಂಡು ಹೋಗಿ ಮೆಕಾನಿಕಲ್ ಡಿಪ್ಲೊಮಾಗೆ ಹಾಕಿದ್ದು ಜೆಎಸ್ಎಸ್ ಪಾಲಿಟಿಕ್ಸ್ನಲ್ಲಿ ಸೇರಿಸಿದರು. 6 ತಿಂಗಳು ಹೆಂಗೋ ಕಷ್ಟ ಪಟ್ಟು ಹೋದೆ. ಆ ಬಳಿಕ ನನ್ನ ಕೈಯಲ್ಲಿ ಆಗಲ್ಲ ಇದು ಅಂತ ಕೈ ಮುಗಿದುಬಿಟ್ಟೆ ಎಂದು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಶಿಕ್ಷಕರು ಯಾರೂ ಸ್ಟ್ರಿಕ್ಟ್ ಇರಲಿಲ್ಲ ಎಂದಿರುವ ದರ್ಶನ್ ಪಿಕೆ ಮಿಸ್ ಅಂತ ಇದ್ದರು.
ಅವರು ಬಂದಾಗ ಸ್ವಲ್ಪ ಗಂಭೀರವಾಗಿರುತ್ತಿದ್ದು ಇನ್ನೊಬ್ಬರು ಚಂದ್ರಶೇಖರ್ ಸರ್ ಎಂದು ಇದ್ದರು ಅವರು ಬಂದರೆ ನಾವು ಹೆಸರುತ್ತಿದ್ದೆವು. ಯಾಕಂದರೆ ಮೊದಲು ಒದೆ ಬೀಳುತ್ತಿದ್ದದ್ದು ನಮಗೆನೇ. ಯಾಕಂದರೆ ತುಂಬಾ ತೀಟೆ ಮಾಡುತ್ತಿದ್ದೆವು. ಆದರೆ 7ನೇ ತರಗತಿಯಲ್ಲಿ ಮಾತ್ರ ಚೆಂಪಕಾ ಮಿಸ್ ಅಂತ ಇದ್ದು ಅವರು ಸ್ಕೂಲ್ನಲ್ಲಿ ನನ್ನ ಫೇವರಿಟ್ ಮಿಸ್. ಯಾಕಂದರೆ ಅವರು ಬಹಳ ಸಾಫ್ಟ್ ಇದ್ದರು ಎಂದು 10ನೇ ತರಗತಿವರೆಗಿನ ಶಿಕ್ಷಣದ ಬಗ್ಗೆ ಮಾತಾಡಿದ್ದಾರೆ.